ಭೂಕುಸಿತದ ಬಳಿಕ ಮತ್ತೆ ಸಂಚಾರ ಆರಂಭಿಸಿದ ಮಂಗಳೂರು ಬೆಂಗಳೂರು ರೈಲು

ಮಂಗಳೂರು: ಮಳೆಯಿಂದಾಗಿ ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಕಡಗರಹಳ್ಳಿ ಎಂಬಲ್ಲಿ ಉಂಟಾಗಿದ್ದ ಭೂಕುಸಿದಿಂದಾಗಿ ಸಂಪೂರ್ಣ ಬಂದ್ ಆಗಿದ್ದ ಮಂಗಳೂರು ಬೆಂಗಳೂರು ರೈಲು ಪ್ರಯಾಣ ಇದೀಗ ಮತ್ತೆ ಪ್ರಾರಂಭವಾಗಿದೆ. ಇಂದು ಯಶವಂತಪುರ–ಮಂಗಳೂರು ಜಂಕ್ಷನ್‌ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸುವ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

13 ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತವಾಗಿತ್ತು, ಪರಿಸ್ಥಿತಿ ಎಷ್ಟರ ಮಟ್ಟಿಗೆ ಇತ್ತು ಅಂದರೆ ಕನಿಷ್ಠ ತಿಂಗಳುಗಟ್ಟಲೇ ರೈಲ್ವೆ ಮಾರ್ಗ ರಿಪೇರಿಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ರೈಲ್ವೆ ಇಲಾಖೆ ಮಾತ್ರ . ನಿರಂತರ ಮಳೆಯ ನಡುವೆಯೂ ಕ್ರಿಬ್‌ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ.

ಆಗಸ್ಟ್ 4 ರಂದು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ರೈಲಿನ ಎಂಜಿನ್‌ ಓಡಿಸುವ ಮೂಲಕ ಸುರಕ್ಷತೆ ಪರಿಶೀಲಿಸಲಾಯಿತು. ಆಗಸ್ಟ್‌ 6 ರಂದು ಪೂರ್ಣ ಸಾಮಗ್ರಿ ಹೊತ್ತ ಗೂಡ್ಸ್‌ ರೈಲು ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಸದ್ಯಕ್ಕೆ ಈ ಸ್ಥಳದಲ್ಲಿ ರೈಲಿನ ವೇಗದ ಮಿತಿಯನ್ನು 15 ಕಿ.ಮೀ. ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಿರುವುದಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪ ಮಹಾಪ್ರಬಂಧಕ ಕೆ.ಎಸ್‌. ಜೈನ್‌ ಹರ್ಷ ವ್ಯಕ್ತಪಡಿಸಿದ್ದಾರೆ.

Check Also

ಕಾರ್ಕಳ : ಶಾಲೆಯಲ್ಲಿ ಈದ್‌ ಮಿಲಾದ್‌ ಆಚಣೆ- ಪೋಷಕರಿಂದ ಆಕ್ರೋಶ

ಉಡುಪಿ ಕಾರ್ಕಳ ಸಚ್ಚರಿಪೇಟೆಯ ಖಾಸಗಿ ಶಾಲೆಯಲ್ಲಿ ಈದ್‌ ಮಿಲಾದ್‌ ಆಚರಣೆ ಮಾಡಿರುವುದಕ್ಕೆ ಹಿಂದೂ ಮಕ್ಕಳ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಸಚ್ಚರಿಷೇಟೆಯ …

Leave a Reply

Your email address will not be published. Required fields are marked *

You cannot copy content of this page.