ಪುತ್ತೂರು: ದೇವಳದೊಳಗೆ ಅನ್ಯಧರ್ಮೀಯ ವ್ಯಕ್ತಿಯಿಂದ ವೀಡಿಯೋ ಚಿತ್ರೀಕರಣ- ಹಿಂದೂ ಸಂಘಟನೆಗಳ ಆಕ್ರೋಶ

ಪುತ್ತೂರು: ಹಿಂದೂ ದೇವಸ್ಥಾನದ ಒಳಗೆ ಅನ್ಯಮತೀಯ  ವ್ಯಕ್ತಿ ಯಿಂದ ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ನಿಷೇಧವಾಗಿದ್ದರೂ ಭಾವಚಿತ್ರ ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿದ್ದು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸಿದೆ. ಭಾವಚಿತ್ರ ತೆಗೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಗೆ ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾದರೆ ದೇವಸ್ಥಾನದ ಆಡಳಿತ ಮಂಡಳಿ ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಿದೆ. ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತಿಲ ಪರಿವಾರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದೆ ಈ ವೇಳೆ ಪುತ್ತಿಲ ಪರಿವಾರದ ನಗರಾಧ್ಯಕ್ಷರಾದ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಪುತ್ತೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲು, ಪುತ್ತಿಲ ಪರಿವಾರದ ಪ್ರಮುಖರಾದ ಪ್ರವೀಣ್ ತಿಂಗಳಾಡಿ, ಪ್ರವೀಣ್ ಶೆಟ್ಟಿ, ರೂಪೇಶ್ ನಾಯ್ಕ್, ಮನೀಶ್, ಕೆ.ಪಿ. ಶೆಟ್ಟಿ  ಮಹಬಲ ಉಪಸ್ಥಿತರಿದ್ದರು.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.