????????????????????????????????????

ಉಡುಪಿ: ಜ.20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ- ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಜಿಲ್ಲಾ ರಜತ ಮಹೋತ್ಸವದ ಸಮಾರೋಪದ ಪ್ರಯುಕ್ತ ಇದೇ ಬರುವ ಜ.20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಹೇಳಿದರು.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಕ್ಲಿಫ್ ಡೈವ್‌ ಹಾಗೂ ಕಾಪುವಿನಲ್ಲಿ ಸ್ಕೂಬಾ ಡೈವ್‌ ಹಮ್ಮಿಕೊಂಡಿದ್ದೇವೆ ಎಂದರು. ಶಾಸಕ ಕೆ. ರಘುಪತಿ ಭಟ್ ಮಾತನಾಡಿದ ಅವರು, ವ್ಯಯಜ. 21ರಂದು ಸ್ವಿಮ್ಮಿಂಗ್‌ ಫೆಡರೇಶನ್‌ ಆಫ್ ಇಂಡಿಯಾ, ಕರ್ನಾಟಕ ಸ್ಮಿಮ್ಮಿಂಗ್‌ ಅಸೋಸಿಯೇಶನ್‌ ಜತೆ ಸೇರಿ ಸಮುದ್ರದಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ ನಡೆಯಲಿದೆ. 5ಕಿ.ಮೀ, 7.5 ಕಿ.ಮೀ., 10 ಕಿ.ಮೀ. ಹಾಗೂ 1.25 ಕಿ.ಮೀ. ರೀಲೆ ಕೂಡ ಇರಲಿದೆ. ಇದರ ಜತೆಗೆ ಪ್ರತಿ ದಿನ ಸಂಜೆ ಸ್ಥಳೀಯರಿಗೆ ಕಬಡ್ಡಿ ಸಹಿತ ವಿವಿಧ ಸ್ಪರ್ಧೆಗಳು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯಲಿದೆ ಎಂದು ಹೇಳಿದರು. ಆರ್ಟ್‌ ಕ್ಯಾಂಪ್‌, ಪೈಂಟಿಂಗ್‌, ಫೋಟೋಗ್ರಫಿ, ಮರಳು ಕಲಾಕೃತಿ ಪ್ರದರ್ಶನ, ವಿವಿಧ ಬಗೆಯ ವಾಟರ್‌ ಸ್ಪೋರ್ಟ್ಸ್, ಜಿಪ್‌ ಲೈನ್‌, ಆಂಗ್ಲಿಂಗ್‌, ಗಾಳಿಪಟ ಉತ್ಸವ, ಆಹಾರ ಮೇಳೆದ ಜತೆಗೆ ಹತ್ತಾರು ಬಗೆಯ ಕಾರ್ಯಕ್ರಮಗಳನ್ನು ಸ್ಥಳೀಯರ ಹಾಗೂ ಸ್ಥಳೀಯ ಭಜನೆ ಮಂಡಳಿಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Check Also

ಮಂಗಳೂರು: ಮತಗಟ್ಟೆಗಳಲ್ಲಿ ವರ್ಣ ಚಿತ್ತಾರ

ಎಲ್ಲೆಡೆ ಚುನಾವಣೆ ಕಾವು ಹೆಚ್ಚಾಗುತ್ತಾ ಇದೆ. ಇತ್ತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳೂರು ತಾಲೂಕು …

Leave a Reply

Your email address will not be published. Required fields are marked *

You cannot copy content of this page.