ಉಡುಪಿ: ನೀರಿಗೆ ಬಿದ್ದ ಚಡ್ಡಿಯನ್ನು ತೆಗೆಯಲು ಇಳಿದ ಯುವಕನೊಬ್ಬ ಮೇಲಕ್ಕೆ ಬಾರಲಾಗದೇ ನಗೆಪಾಟಲೀಗೀಡಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೀರಿಗೆ ಇಳಿದ ಯುವಕನನ್ನು ಬೋಟಿನಲ್ಲಿದ್ದ ಯುವಕರು ರಕ್ಷಣೆ ಮಾಡಿದ್ದಾರೆ.
ಅಲ್ಲದೆ ಮೇಲ್ಭಾಗದಲ್ಲಿದ್ದವರು ಎಂತಾ ಕರ್ಮ ಮಾರಾಯ…ಚಡ್ಡಿ ತೆಗೆಯಲು ಯಾರಾದರು ನೀರಿಗೆ ಹಾರ್ತಾರಾ…ಅದು ನೂರು ರೂಪಾಯಿಗೆ ಸಿಗುತ್ತದೆ….ಎಂದು ಹೇಳುವುದು ಕೂಡಾ ವಿಡಿಯೋದಲ್ಲಿ ಕೇಳುತ್ತಿದೆ. ಕರಾವಳಿಯ ಮೀನುಗಾರಿಕಾ ಬಂದರೊಂದರಲ್ಲಿ ನಡೆದ ಪ್ರಸಂಗ ಇದು.
ಮೀನುಗಾರಿಕೆ ದೋಣಿಯ ಕಾರ್ಮಿಕರೊಬ್ಬರ ಅಂಡರ್ ವೇರ್ ನೀರಿಗೆ ಬಿದ್ದಿದ್ದು, ಅದನ್ನು ತೆಗೆಯಲು ನೀರಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬರಲಾಗದೇ ಒದ್ದಾಡುತ್ತಿದ್ದಾಗ ಬೋಟಿನಲ್ಲಿದ್ದವರು ಹಗ್ಗವನ್ನು ಇಳಿಬಿಟ್ಟು ಅವರನ್ನು ಮೇಲಕ್ಕೆ ಎಳೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.