ಉಡುಪಿ: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಕ್ಷ ರೂ. ವಶಕ್ಕೆ

ಉಡುಪಿ: ಲೋಕಸಬಾ ಚುನಾವಣೆ ನಿಮಿತ್ತ ಉದ್ಯಾವರದ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತ್ಯೇಕ ಕಾರುಗಳಲ್ಲಿ ತಲಾ 3.5 ಲ.ರೂ.ಗಳಂತೆ ಒಟ್ಟು 7 ಲ.ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಕಾರು ಧರ್ಮಸ್ಥಳ ಮಾರ್ಗವಾಗಿ ಉಡುಪಿಯತ್ತ ಬರುತ್ತಿತ್ತು. ಮತ್ತೊಂದು ಕಾರು ಮಂಗಳೂರಿನಿಂದ ಉಡುಪಿಯತ್ತ ಬರುತ್ತಿತ್ತು. ಸೂಕ್ತ ದಾಖಲಾತಿ ಇಲ್ಲದ ಕಾರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Check Also

ಮಂಗಳೂರು: ಮತಗಟ್ಟೆಗಳಲ್ಲಿ ವರ್ಣ ಚಿತ್ತಾರ

ಎಲ್ಲೆಡೆ ಚುನಾವಣೆ ಕಾವು ಹೆಚ್ಚಾಗುತ್ತಾ ಇದೆ. ಇತ್ತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳೂರು ತಾಲೂಕು …

Leave a Reply

Your email address will not be published. Required fields are marked *

You cannot copy content of this page.