ಉಡುಪಿ: ಉಡುಪಿ ನಗರದ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರು ಫೆಬ್ರವರಿ24ರ ಮಧ್ಯಾಹ್ನದಿಂದ ಫೆಬ್ರವರಿ26ರ ಬೆಳಗ್ಗಿನ ನಡುವೆ ಈ ಕಳವಿಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಬ್ಯಾಂಕಿನ ಮಹಡಿಗೆ ಹೋಗುವ ಮೆಟ್ಟಿಲು ಬಳಿಯ ಗೇಟಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಬ್ಯಾಂಕಿನ ಕಿಟಕಿಯ ಒಂದು ಬದಿಯ ಸರಳುಗಳನ್ನು ತುಂಡು ಮಾಡಿ ಒಳ ಪ್ರವೇಶಿಸಿದ್ದಾರೆ. ಬಳಿಕ ಬ್ಯಾಂಕಿನ ಎದುರಿನ ವರಾಂಡದಲ್ಲಿನ ಗೇಟ್‌ನ ಬೀಗ ಮುರಿದು, ಬ್ಯಾಂಕಿನ ಒಳಗೆ ಇದ್ದ ಗೋದ್ರೇಜ್ ಕಪಾಟು, ಕ್ಯಾಶ್ ಕೌಂಟರ್ ನಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.