ವಿಟ್ಲ: ಅನ್ಯಮತೀಯ ಯುವಕನ ಮುಂದೆ ಧರಣಿ ಕೂತ ಯುವತಿ

ವಿಟ್ಲ: ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬಂದು ಯುವಕನನ್ನು ತನಗೆ ಒಪ್ಪಿಸುವಂತೆ ಪ್ರತಿಭಟನೆಗೆ ಕೂತ ವಿಚಿತ್ರ ಘಟನೆ ಮಂಗಳವಾರ ನಡೆದಿದೆ.

ಯುವತಿಯನ್ನು ಮನವೂಲಿಸಲು ವಿಫಲರಾದ ವಿಟ್ಲ ಪೊಲೀಸರು ರಾತ್ರಿ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ.

ಉತ್ತರ ಭಾರತದ ಜಲಂದರ್ ಮೂಲದ ಯುವತಿ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ.

ಮಂಗಳವಾರ ಸಾಯಂಕಾಲ ಅಡ್ಯನಡ್ಕದ ಮನೆ ಬಳಿಗೆ ಬಂದ ಸಂತ್ರಸ್ತ ಯುವತಿಗೆ ಪ್ರೀತಿ ಮಾಡುವುದಾಗಿ ಹೇಳಿದ ಯುವಕ ಸಿಕ್ಕಿಲ್ಲ. ಇದರಿಂದ ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದು ಮನೆಯ ಮುಂದೆ ಕೂತಿದ್ದಾಳೆ. ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಿಟ್ಲ ಠಾಣೆಯಿಂದ ಆಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.