ಪಂಪ್ ವೆಲ್ ನಲ್ಲಿ ನೋಟಿನ ಬಂಡಲ್ ಪತ್ತೆ ಪ್ರಕರಣ;ವಾರಸುದಾರ ಪೊಲೀಸ್ ಠಾಣೆಗೆ ಹಾಜರ್

ಮಂಗಳೂರು: ಪಂಪ್‌ವೆಲ್‌ನಲ್ಲಿ ಪತ್ತೆಯಾಗಿದ್ದ ನೋಟಿನ ಬಂಡಲ್‌ನ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದ್ದು, ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಪಂಪ್‌ವೆಲ್ ಬಸ್ ನಿಲ್ದಾಣದ ಬಳಿ ನೋಟಿನ ಬಂಡಲ್‌ಗಳು ನವಂಬರ್ 26ರಂದು ಶಿವರಾಜ್ ಮತ್ತು ತುಕಾರಾಮ್ ಎಂಬವರಿಗೆ ಸಿಕ್ಕಿದ್ದು, ಶಿವರಾಜ್ ಬಳಿ ಇದ್ದ 49,000 ರೂ.ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದರು. ಆದರೆ ಇದೀಗ ವ್ಯಕ್ತಿಯೊಬ್ಬರು ಠಾಣೆಗೆ ತೆರಳಿ ತಾನೇ ಆ ಹಣದ ವಾರಸುದಾರ ಎಂದು ಹೇಳಿಕೊಂಡಿದ್ದು ತನಿಖೆ ನಡೆಯುತ್ತಿದೆ.

Check Also

ಭಟ್ಕಳ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ, 4 ಮೀನುಗಾರರ ರಕ್ಷಣೆ

ಭಟ್ಕಳ: ಕರಾವಳಿ ಜಿಲ್ಲೆ ಉತ್ತರ ಕನ್ನಡ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಈ ಮಧ್ಯೆ …

Leave a Reply

Your email address will not be published. Required fields are marked *

You cannot copy content of this page.