ಬಾಲಿವುಡ್ ನ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತ ಇರುವುದು ನಿಮಗೆಲ್ಲ ಗೊತ್ತು. ಕನ್ನಡ ಸೇರಿದಂತೆ ಸೌತ್ ನ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ಸಿನಿಪ್ರಿಯರು ಕೂಡ ಸೌತ್ ಸಿನಿಮಾಗಳನ್ನೇ ಇಷ್ಟಪಡುತ್ತಿದ್ದಾರೆ. ಸೌತ್ ಸಿನಿಮಾ ಕಥೆಗಳು ಸ್ಟ್ರಾಂಗ್ ಆಗಿರುವುದೇ ಇದಕ್ಕೆ ಕಾರಣ ಇರಬಹುದು.
ಇನ್ನು ಬಾಲಿವುಡ್ ಸಿನಿಮಾ ಸ್ಟಾರ್ ಗಳು ಕೂಡ ತಮ್ಮ ಸಿನಿಮಾ ಗೆಲುವಿಗಾಗಿ ತಲೆಕೆಡಿಸಿಕೊಳ್ಳುವಂತಾಗಿದೆ. ತಮ್ಮ ಸಿನಿಮಾ ಸೋಲಿನಿಂದ ಬೇಸರಗೊಂಡಿದ್ದಾರೆ. ಆದರೆ ಇದೀಗ ಶಾರುಖ್ ಖಾನ್, ಪಠಾಣ್ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಹೊಸದೊಂದು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಹೌದು ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಪಟಾಣ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬರಲಿದೆ. ಈ ಸಿನಿಮಾದ ಒಂದು ಹಾಡು ಈಗಾಗಲೇ ಬಿಡುಗಡೆಯಾಗಿದೆ.
ಪಠಾಣ್ ಸಿನಿಮಾದ ಹಾಡು ಬಿಡುಗಡೆ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ನಟಿ ದೀಪಿಕಾ ಪಡುಕೋಣೆ ಹಾಟ್ ಲುಕ್ ಮೂಲಕ ಮೂಡಿ ಮಾಡಿದ್ದಾರೆ. ಮದುವೆ ಆದ ಮೇಲೆ ದೀಪಿಕಾ ಪಡುಕೋಣೆ ಅವರು ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇದೆ ಮೊದಲು. ಬಿಡುಗಡೆಯಾಗಿರುವ ಸಾಂಗ್ ನಲ್ಲಿ ಸಕ್ಕತ್ತಾಗಿ ಸೊಂಟ ಬಳುಕಿಸಿದ್ದಾರೆ ದೀಪಿಕಾ ಪಡುಕೋಣೆ. ದೀಪಿಕಾ ಅವರ ಹಾಟ್ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಠಾಣ್ ಸಿನಿಮಾದ ಫಸ್ಟ್ ಲೋಕ ಸಾಕಷ್ಟ ಬರವಸೆ ಮೂಡಿಸಿತ್ತು. ಇದೀಗ ಈ ಹಾಡಿನ ಮೂಲಕ ನಿರೀಕ್ಷೆಯೂ ಪಟ್ಟಾಗಿದೆ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಇಬ್ಬರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಸಿನಿಮಾ ಶಾರುಖ್ ಖಾನ್ ಕರಿಯರ್ ನ ಹೊಸ ಪ್ರಯೋಗವಂತೆ. ಹಾಗಾಗಿ ಅವರಿಗೂ ಕೂಡ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಆರಂಭದಿಂದಲೂ ಈ ಸಿನಿಮಾದಲ್ಲಿ ಕುತೂಹಲ ಕೌತುಕ ಉಳಿಸಿಕೊಂಡು ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಶಾರೂಖ್ ಖಾನ್ ಸ್ವತಃ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗ್ತಾ ಇದೆ ಇದನ್ನ ನೋಡೋದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಅಂತ ಬರೆದುಕೊಂಡಿದ್ದರು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಪಠಾಣ್ ಸಿನಿಮಾದ ಹಾಡಿನ ಮೂಲಕ ರಸದೌತಣ ನೀಡಿದ್ದಾರೆ.
ಪಠಾಣ್ ಶಾರುಖ್ ಖಾನ್ ವೃತಿ ಜೀವನದ ಬಹಳ ಮುಖ್ಯವಾದ ಸಿನಿಮಾ. ಇದರಲ್ಲಿ ವಿಭಿನ್ನವಾದ ಗೆಟಪ್ ನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ ಸೋಲನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಬಾಲಿವುಡ್ ಗೆ ಶಕ್ತಿ ತುಂಬಲಿದ್ಯಾ ಕಾದು ನೋಡಬೇಕು. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಕಾಂಬಿನೇಷನ್ ಚೆನ್ನೈ ಎಕ್ಸ್ಪ್ರೆಸ್ ಸಾಕಷ್ಟು ಹಿಟ್ ಆಗಿತ್ತು. ಹಾಗಾಗಿ ಅವರಿಬ್ಬರ ಈ ಕಾಂಬಿನೇಷನ್ ಸಿನಿಮಾ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಬಹುದು ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇದೀಗ ಬಿಡುಗಡೆಯಾಗಿರುವ ಪಠಾಣ್ ಹಾಡು ಕೂಡ ಇದಕ್ಕೆ ಪುಷ್ಠಿ ನೀಡಿದೆ. ಹಾಗಾಗಿ ಬಾಲಿವುಡ್ ನಲ್ಲಿ ಈ ಸಿನಿಮಾ ಸದ್ಯಕ್ಕೆ ಬೆಸ್ಟ್ ಹೋಪ್ ಎಂದೇ ಹೇಳಬಹುದು.