ಮೈಸೂರು : ವೇಶ್ಯಾ ವಾಟಿಕೆ ನಡೆಯುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.ಸ್ಪಾ ಹೆಸರಿನಲ್ಲಿ ಆನ್ ಲೈನ್ ಮೂಲಕ ಗ್ರಾಹಕರನ್ನು ಸೆಳೆದು ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧುವಾರ ಸಂಜೆ ವಿಜಯನಗರ ಠಾಣೆ ಇನ್ಸಪೆಕ್ಟರ್ ರವಿಶಂಕರ್ ನೇತೃತ್ವದ ತಂಡ, ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿ ಹನಿವೆಲ್ ಸ್ಪಾ ಮೇಲೆ ದಾಳಿ ನಡೆಸಿತು.ಈ ವೇಳೆ ಇಬ್ಬರು ಯುವತಿರೊಂದಿಗೆ ಗ್ರಾಹಕರೂ ಕೂಡ ಇದ್ದರೆಂದು ಹೇಳಲಾಗಿದ್ದು, ಮೈಸೂರಿನವರೇ ಆದ ಇಬ್ಬರೂ ಯುವತಿಯರನ್ನು ರಕ್ಷಿಸಿದ ಪೊಲೀಸರು, ಸಿದ್ದಾರ್ಥನಗರದಲ್ಲಿ ವಾಸವಿದ್ದು, ಇಲ್ಲಿ ಸ್ಪಾ ನಡೆಸುತ್ತಿರುವ ಸವಿತಾ ಮತ್ತು ಅಲ್ಲಿನ ಸಿಬ್ಬಂದಿ ಸಾಗರ್ ನನ್ನು ಬಂಧಿಸಿ, 10 ಸಾವಿರ ನಗದು ಹಾಗೂ ಕಾಂಡೋಮ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೂ ಓಳಪಡಿಸಲಾಗಿದೆ.