![1](https://i0.wp.com/thrishulnews.com/wp-content/uploads/2023/01/1.jpg?fit=821%2C629&ssl=1?v=1673506445)
![](https://i0.wp.com/thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg?fit=1050%2C600&ssl=1)
ಸುರತ್ಕಲ್ : ಸುರತ್ಕಲ್ ಠಾಣಾ ವ್ಯಾಪ್ತಿಯ ಸದಾನಂದ ಹೋಟೆಲ್ ಪಕ್ಕದಲ್ಲಿ ಅಂದಾಜು ಮೂರು ನಾಲ್ಕು ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದೆ.
ಪೋಷಕರನ್ನು ಕಳೆದುಕೊಂಡ ಮಗುವನ್ನು ಗಮನಿಸಿದ ಸಾರ್ವಜನಿಕರು ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಪೊಲೀಸರು ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ, ಮಗುವನ್ನು ಕಳೆದುಕೊಂಡವರು ಸುರತ್ಕಲ್ ಪೊಲೀಸ್ ಠಾಣೆಯ ಫೋನ್ ನಂಬರ್ ಗೆ ಸಂಪರ್ಕಿಸಲು ಮಂಗಳೂರು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ :
ಸುರತ್ಕಲ್ ಠಾಣಾ ಫೋನ್ ನಂಬರ್- 08242220540
ಪೊಲೀಸ್ ನಿರೀಕ್ಷಕರ ಮೊಬೈಲ್ ನಂಬರ್- 9480805360
ಪೊಲೀಸ್ ಉಪನಿರೀಕ್ಷಕರು ಮೊಬೈಲ್ ನಂಬರ್- 9480802344
ನಗರ ನಿಸ್ತಂತು ನಿಯಂತ್ರಣ ಕೊಠಡಿ ಮಂಗಳೂರು ನಗರ ಫೋನ್ ನಂಬರ್- 9480802321
ಮಹಿಳಾ ಸಮನ್ವಯ ಅಧಿಕಾರಿ -9448332713