ತಾಜಾ ಸುದ್ದಿ

ಪುತ್ತೂರು: ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಲ್ಲು ತೂರಾಟ

ಪುತ್ತೂರು: ಪುತ್ತೂರಿನ ಪುರುಷರ ಕಟ್ಟೆ ಎಂಬಲ್ಲಿ ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪುತ್ತೂರು ಠಾಣೆಯಲ್ಲಿ ಎರಡು ಕಡೆಗಳಿಂದ ದೂರು ದಾಖಲಾಗಿದೆ. ಪುರುಷರ ಕಟ್ಟೆಯಲ್ಲಿರುವ ಸಾಪ್ಟ್ ಡ್ರಿಂಕ್ ಪ್ಯಾಕ್ಟರಿ ಬಿಂದು ಸಂಸ್ಥೆಯಲ್ಲಿ ಹಳೆಯ ಬೋರ್ ವೆಲ್ ಗಳನ್ನು ಪ್ಲಶ್ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಈ ಪರಿಸರದಲ್ಲಿ ಹೊಸದಾಗಿ ಬೋರ್ ವೆಲೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಕಿಡಿಗೇಡಿಗಳು ಬೋರ್ ವೆಲ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ …

Read More »

ಉಡುಪಿ : ರಘುಪತಿ ಭಟ್ ಅವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ- ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಉಡುಪಿ : ರಘುಪತಿ ಭಟ್ ಅವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ. ಸಾಕಷ್ಟು ಬಾರಿ ಅವಕಾಶ ಸಿಕ್ಕಿದೆ. ಇನ್ನೂ ಅನೇಕರಿಗೆ ಅವಕಾಶ ಸಿಗಬೇಕಾಗಿದೆ. ಅವಕಾಶ ಸಿಕ್ಕವರಿಗೆ ಮತ್ತೆ ಅವಕಾಶ ಸಿಗಬೇಕೆಂಬುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಘುಪತಿ ಭಟ್ ಗೆಲ್ತೇನೆ ಎಂಬ ಭ್ರಮೆನಲ್ಲಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಪದವೀಧರರು ಆಶೀರ್ವಾದ ಮಾಡುತ್ತಿದ್ದಾರೆ. ಮೊದಲ ಬಾರಿ ಸ್ಪರ್ಧಿಸುತ್ತಿದ್ದರೂ ಓರ್ವ ಸಜ್ಜನ ರಾಜಕಾರಣಿ ಎಂದು ಜನ ಮಾತನಾಡುತ್ತಿದ್ದಾರೆ. …

Read More »

ಉಳ್ಳಾಲ: ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಅಪಘಾತ : ಮೂವರಿಗೆ ಗಾಯ

ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ ನೂತನವಾಗಿ ನಿರ್ಮಾಣಗೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹರೇಕಳ-ಅಡ್ಯಾರ್ ಅಣೆಕಟ್ಟು ಸೇತುವೆಯಲ್ಲಿ ಸಂಭವಿಸಿದ ಮೊದಲ ಅಪಘಾತ ಇದಾಗಿದೆ. ಪುತ್ತೂರು ಕಡೆಯಿಂದ ಅಡ್ಯಾರ್ ನತ್ತ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋಟ್ಸ್  ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆ, ಸಹಪ್ರಯಾಣಿಕೆ ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. …

Read More »

ಸುರತ್ಕಲ್: ಬೈಕಂಪಾಡಿ ಬಳಿ ಸರಣಿ ಅಪಘಾತ – ಸ್ಕೂಟರ್ ಸವಾರರಿಗೆ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ತಡೆರಹಿತ ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಸ್ಕೂಟರ್ ಸವಾರನನ್ನು ಪಣಂಬೂರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಎಕೆಎಂಎಸ್ ಹೆಸರಿನ ತಡೆರಹಿತ ಬಸ್ ಜೋಕಟ್ಟೆ ಕ್ರಾಸ್ ತಲುಪುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಜಂಕ್ಷನ್ ಬಳಿ ನಿಲ್ಲಿಸಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ ಡಿಕ್ಕಿಯಾದ ಒಂದು ಕಾರು ಮುಂದಕ್ಕೆ ಹೋಗಿ ಎದುರು ನಿಲ್ಲಿಸಿದ್ದ ಬಸ್ಸಿಗೆ …

Read More »

ಉಡುಪಿ: ಗೆದ್ದರೂ ಸೋತರೂ ಬಿಜೆಪಿ ಕಾರ್ಯಕರ್ತನಾಗಿಯೇ ಇರುವೆ – ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್

ಉಡುಪಿ: ನನ್ನನ್ನು ಉಚ್ಚಾಟಿಸಿರಬಹುದು. ಕಾರ್ಯಕರ್ತನಾಗಿಯೇ ಇರುತ್ತೇನೆ. ಪಕ್ಷದಿಂದ ಉಚ್ಚಾಟಿಸಿದವರಿಗೆ ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ. ಚುನಾವಣೆಯಲ್ಲಿ ಗೆದ್ದು ಪಕ್ಷಕ್ಕೆ ಹೋಗುವೆ ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುವೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟಿಸಿದ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯಿತು. ಪಕ್ಷದ ನೋಟಿಸ್‌ ಕೂಡ ತಲುಪಿರಲಿಲ್ಲ. ಈಗ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿರಬಹುದು. ಆದರೆ, ಈವರೆಗೂ ಪಕ್ಷದ ಯಾವ ನಾಯಕರಿಗೂ ನಾನು ಬೈದಿಲ್ಲ. ವ್ಯವಸ್ಥೆ ಸರಿಯಾಗಬೇಕು ಎಂದಷ್ಟೆ …

Read More »

ಬಿಜೆಪಿಯ ಉಚ್ಚಾಟನೆಗೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ : ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ ತಲುಪಿಲ್ಲ. ಈ ಉಚ್ಚಾಟನೆಗೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ ಎಂದು ವಿಧಾನ ಪರಿಷತ್ ನೈರುತ್ಯ ಕ್ಷೇತ್ರದ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪಕ್ಷ ಅಂದರೆ ಜೀವ ಬಿಡುವ ಕಾರ್ಯಕರ್ತರಿಗೆ ಬಿಜೆಪಿಯಿಂದ ನಿರಂತರ ನೋವಾಗುತ್ತಿದೆ. ನನ್ನನ್ನು ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ನನ್ನದು ಕಾರ್ಯಕರ್ತ ಹುದ್ದೆ ಆಗಿದೆ. ಪಕ್ಷದಲ್ಲಿ ನನಗೆ ಯಾವ …

Read More »

ಉಡುಪಿ ಗ್ಯಾಂಗ್ ವಾರ್ ಪ್ರಕರಣ: ಮತ್ತೆ ಮೂರು ಆರೋಪಿಗಳ ಬಂಧನ

ಉಡುಪಿ: ಉಡುಪಿ ಕುಂಜಿಬೆಟ್ಟುವಿನಲ್ಲಿ ಇತ್ತೀಚೆಗೆ ಗರುಡ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗರುಡ ಗ್ಯಾಂಗ್ ನ ಮಜೀದ್, ಅಲ್ಫಾಝ್, ಶರೀಫ್ ಎಂದು ಗುರುತಿಸಲಾಗಿದೆ. ಆ ಮೂಲಕ‌ ಬಂಧಿತ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಪ್ರಕರಣದಲ್ಲಿ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್(26), ತೋನ್ಸೆ ಹೂಡೆಯ ರಾಕೀಬ್(21) ಹಾಗೂ ಮೇ 25ರಂದು ಸಕ್ಲೈನ್(26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತ …

Read More »

ಹಾಸನ: ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; ಒಂದೇ ಕುಟುಂಬದ 6 ಜನ ಸಾವು

ಹಾಸನ: ಎರಡು ಲಾರಿಗಳ ನಡುವೆ ಕಾರು ಸಿಲುಕಿ ಒಂದೇ ಕುಟುಂಬದ ಎಲ್ಲಾ 6 ಜನರೂ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪ ಇಂದು ಮುಂಜಾನೆ ನಡೆಯಿತು. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ) ಹಾಗು ರಾಕೇಶ್ (ಚಾಲಕ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಂದಲಿ ಹೊಸಕೋಟೆ ತಾಲೂಕಿನವರಾದ ಇವರು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಈಟಿಯೋಸ್ ಕಾರಿನಲ್ಲಿ ತೆರಳುತ್ತಿದ್ದರು. ಮಂಗಳೂರಿನಿಂದ ಹಿಂದಿರುಗುತ್ತಿದ್ದಾಗ ಅಪಘಾತ ಘಟಿಸಿದೆ. ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿ ಕಂಟೇನರ್‌ಗೆ ಗುದ್ದಿದೆ. ನಜ್ಜುಗುಜ್ಜಾದ …

Read More »

ಕಾರ್ಕಳ: ಮೊದಲ ಮಳೆಗೆ ಕುಸಿದು ಬಿದ್ದ ತಡೆಗೋಡೆ- ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪದೋಷ

ಕಾರ್ಕಳ: ಮೊದಲ ಮಳೆಗೆ ಕಾರ್ಕಳದ ಮಿಯ್ಯಾರು ಕಾಜರ್ ಬೈಲ್ ಎಂಬಲ್ಲಿ ನಿರ್ಮಿಸಿದ ತಡೆಗೋಡೆ ಕುಸಿದುಬಿದ್ದಿದ್ದು, ಕಾರ್ಕಳದಿಂದ ಮಾಳ ಎಸ್.ಕೆ ಬಾರ್ಡರ್ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಹಲವು ಲೋಪದೋಷ ಎದ್ದುಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಒತ್ತು ನೀಡಲಾಗಿದೆ. ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇನ್ನೂ ನಿರ್ಮಾಣಕ್ಕೆ ಮುಂದಾಗದೇ ಹೋದುದರಿಂದ ಹೊಸ ಹೊಸ ಸಮಸ್ಯೆಗಳು ಎದುರಾಗಿದೆ. ಕಾರ್ಕಳದದಿಂದ ಬಜಗೋಳಿಯವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲೆಗಳ ಕೆಲ ಭಾಗಗಳಲ್ಲಿ ಮಳೆ ನೀರು ನಿಂತುಕೊಂಡಿದೆ. ಘನ ಹಾಗೂ ಲಘು ವಾಹನಗಳು …

Read More »

ಉಡುಪಿ: ಬಿಜೆಪಿಯಿಂದ ರಘುಪತಿ ಭಟ್‌ ಉಚ್ಚಾಟನೆ

ಉಡುಪಿ:  ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಟಾಟನೆ ಮಾಡಿದೆ. ಮಾಜಿ ಶಾಸಕ ರಘುಪತಿ ಭಟ್ ಅವರು ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್​​ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಈ ಕ್ಷೇತ್ರದಿಂದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿತ್ತು. ಇದು ರಘುಪತಿ ಭಟ್ ಅವರ …

Read More »

You cannot copy content of this page.