ವಿಟ್ಲ: ವಯಸ್ಸು 5 ಪಟ ಪಟನೇ ಮಾತನಾಡುವ ಪುಟ್ಟ ಹುಡುಗಿ, ಇತ್ತೀಚೆಗೆ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ನಿರೂಪಣೆಯ ಮೂಲಕ ಎಲ್ಲರ ಮನಗೆದ್ದ ಪುಟ್ಟ ಪ್ರತಿಭೆ ಕಾರುಣ್ಯ ಜನನಿ.
ಕಳೆದ ಹಲವಾರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ವಿಧಿವಶಳಾದಳು.
ಹೇ ವಿಧಿಯೇ ನಿನ್ನ ಕ್ರೂರ ಕಣ್ಣು ಈ ಪುಟ್ಟ ಬಾಲಕಿ ಮೇಲೆ ಏಕೆ ಬಿತ್ತು! ಇನ್ನೂ ಪ್ರಪಂಚವನ್ನೇ ನೋಡದ ಪುಟ್ಟ ಕಂದಮ್ಮನನ್ನು ಏಕೆ ಕರೆದುಕೊಂಡೆ,ನಿಜಕ್ಕೂ ದೇವರು ಇದ್ದಾನಾ?! ಈ ಮಾತುಗಳನ್ನು ಈ ಸಾವಿನ ಸುದ್ದಿ ತಿಳಿದ ಪ್ರತಿಯೊಬ್ಬರೂ ಹೇಳಿಕೊಂಡಿರುತ್ತಾರೆ.
ಕಾರುಣ್ಯ ಜನನಿ ಕುಟುಂಬಕ್ಕೆ ಆ ಭಗವಂತ ನೋವನ್ನಾದರೂ ಭರಿಸುವ ಶಕ್ತಿ ಕರುಣಿಸಲಿ.
ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯ ಮೂಲಕ ಬಾಲ ಪ್ರತಿಭೆಯಾಗಿ ಕನ್ಯಾನ ಗ್ರಾಮಕ್ಕೆ ಕೀರ್ತಿ ತಂದ ಗಿರಿಜಾ ಜಯಪಾಲ ದಂಪತಿಗಳ ಪುತ್ರಿ ಕಾರುಣ್ಯ ಜನನಿ ಎಂಬ ಪುಟ್ಟ ಬಾಲಕಿ ಹಲವಾರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದೆ.
ಬಾಲಕಿಯ ಅಗಲಿಕೆಗೆ ಕುಟುಂಬಸ್ಥರು ಸೇರಿದಂತೆ ಕನ್ಯಾನ ಗ್ರಾಮವೇ ಶೋಕ ಸಾಗರವಾಗಿದೆ.