ಒಂದು ಸಮುದಾಯದ ಸದಸ್ಯರು ಸಂಘಟಿತರಾಗಿ ಎಲ್ಲರೂ ಸೇರಿಕೊಂಡು ನಮ್ಮಲ್ಲಿ ಅವಶ್ಯವಿರುವ ಆಚಾರ ವಿಚಾರಗಳನ್ನು ಹಂಚಿಕೊಂಡು ಮಕ್ಕಳಿಗೆ ಅದರ ಮಹತ್ವವನ್ನು ತಿಳಿ ಹೇಳುವುದರ ಮೂಲಕ ನಮ್ಮ ನಮ್ಮ ಸಮುದಾಯದ ಬಗ್ಗೆ ಗೌರವ ಮೂಡುವಂತೆ ಮಾಡಿದರೆ ಮುಂದೆ ಅವರು ಯೌವನದಲ್ಲಿ ದಾರಿ ತಪ್ಪದಂತೆ ಎಚ್ಚರ ವಹಿಸಲುಈ ಜಾಗೃತಿ ಅನುಕೂಲವಾಗುತ್ತದೆ ಎಂದು ಉಡುಪಿ ನಗರಸಭಾ ಸದಸ್ಯೆ ರಜನಿಹೆಬ್ಬಾರ್ ಅಭಿಪ್ರಾಯ ಪಟ್ಟರು .ಕೊಡವೂರು ಬ್ರಾಹ್ಮಣ ಮಹಾಸಭಾದ ದೀಪಾವಳಿ ಪರ್ಬದಲ್ಲಿ ವಿಪ್ರಶ್ರೀಯಲ್ಲಿ ಆಯೋಜಿಸಿದ್ದ ಒಳಾಂಗಣ ಆಟೋಟ ಸ್ಪರ್ಧೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಒಂದೇ ಸೂರಿನಡಿ ಎಲ್ಲಾ ವಯೋಮಾನದ ಮಕ್ಕಳನ್ನು, ಹಿರಿಯರನ್ನು ಒಟ್ಟುಗೂಡಿಸಿಕೊಂಡು ನಡೆಸಿಕೊಡುವ ಈ ಒಳಾಂಗಣ ಕ್ರೀಡೆಗಳು ಸಮುದಾಯದ ಮಕ್ಕಳಿಗೆ ಹಿರಿಯರೊಂದಿಗೆ ಬೆರೆಯುವ ಅವಕಾಶ ಮಾಡಿಕೊಡುತ್ತದೆ ಎಂದು ಸಂತಸ ಪಟ್ಟರು. ಬ್ರಾಹ್ಮಣ ಮಹಾಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿದರು ಮೂಡುಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಶ್ರೀಶ ಭಟ್ ಹಾಗು ಕೊಡವೂರು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷರಾದ ಪಿ.ಗುರುರಾಜ ರಾವ್ ಗೋವಿಂದ ಐತಾಳ್ ಉಪಸ್ಥಿತರಿದ್ದರು . ಭಾರತಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪವಿತ್ರ ಸಾಮಗ ವಂದಿಸಿದರು .ಬಳಿಕ ವಿಪ್ರ ಮಕ್ಕಳಿಗೆ ,ವಿಪ್ರ ಮಹಿಳೆಯರಿಗೆ, ವಿಪ್ರ ಪುರುಷರಿಗೆ ವಿವಿಧ ರೀತಿಯ ಒಳಾಂಗಣ ಕ್ರೀಡೆಯು ನಡೆಯಿತು.
Check Also
ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …