ಮಂಗಳೂರು: ಮಾಣಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ದ ಸ್ವಾಮೀಜಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನ ದಲ್ಲಿ ನಡೆಯುವ ಗೋ ಶಾಲೆ, ಗೋ ರಕ್ಷಾ ನಿಧಿ ಗೆ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ವತಿಯಿಂದ ಲಯನ್ಸ್ ಅಧ್ಯಕ್ಷ ರಾದ ಅನಿಲ್ ದಾಸ್ ಮನವಿ ಮೇರೆಗೆ ₹ 25000 ವನ್ನು ಶ್ರೀ ಶ್ರೀ ಮೋಹನ್ ದಾಸ್ ಸ್ವಾಮೀಜಿ ಮುಖಾಂತರ ಮಾಣಿಲ ಮಹಾಲಕ್ಷ್ಮಿ ಸೇವಾ ಪ್ರತಿಷ್ಟನಾ ಟ್ರಸ್ಟ್ ಗೆ ಅರ್ಪಿಸಲಾಯಿತು.
ಕುಗ್ರಾಮ ವಾಗಿದ್ದ ಮಾಣಿಲ ದಲ್ಲಿ ಧಾರ್ಮಿಕ,ಸಾಮಾಜಿಕ ಹಾಗೂ ದಿನ ನಿತ್ಯ ಸೇವಾ ಚಟುವಟಿಕೆ ಗಳೊಂದಿಗೆ ಇದೀಗ ಗೋ ಸಂರಕ್ಷಣೆ ಮತ್ತು ಗೋ ಸೇವಾ ಯೋಜನೆ ಕೈಗೊಂಡು ಗೋಮಾತೆ ಗೆ ಇನ್ನಷ್ಟು ಸೇವೆ ಮಾಡಲು ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಯು ಈ ಬಾರಿ ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ರ ನೆಲೆಯಲ್ಲಿ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟಿನಿಂದ ಸಹಾಯ ಹಸ್ತ ನೀಡಲಾಯಿತು.
ಎಲ್ಲರೂ ಸ್ವಾಮೀಜಿ ಯ ಮುಂದಿನ ಯೋಜನೆ ಗಳಿಗೆ ಸ್ಪಂದಿಸೋಣ ಎನ್ನುವ ಭಿನ್ನಹ ದೊಂದಿಗೆ ಲಯನ್ ಅನಿಲ್ ದಾಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.