ಸುರತ್ಕಲ್ : ಮಂಗಳೂರು ಹೊರ ವಲಯದ ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್‌ನಲ್ಲಿ ಶನಿವಾರ ಸಂಜೆ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ಯುವಕನ ಮೃತದೇಹ ಜನವರಿ 1 ರಂದು ಭಾನುವಾರ ಪತ್ತೆಯಾಗಿದೆ.
ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಮೃತ ದುರ್ದೈವಿ.
ಲೈಟ್ ಹೌಸ್ ಬೀಚ್ ನಿಂದ 1.5 ಕಿಮೀ ದೂರದಲ್ಲಿರುವ ರೆಡ್ ರಾಕ್ ಬೀಚ್ ನಲ್ಲಿ ಇವನು ಮತ್ತು ಆತನ ಸ್ನೇಹಿತ ಶನಿವಾರ ಸಮುದ್ರದಲ್ಲಿ ಈಜಲು ಹೋಗಿದ್ದರು.
ಇಬ್ಬರೂ ಸಮುದ್ರದ ಪ್ರವಾಹದಲ್ಲಿ ಸಿಲುಕಿಕೊಂಡಾಗ, ಸತ್ಯಂನ ಸ್ನೇಹಿತ ಸುರಕ್ಷಿತವಾಗಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸತ್ಯಂ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಸತ್ಯಂ ನಗರದ ಕೆಪಿಟಿಯಲ್ಲಿ ಡಿಪ್ಲೊಮಾ ಓದುತ್ತಿದ್ದರು. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.