ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ತನಿಕಾ ಸಂಸ್ಥೆಗಳ ವಶದಲ್ಲಿರುವ ಶಾಫಿ ಬೆಳ್ಳಾರೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ (SDPI)ಯಿಂದ ಪುತ್ತೂರು ಟಿಕೆಟ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದೀಗ ರಾಜ್ಯದೆಲ್ಲೆಡೆ ಮುಂದಿನ ವಿಧಾನ ಸಭಾ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದ ಬೆನ್ನಲ್ಲೆ ಎಸ್‌ಡಿಪಿಐಯಿಂದ ಪುತ್ತೂರು ಟಿಕೆಟ್ ಘೋಷಣೆ ಮಾಡಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಶಾಫಿ ಎಸ್‌ಡಿಪಿಐ ಟಿಕೆಟ್ ನೀಡಿದೆ. ಶಾಫಿ ಬೆಳ್ಳಾರೆ ಕೇಂದ್ರ ತನಿಖಾ ಸಂಸ್ತೆಯ ವಶದಲ್ಲಿದ್ದಾರೆ, ಜೈಲಿನಲ್ಲಿದ್ದುಕೊಂಡೆ ಚುನಾವಣೆಗೆ ಸ್ಪರ್ಧಿಸಲು ಸ್ಕೆಚ್ ಹಾಕಿದ್ದಾರೆ. ಇದೀಗ ಬೆಳ್ಳಾರೆ ನಗರದಲ್ಲಿ ಮತ್ತೊಂದು ಆತಂಕಕ್ಕೆ ಮನೆಮಾಡಿದಂತಾಗಿದೆ.
ಜುಲೈ 26 ರಂದು ಏಕಾಏಕಿ ಪ್ರವೀಣ್ ತಲೆ ಮೇಲೆ ತಲವಾರು ಬೀಸಿ ಹತ್ಯೆ ಮಾಡಿದ್ದಾರೆ. ಬೈಕ್ ಮೂಲಕ ಬಂ ದಿದ್ದ ಮೂವರ ತಂಡ ಈ ಕೃತ್ಯ ನಡೆಸಿತ್ತು. ಕೊಲೆಯಾದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.