
ಉನ್ನಾವೋ;ಯುವಕನೋರ್ವ ಮತ್ತು ಬರುವ ಮಾತ್ರೆಗಳನ್ನು ತೆಗೆದುಕೊಂಡು ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್ ಮಾಡಿದ್ದು ತೀವ್ರ ರಕ್ತ ಸ್ರಾವದಿಂದ ವಿದ್ಯಾರ್ಥಿನಿ ಮೃತಪಟ್ಡಿದ್ದಾಳೆ.
ಘಟನೆಗೆ ಸಂಬಂಧಿಸಿ ರಾಜ್ ಗೌತಮ್(25) ಎಂಬಾತನಿಗೆ ಪೊಲೀಸರು ಬಂಧಿಸಿದ್ದಾರೆ.ಆತ ಅತ್ಯಾಚಾರ ಮಾಡುವ ಮುನ್ನು ಮಾತ್ರೆಗಳನ್ನು ತೆಗೆದುಕೊಂಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.ಬಲವಂತವಾಗಿ ಹೆಚ್ಚು ಸಮಯಗಳ ಕಾಲ ಲೈಂಗಿಕ ಕೃತ್ಯವೆಸಗಿದ್ದಾನೆ.ವಿದ್ಯಾರ್ಥಿನಿ ಇದರಿಂದ ಮೂರ್ಛೆ ಹೋಗಿದ್ದು,ತೀವ್ರ ರಕ್ತ ಸ್ರಾವವಾಗುವುದನ್ನು ಕಂಡು ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಮನೆಗೆ ಸಂತ್ರಸ್ಥೆಯ ತಂಗಿ ಬಂದು ನೋಡಿದಾಗ ಆಕೆ ಬೆಡ್ ಮೇಲ ಮೂರ್ಛೆ ಹೋದ ಸ್ಥಿತಿಯಲ್ಲೇ ಇದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೋಸ್ಟ್ ಮಾರ್ಟಂನಲ್ಲಿ ಅತ್ಯಾಚಾರವಾಗಿರುವುದು ಸಾಬೀತಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಅಧಿಕ ರಕ್ತ ಸೋರಿಕೆಯಾಗಿ ಆಕೆಯ ಖಾಸಗಿ ಅಂಗಕ್ಕೆ ಗಂಭೀರವಾಗಿ ಗಾಯವಾಗಿದ್ದ ಕಾರಣ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.