ಮಂಗಳೂರು : ಕೊಣಾಜೆ ನೆತ್ತಿಲಪದವು ಬಳಿ ಕಾರ್ಯಾಚರಣೆ ನಡೆಸಿದ ಕೊಣಾಜೆ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಒಂದು ಕಾರನ್ನು ವಶಪಡೆದು 27 ಲಕ್ಷ ಮೌಲ್ಯದ ಮಾದಕ ಗಾಂಜಾವನ್ನು ವಶಪಡಿಸಿದ್ದಾರೆ.
ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಮಂಜೇಶ್ವರ ಹೊಸಬೆಟ್ಟು ನಿವಾಸಿ ಅಬೂಬಕ್ಕರ್ ಸಿದ್ಧೀಕ್(35), ಆರಿಕ್ಕಾಡಿಯ ಅಖಿಲ್ ಎಂ(25) ಮತ್ತು ಮಂಜೇಶ್ವರ ಉದ್ಯಾವರ ಮಾಡ ನಿವಾಸಿ ಹೈದರ್ ಆಲಿ ಯಾನೆ ಗಾಡಿ ಹೈದರ್(39) ಬಂಧಿತ ಆರೋಪಿಗಳಾಗಿದ್ದಾರೆ. ವಶಪಡಿಸಿಕೊಂಡ ಗಾಂಜಾ ಹಾಗೂ ವಾಹನ ಸೇರಿದಂತೆ ಒಟ್ಟು ಸೊತ್ತಿನ ಅಂದಾಜು ಮೌಲ್ಯ 32,07,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.