ರೋಗಿಗೆ ಯೂರಿನ್ ಬ್ಯಾಗ್ ಹಾಕುವ ಬದಲು ಸ್ಪ್ರೈಟ್ ಬಾಟಲಿ ಬಳಸಿದ ಜಿಲ್ಲಾಸ್ಪತ್ರೆ ಸಿಬ್ಬಂದಿ

ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಅಷ್ಟಿಷ್ಟಲ್ಲ. ಸ್ವಚ್ಚತೆ ಇರಲ್ಲ. ನೂರೆಂಟು ಸಮಸ್ಯೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಗೋಚರವಾಗುತ್ತವೆ. ಅಷ್ಟೇ ಅಲ್ಲದೇ, ವೈದ್ಯರು ಕೂಡಾ ಒಂದಲ್ಲೊಂದು ಎಡವಟ್ಟು ಮಾಡುತ್ತಿರುತ್ತಾರೆ. ಅದಕ್ಕೆ ತಾಜಾ ಉದಾಹರಣ ಈ ಘಟನೆ ಸಾಕ್ಷಿ. ಹೌದು, ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಬಿಹಾರದ ಆಸ್ಪತ್ರೆಯ ಸಿಬ್ಬಂದಿ ಒಳರೋಗಿಯಾಗಿ ದಾಖಲಾಗಿರುವ ವ್ಯಕ್ತಿಗೆ ಮೂತ್ರ ಚೀಲ(ಯೂರಿನ್‌ ಬ್ಯಾಗ್‌) ಹಾಕುವ ಬದಲು ಸ್ಪ್ರೈಟ್ ಬಾಟಲಿಯನ್ನು ಬಳಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಜಾಮುನೈ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ರೋಗಿಯ ತಪಾಸಣೆ ಮಾಡಿದ್ದ ವೈದ್ಯರು, ರೋಗಿಗೆ ಯೂರಿನ್‌ ಬ್ಯಾಗ್‌ಅನ್ನು ಜೋಡಿಸುವಂತೆ ನರ್ಸ್‌ಗೆ ಸೂಚಿಸಿದ್ದಲ್ಲದೆ, ಇನ್ಸುಲಿನ್‌ ಚುಚ್ಚುಮದ್ದನ್ನು ನೀಡಿ ಗ್ಯಾಸ್‌ ಪೈಪ್‌ ಜೋಡಿಸುವ ಮೂಲಕ ಅವರಿಗೆ ಪ್ರಜ್ಞೆ ತರಿಸುವ ಪ್ರಯತ್ನವನ್ನು ವೈದ್ಯರು ಮಾಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಅಗತ್ಯ ಉಪಕರಣಗಳು ಹಾಗೂ ಔಷಧಗಳ ಕೊರತೆ ಇದ್ದ ಕಾರಣಕ್ಕೆ ರೋಗಿಗೆ ಯೂರಿನ್‌ ಬ್ಯಾಗ್‌ ಅನ್ನು ಜೋಡಿಸುವ ಬದಲು, ಸ್ಪ್ರೈಟ್ ಬಾಟಲಿಯನ್ನು ಜೋಡಿಸಿ ನಿರ್ಲಕ್ಷ್ಯ ತೋರಿದ್ದಾರೆ. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ.

Check Also

ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯ

ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಉಡುಪಿಯ ಜಾಕೀರ್‌ ಹುಸೇನ್‌ ಅವರು ರಿಕ್ಷಾದಲ್ಲಿ ಅಂಬಾಗಿಲು …

Leave a Reply

Your email address will not be published. Required fields are marked *

You cannot copy content of this page.