ವಿಟ್ಲ: ವಿಟ್ಲ ಬಸ್‌ಸ್ಟ್ಯಾಂಡ್‌ನಲ್ಲಿ ಖಾಸಗಿ ಬಸ್ ಡ್ರೈವರ್‌ಗಳ ಮಧ್ಯೆ ಹೊಡೆದಾಟ ನಡೆದಿದೆ.
ವಿಟ್ಲ ಬಸ್ ಸ್ಟ್ಯಾಂಡ್‌ನಲ್ಲೆ ಟೈಮಿಂಗ್ಸ್ ವಿಚಾರದಲ್ಲಿ ಇಂದು ಬೆಳಿಗ್ಗೆ ಮಣಿಕಂಠ ಬಸ್ ಮತ್ತು ಮಹೇಶ್ ಬಸ್ ಡ್ರೈವರ್‌ಗಳು ಹೊಡೆದಾಡುಕೊಂಡಿದ್ದಾರೆ. ವಿಪರ್ಯಾಸ ವೆಂದರೆ ಪ್ರಯಾಣಿಕರು ಬಸ್‌ನಲ್ಲಿ ಇರುವಾಗಲೇ ಸಾರ್ವಜನಿಕರ ಎದುರಲ್ಲೇ ಹೊಡೆದಾಡುಕೊಂಡಿದ್ದಾರೆ. ಮಾಹಿತಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರೆ. ದಿನೇ ದಿನೇ ಖಾಸಗಿ ಬಸ್‌ಗಳ ಜಗಳ, ಹೊಡೆದಾಟ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ವಾರಕ್ಕೊಮ್ಮೆ ವಿಟ್ಲಕ್ಕೆ ಬರುವ RTO ಅಧಿಕಾರಿಗಳು ಜೇಬು ತುಂಬಿಸಿಕೊಂಡು ಹೋಗುತ್ತಿರುವುದೇ ವಿನಃ ಇಂತಹ ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದೇ ವಿಪರ್ಯಾಸ ಎಂದು ಸಾರ್ವಜನಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.