ತಾಜಾ ಸುದ್ದಿ

ಉಡುಪಿ: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಕ್ಷ ರೂ. ವಶಕ್ಕೆ

ಉಡುಪಿ: ಲೋಕಸಬಾ ಚುನಾವಣೆ ನಿಮಿತ್ತ ಉದ್ಯಾವರದ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತ್ಯೇಕ ಕಾರುಗಳಲ್ಲಿ ತಲಾ 3.5 ಲ.ರೂ.ಗಳಂತೆ ಒಟ್ಟು 7 ಲ.ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಕಾರು ಧರ್ಮಸ್ಥಳ ಮಾರ್ಗವಾಗಿ ಉಡುಪಿಯತ್ತ ಬರುತ್ತಿತ್ತು. ಮತ್ತೊಂದು ಕಾರು ಮಂಗಳೂರಿನಿಂದ ಉಡುಪಿಯತ್ತ ಬರುತ್ತಿತ್ತು. ಸೂಕ್ತ ದಾಖಲಾತಿ ಇಲ್ಲದ ಕಾರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More »

ಪುತ್ತೂರು: ಅಕ್ರಮ ಗೋ ಸಾಗಾಟ, ಸಂಘಟನೆಯ ಕಾರ್ಯಕರ್ತರನ್ನು ಕಂಡು ಕಾರು ದನಗಳನ್ನು ಬಿಟ್ಟು ತಂಡ ಪರಾರಿ..!

ಪುತ್ತೂರು: ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟದ ಜಾಲವನ್ನು ಬಜರಂಗದಳ ಬಯಲಿಗೆಳೆದಿದ್ದು, ಸಂಘಟನೆಯ ಕಾರ್ಯಕರ್ತರನ್ನು ನೋಡಿ ಆರೋಪಿಗಳು ಕಾರು , ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪುತ್ತೂರಿನ ಕಬಕ ಅಡ್ಯಲಾಯ ದೈವಸ್ಥಾನದ ಸಮೀಪವೇ ಈ ಕೃತ್ಯ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ. ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿದೆ. …

Read More »

ಅಪಾರ್ಟ್‌ಮೆಂಟ್ ಮಹಡಿಯಿಂದ ಅಯಾತಪ್ಪಿ ಬಿದ್ದು ಮಹಿಳೆ ಮೃತ್ಯು

ಕುಂದಾಪುರ: ನಗರದ ಮುಖ್ಯ ರಸ್ತೆಯ ಹಳೇ ಗೀತಾಂಜಲಿ ಟಾಕೀಸಿನ ಜಾಗದಲ್ಲಿ ನಿರ್ಮಿಸಲಾಗಿದ್ದ ಫ್ಲ್ಯಾಟಿನ ಮಹಡಿಯಿಂದ ಅಚಾನಕ್ ಆಗಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯನ್ನು ಫ್ಲ್ಯಾಟಿನ ನಿವಾಸಿ ಲಕ್ಷ್ಮೀ ಪ್ರತಾಪ್‌ ನಾಯಕ್ ಎಂದು ಗುರುತಿಸಲಾಗಿದೆ. ಆದಿತ್ಯವಾರ ಸಂಜೆ 7.00 ಗಂಟೆಯ ಸುಮಾರಿಗೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನ ಕಾಯಿಯನ್ನು ತರಲು ಹೋಗಿದ್ದು ಅಕಸ್ಮಾತ್ತಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬ‌ರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ನೇರ ಲಿಫ್ಟ್ ನ ಮೇಲೆ ಬಿದ್ದರು ಅವರ ತಲೆಗೆ ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು …

Read More »

ಕುಕ್ಕೆ ಸುಬ್ರಮಣ್ಯದಲ್ಲಿ ನಕ್ಸಲ್ ಚಲನವಲನದ ಶಂಕೆ – ಮೂವರಿದ್ದ ತಂಡ ಸ್ಥಳೀಯ ಮನೆಯೊಂದಕ್ಕೆ ಭೇಟಿ

ಸುಳ್ಯ : ವಾರದ ಹಿಂದೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗಡಿಭಾಗದ ಕೂಜಿಮಲೆಯ ಎಸ್ಟೇಟ್‌ ಬಳಿಯ ಅಂಗಡಿಯೊಂದಕ್ಕೆ ಬಂದಿದ್ದ ಶಂಕಿತ ನಕ್ಸಲರು ದಿನಸಿ ಸಾಮಾಗ್ರಿ ಪಡೆದು ತೆರಳಿದ್ದರು ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಭಾಗದಲ್ಲಿ ನಕ್ಸಲ್‌ ನಿಗ್ರಹದಳ ನಿರಂತರ ಶೋಧ ಕಾರ್ಯ ನಡೆಸಿತ್ತು. ಆದರೆ ಎಎನ್‌ಎಫ್ ತಂಡಕ್ಕೆ ನಕ್ಸಲರು ಕಾಣಿಸಿರಲಿಲ್ಲ. ಇದೀಗ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮೂವರು …

Read More »

ಪುತ್ತೂರು : ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ..!

ಪುತ್ತೂರು : ಫೆಬ್ರವರಿ ತಿಂಗಳಲ್ಲಿ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ  ಆರೋಪಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಈಶ್ವರಿ (45) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಆಕೆ ಕಳವು ನಡೆಸಿದ ಸುಮಾರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ …

Read More »

ಮಂಗಳೂರು: 25 ಲಕ್ಷ ಲಂಚ ಸ್ವೀಕಾರ – ಮುಡಾ ಕಮೀಷನರ್ ಲೋಕಾಯುಕ್ತ ಬಲೆಗೆ

ಮಂಗಳೂರು: ಉದ್ಯಮಿಯೊಬ್ಬರಿಂದ ಬರೋಬ್ಬರಿ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಮನ್ಸೂರ್ ಅಲಿ ಹಾಗೂ ಓರ್ವ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಸಾಗರ್ ರಿಯಾಲಿಟಿ ಪ್ರಮೋಟರ್ಸ್‌ನ ಮಾಲಕ ಗಿರಿಧರ್ ಶೆಟ್ಟಿ ಎಂಬವರು ಕುಡುಪು ಗ್ರಾಮದ ಸರ್ವೇ ನಂ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಮನಪಾ ವ್ಯಾಪ್ತಿಯ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸಲು ಯೋಜನೆ ಹಾಕಿದ್ದರು. ಮನಪಾ ಆಯುಕ್ತರು ಈ ಜಮೀನಿಗೆ ಟಿಡಿಆರ್ …

Read More »

ಬೆಳ್ತಂಗಡಿ ಮೂಲದ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ – 6 ಮಂದಿಯ ಬಂಧನ

ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣ ರಹಸ್ಯ ಬಯಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ತುಮಕೂರಿಗೆ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು. ಆದರೆ ಬಳಿಕ ಸುಟ್ಟ ಕಾರಿನಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. …

Read More »

ದೇವರ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ – ಪಲಿಮಾರು ಶ್ರೀ

ಮಲ್ಪೆ : ಒಂದು ದೇವಸ್ಥಾನದ ಜೀರ್ಣೋದ್ದಾರ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ದೇವರು ಮತ್ತೆ ಆಲಯ ಸೇರುವುದರೊಂದಿಗೆ ಎಲ್ಲರಿಗೂ ಶ್ರೇಯಸ್ಸಾಗುತ್ತದೆ. ಆತನ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಅವರು ಶುಕ್ರವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಧ್ವರ ಪವಿತ್ರ ಕ್ಷೇತ್ರ ವಡಭಾಂಡೇಶ್ವರ: ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, …

Read More »

ಉಡುಪಿ : ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ – ವಿದ್ಯಾರ್ಥಿನಿಯರ ಕೃತ್ಯ ಸಾಬೀತು

ಉಡುಪಿ : ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು ಸಾಬೀತಾಗಿದೆ. ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ. ಆರೋಪಿ ವಿದ್ಯಾರ್ಥಿನಿಯರು ಗೆಳತಿಯ ವಿಡಿಯೋ ಮಾಡಲು ಹೋಗಿ ಬೇರೆ ಯುವತಿಯ ಖಾಸಗಿ ವಿಡಿಯೋ ಮಾಡಿರುವುದು, ಬಳಿಕ ಸಾಕ್ಷ್ಯ ನಾಶಮಾಡಲು ಮೊಬೈಲ್‌ನಲ್ಲಿದ್ದ ವಿಡಿಯೋ ಡಿಲೀಟ್‌ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿನಿಯರು 2023ರ ಜುಲೈ 18ರಂದು …

Read More »

ಕೋಟ: ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ!

ಕೋಟ: ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಯಡ್ತಾಡಿ ಸೇತುವೆ ಬಳಿ ಸಂಭವಿಸಿದೆ. ಬಿದ್ಕಲ್‌ಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಿಸುತ್ತಿದ್ದ ಟ್ರಕ್‌ ಹಾಗೂ ಬ್ರಹ್ಮಾವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಚಲಿಸುತ್ತಿದ್ದ ಟ್ರಕ್‌ ನಡುವೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದ್ದು, ಟ್ರಕ್‌ಗಳು ಜಖಂಗೊಂಡಿವೆ. ಚಾಲಕರು ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ಸೇತುವೆಯ ಮೇಲೆ ಅಪಘಾತ ನಡೆದದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ರಹ್ಮಾವರ-ಸಾೖಬ್ರಕಟ್ಟೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಸಮಸ್ಯೆಯಾಯಿತು. …

Read More »

You cannot copy content of this page.