ಮಂಗಳೂರು: ಕುವೈಟ್ ನಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ ಎಂಬವರು ದಿನಾಂಕ 09-01-2023 ರಂದು ಕುವೈಟ್ ನಲ್ಲಿ ಹೃದಯಾಘಾತದಿಂದ ನಿಧನರಾಗಿರುತ್ತಾರೆ.
ಇವರ ಮೃತದೇಹವನ್ನು ಊರಿಗೆ ಕಳಿಸುವ ಪ್ರಯತ್ನವನ್ನು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಮ್ಯಾಗ್ನೆಟ್ ತಂಡವು ಮಾಡುತಿದ್ದು ಅದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದು
ದಿನಾಂಕ 11-01-2023 ಬುಧವಾರ ದಂದು ಮೃತದೇಹ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಮ್ಯಾಗ್ನೆಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಭಾರತದ ಅನಿವಾಸಿ ಸಂಘಟನೆ ಕೆ.ಕೆ.ಎಂ.ಎ ಮ್ಯಾಗ್ನೆಟ್ ತಂಡವು ಜಾತಿ ಮತ ನೋಡದೆ ಈ ರೀತಿಯ ಹಲವಾರು ಮೃತದೇಹಗಳನ್ನು ಊರಿಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.