December 9, 2024
n46088143616734077039990b6e5e66ef819ac2f2073c20876d783ded404fd945557f483691d25b672a26f9

ಮಂಗಳೂರು: ನಗರದ ಬಹುಮಹಡಿ ಕಟ್ಟಡದವೊಂದರ ಫ್ಲ್ಯಾಟ್‌ನಲ್ಲಿ ಮಂಗಳವಾರ ಬೆಂಕಿ ಅವಘಡ ಉಂಟಾಗಿದೆ. ಆದರೆ ಅದೃಷ್ಟವಶಾತ್‌ ಅನಾಹುತ ಸಂಭವಿಸಿಲ್ಲ.

ಜೈಲ್‌ರೋಡ್‌-ಕದ್ರಿ ಕಂಬಳ ರಸ್ತೆಯ 5 ಮಹಡಿಯ ಕಟ್ಟಡವೊಂದರ 2ನೇ ಮಹಡಿಯ ಫ್ಲ್ಯಾಟ್‌ನ ಬೆಡ್‌ರೂಮ್‌ನಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು.

ಸ್ಥಳಕ್ಕೆ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸಿದರು. ಹಾಸಿಗೆ ಮತ್ತಿತರ ಪರಿಕರಗಳು ಬೆಂಕಿಗಾಹುತಿಯಾಗಿವೆ.

ನಿವಾಸಿಗಳು ಸುರಕ್ಷಿತ
ಘಟನೆ ಸಂಭವಿಸಿದ ಫ್ಲ್ಯಾಟ್‌ನಲ್ಲಿ ಯಾರೂ ಇರಲಿಲ್ಲ. ಪಕ್ಕದ ಫ್ಲ್ಯಾಟ್‌ಗಳ ನಿವಾಸಿಗಳು ಹೊರಗೆ ಬಂದಿದ್ದರು. ಬೆಂಕಿ ಬೆಡ್‌ರೂಮ್‌ನಿಂದ ಬೇರೆ ಕಡೆಗೆ ಹಬ್ಬಿಲ್ಲ. ಇಸ್ತ್ರಿ ಪೆಟ್ಟಿಗೆಯಲ್ಲಿ ಬೆಂಕಿಯುಂಟಾಗಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

 

About The Author

Leave a Reply

Your email address will not be published. Required fields are marked *

You cannot copy content of this page.