ಮಂಗಳೂರು: ಮುಂಬಯಿ- ಮಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರ ಒತ್ತಡವನ್ನು ಗಮನಿಸಿ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್ ಮತ್ತು ಮುಂಬಯಿಯ ಲೋಕಮಾನ್ಯ ತಿಲಕ್ ನಿಲ್ದಾಣದ ಮಧ್ಯೆ ವಿಶೇಷ ಸಾಪ್ತಾಹಿಕ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂಬರ್ 01453 ಲೋಕಮಾನ್ಯ ತಿಲಕ್- ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಮುಂಬಯಿಯಿಂದ ಡಿ. 9, 16, 23, 30 ಮತ್ತು ಜನವರಿ 6 ರ ಶುಕ್ರವಾರಗಳಂದು ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲಪಲಿದೆ. ನಂಬರ್ 01454 ಮಂಗಳೂರು ಜಂಕ್ಷನ್- ಲೋಕಮಾನ್ಯ ತಿಲಕ್ ಮುಂಬಯಿ ಸಾಪ್ತಾಹಿಕ ರೈಲು ಮಂಗಳೂರು ಜಂಕ್ಷನ್‌ನಿಂದ ಡಿ. 10, 17, 24, 31 ಮತ್ತು ಜನವರಿ 7 ರ ಶನಿವಾರಗಳಂದು ಸಂಜೆ 6.45ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.25ಕ್ಕೆ ಮುಂಬಯಿ ತಲಪಲಿದೆ. ಈ ರೈಲಿಗೆ ಥಾಣೆ, ಪನ್ವೆಲ್, ರೋಹ, ಖೇಡ್, ಚಿಪ್ಲುನ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವ್ಲಿ, ಸಿಂಧುದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಮ್, ಕರ್ಮಾಲಿ, ಮಡಗಾಂವ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆ ಇರುತ್ತದೆ. ಹಾಗೆಯೇ ಒಂದು ರೈಲಿನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ತಿರುವನಂತಪುರಂ ರೈಲ್ವೇ ವಿಭಾಗದ ಕೊಚ್ಚುವೇಲಿ ಯಾರ್ಡ್ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದೋರ್- ಕೊಚ್ಚುವೇಲಿ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಇಂದೋರ್‌ನಿಂದ ಡಿಸೆಂಬರ್ 6ರಂದು ರಾತ್ರಿ 9.40ಕ್ಕೆ ಹೊರಡುವ ನಂಬರ್ 20932 ರೈಲು ಮಂಗಳೂರು ಜಂಕ್ಷನ್ ಹಾಗೂ ಕೊಚ್ಚುವೇಲಿ ಮಧ್ಯೆ ಆಂಶಿಕವಾಗಿ ರದ್ದಾಗಿರುತ್ತದೆ. ಕೊಚ್ಚುವೇಲಿಯಿಂದ ಇಂದೋರ್‌ಗೆ ಡಿಸೆಂಬರ್ 9ರಂದು ಬೆಳಗ್ಗೆ 11.10ಕ್ಕೆ ಹೊರಡಲಿರುವ ನಂಬರ್ 20931 ರೈಲು ಕೊಚ್ಚುವೇಲಿ ಹಾಗೂ ಮಂಗಳೂರು ಮಧ್ಯೆ ರದ್ದಾಗಲಿದೆ. ಬದಲಿಗೆ ಅದು ಮಂಗಳೂರು ಜಂಕ್ಷನ್‌ನಿಂದ ರಾತ್ರಿ 10 ಗಂಟೆಗೆ ಹೊರಡಲಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.