![WhatsApp Image 2023-02-07 at 3.02.09 PM](https://i0.wp.com/thrishulnews.com/wp-content/uploads/2023/02/WhatsApp-Image-2023-02-07-at-3.02.09-PM.jpeg?fit=600%2C400&ssl=1?v=1675762347)
![](https://i0.wp.com/thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg?fit=1050%2C600&ssl=1)
ಮೂಡುಬಿದಿರೆ;ಟಿಪ್ಪರ್ ಚಲಾಯಿಸಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿ ಟಿಪ್ಪರ್ ಚಾಲಕ ನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಕೋಟೆಬಾಗಿಲಿನ ನಿವಾಸಿ ಹಾರೀಸ್ ಬಂಧಿತ ಆರೋಪಿ.ಈತ ಕಳೆದ ಶುಕ್ರವಾರ ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಅವರ ಜೊತೆ ನಡೆದ ವಾಗ್ವಾದದ ಬಳಿಕ ಪೈಯಾಝ್ ಗೆ ರಾಡ್‌ನಿಂದ ತಲೆಗೆ ಹೊಡೆದು, ಅವರು ಕೆಳಗೆ ಬಿದ್ದಾಗ ಅವರ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ್ದ.
ಘಟನೆ ಬಳಿಕ ಟಿಪ್ಪರ್ ಚಾಲಕ ತಲೆ ಮರೆಸಿಕೊಂಡಿದ್ದ ಟಿಪ್ಪರ್ ಚಾಲಕ ಹಾರೀಸ್‌ನನ್ನು ಸೆರೆ ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿ ಬಲೆ ಬೀಸಿದ್ದರು.ಇದೀಗ ಉಳಾಯಿ ಬೆಟ್ಟುವಿನಲ್ಲಿ ಹಾರೀಸ್ ಗೆ ಬಂಧಿಸಿದ್ದಾರೆ.
ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.