ಶಿವಮೊಗ್ಗ: ಸೈಕಲ್ ಹೊಡೆಯುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ನಡೆದಿದೆ.
ಸೈಕಲ್‌ನಲ್ಲಿ ಬರುತ್ತಿದ್ದ ಬಾಲಕ ಸನತ್ (7) ಮೇಲೆ ಏಕಾಏಕಿ ಗೂಳಿ ದಾಳಿ ಮಾಡಿದೆ. ಮನೆ ಸಮೀಪದ ಅಂಗಡಿಯಿಂದ ಹಾಲು ತರುವಾಗ ಗೂಳಿ ಏಕಾಏಕಿ ಬಾಲಕನ ಮೇಲೆರಗಿದೆ. ಬಾಲಕನನ್ನ ಕೊಂಬಿನಿಂದ ಎತ್ತಿ ಬಿಸಾಕಿ, ಚೆನ್ನಾಗಿ ತಿವಿದಿದೆ. ಈ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಗೂಳಿ ದಾಳಿಯಲ್ಲಿ ಬಾಲಕನ ತಲೆ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ನೆರವಿಗೆ ಬಂದಿದ್ದರಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.