ಮಂಗಳೂರು: ಉದ್ಯೋಗಕ್ಕೆ ತೆರಳಿದ್ದ ಯುವತಿ ನಾಪತ್ತೆ

ಮಂಗಳೂರು: ನಗರದ ಮಣಪ್ಪುರಂ ಫೈನಾನ್ಸ್‌ನ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ಕಾಣೆಯಾದ ಯುವತಿ. ಈಕೆ ಜ.16ರಂದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ತೆರಳಿದ್ದು, ಸಂಜೆ 6 ಗಂಟೆಯಾದರೂ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಸ್ಥೆಯ ಸಿಬ್ಬಂದಿಯವರಲ್ಲಿ ವಿಚಾರಿಸಿದಾಗಲೂ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ 5.6 ಅಡಿ ಎತ್ತರದ, ಬಿಳಿ ಮೈಬಣ್ಣದ, ದಪ್ಪಮುಖದ, ಸಾಧಾರಣ ಮೈಕಟ್ಟಿನ ಈಕೆ ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.ಮನೆಯಿಂದ ಹೊರಟು ಹೋದಾಗ ಹಸಿರು ಬಣ್ಣದ ಟಾಪ್ ಹಾಗೂ ಗೋಲ್ಡನ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಈಕೆಯನ್ನು ಕಂಡವರು ಸುರತ್ಕಲ್ ಠಾಣೆ (0824-2220540, 9480805360, 9480802345) ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ (0824-2220800) ಮಾಹಿತಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.