ತಾಜಾ ಸುದ್ದಿ

ಹತ್ರಸ್ ಸತ್ಸಂಗ ಕಾಲ್ತುಳಿತ ದುರಂತ: ಮೃತದೇಹಗಳನ್ನು ಕಂಡು ಪೊಲೀಸ್ ಪೇದೆಗೆ ಹೃದಯಾಘಾತ

ದೆಹಲಿ : ಉತ್ತರ ಪ್ರದೇಶದ ಹತ್ರಾಸ್ ಸತ್ಸಂಗದ ವೇಳೆ ನೂಕುನುಗ್ಗಲು ಉಂಟಾಗಿ ಸ್ಥಳದಲ್ಲಿ ಬಿದ್ದಿದ್ದ 100ಕ್ಕೂ ಹೆಚ್ಚು ಮೃತ ದೇಹಗಳನ್ನು ಕಂಡು ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಜು.03 ರಂದು ಘಟನೆ ಸಂಬಂಧ FIR ದಾಖಲಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಪೈಕಿ 19 ಮಂದಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು …

Read More »

ದಕ್ಷಿಣ ಕನ್ನಡ ಎಸ್ಪಿ ಸಿ ಬಿ ರಿಷಂತ್ ವರ್ಗಾವಣೆ ; ಯತೀಶ್ ಎನ್ ನೂತನ ವರಿಷ್ಠಾಧಿಕಾರಿ

ಮಂಗಳೂರು: ರಾಜ್ಯ ಸರಕಾರ ಮಂಗಳವಾರ ತಡರಾತ್ರಿ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಿ ಬಿ ರಿಷತ್ ಅವರನ್ನು ಬೆಂಗಳೂರು ವಯರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಗೊಳಿಸಿದೆ. ರಿಷಂತ್ ಅವರ ಸ್ಥಾನಕ್ಕೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಯತೀಶ್ಎನ್ ಅವರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

Read More »

ಮಂಗಳೂರು: ಪತಿಯ ಕೊಲೆ ಪ್ರಕರಣ : ಪತ್ನಿ ಸೇರಿದಂತೆ ಐದು ಮಂದಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ನಗರದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿಯಲಾಗಿದೆ. ಘಟನೆ ಹಿನ್ನೆಲೆ: ಈ ಘಟನೆ 2016ರಲ್ಲಿ ನಡೆದಿತ್ತು. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್‌ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್‌ ಅಹಮ್ಮದ್‌ (38), ಉಳ್ಳಾಲದ ಅಬ್ದುಲ್‌ ಮುನಾಫ್ ಆಲಿಯಾಸ್‌ ಮುನ್ನ (41), ಉಳ್ಳಾಲದ ಅಬ್ದುಲ್‌ ರೆಹಮಾನ್‌ (36) …

Read More »

ಮಂಗಳೂರು: ಸ್ಕಿಡ್ಡಾಗಿ ಬಿದ್ದ ಸ್ಕೂಟರ್ – ಯುವಕ ಮೃತ್ಯು…!!

ಮಂಗಳೂರು: ನಗರದ ಸಮೀಪ ಯುವಕ ಚಲಾಯಿಸುತ್ತಿದ್ದ ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ ರಸ್ತೆಗೆಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ಸಂಭವಿಸಿದೆ. ‌ ಮೃತಪಟ್ಟ ಯುವಕ ಸುರತ್ಕಲ್ ಸಮೀಪದ ಕುಳಾಯಿ ನಿವಾಸಿ ಉಜ್ವಲ್(26) ಎಂದು ತಿಳಿದು ಬಂದಿದೆ ‌ ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.

Read More »

ಬೆಳ್ತಂಗಡಿ: ಅಂಬಡಬೆಟ್ಟು ಸೇತುವೆ ಶಿಥಿಲ – ಘನವಾಹನ ಸಂಚಾರ ನಿಷೇಧ..!

ಬೆಳ್ತಂಗಡಿ ತಾಲೂಕಿನ ಕಲ್ಲಂಜ ಗ್ರಾಮದ ನಿಡಿಗಲ್ ಮೂಲಕ ನಡ ಗ್ರಾಪಂ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಪಂ ವ್ಯಾಪ್ತಿಯ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಅಂಬಡಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಸೇತುವೆಯು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿಬರ್ಂಧಿಸಲಾಗಿದೆ. ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದಿಂದ, ಸೂರ್ಯ, …

Read More »

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ ಅವರ ಬ್ಯಾಂಕ್ ಖಾತೆಯಿಂದ ಜನವರಿ 27ರಿಂದ ಜೂನ್ 20ರ ವರೆಗೆ ಸುಮಾರು 2,08,004ರೂ. ವರ್ಗಾವಣೆಗೊಂಡಿದೆ. ಸುಮಾರು 177 ಬಾರಿ ಬೇರೆ ಬೇರೆ ಕಂತು ಗಳಲ್ಲಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸಂಬಂಧ ಪಟ್ಟ ಬ್ಯಾಂಕ್‌ಗೆ ಹೋಗಿ ಅಧಿಕಾರಿಗಳನ್ನು ವಿಚಾರಿಸಿದಾಗ ಒಟಿಪಿ-ಡೆಬಿಟ್‌ ಕಾರ್ಡ್‌ ಮೂಲಕ ಹಣ ವರ್ಗಾ ವಣೆಯಾಗಿದೆ ಎಂದಿದ್ದಾರೆ. ಬಳಿಕ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಅವರು, ನನಗೆ ಹಣ ವರ್ಗಾವಣೆಗೆ …

Read More »

ರೋಟರಿ ಉಡುಪಿ: ವಿದ್ಯಾರ್ಥಿಗಳ ದತ್ತು ಸ್ವೀಕಾರ..!

ರೋಟರಿ ಉಡುಪಿ ವತಿಯಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಮತ್ತು ಲೆಕ್ಕಪರಿಶೋಧಕರ ದಿನಾಚರಣೆ ಕಾರ್ಯಕ್ರಮವು ಸೋಮವಾರ ಮಹಿಷಮರ್ಧಿನಿ ರೋಟರಿ ಸ್ಕೌಟ್ ಸಭಾಂಗಣದಲ್ಲಿ ಸೋಮವಾರ ಜರುಗಿತು. ರೋಟರಿ ಜಿಲ್ಲಾ ಗವರ್ನರ್ ರೋಟೇರಿಯನ್ ಸಿ.ಎ ದೇವಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಉಡುಪಿ ಮಾದರಿ ಕಾರ್ಯ ಮಾಡುತಿದ್ದು, ಈ ಸಾಲಿನ ಪ್ರಥಮ ದಿನದಂದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ ಎಂದರು. ರೋಟರಿ ಉಡುಪಿ ಅಧ್ಯಕ್ಷ ರೋ। ಗುರುರಾಜ್ ಭಟ್ ಟಿ ಅಧ್ಯಕ್ಷತೆ ವಹಿಸಿದ್ದರು. ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ೨೧ ವಿದ್ಯಾರ್ಥಿಗಳನ್ನು …

Read More »

ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..!

ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಒಂದೂವರೆ ವರ್ಷದ ಮಗುವಿನ ಮೃತದೇಹ ಬೆಳಗ್ಗೆ ಎನ್ನುವಷ್ಟರಲ್ಲಿ ಉಯ್ಯಾಲೆಯಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಎಂಬುವರ ಒಂದೂವರೆ ವರ್ಷದ ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಅಂದರೆ ಜೂನ್ 30ರ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಉಯ್ಯಾಲೆ (ಜೋಕಾಲಿ) ಯಲ್ಲಿ ಮಗುವಿನ ಮೃತದೇಹ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ …

Read More »

ಜಲಪಾತದ ನೀರಲ್ಲಿ ಕೊಚ್ಚಿ ಹೋದ 5 ಮಂದಿ: ಭಯಾನಕ ದೃಶ್ಯ ಸೆರೆ

ಮುಂಬೈ: ಭಾನುವಾರ ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪವಿರುವ ಜಲಪಾತದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಮುಳುಗಿದ್ದು, 4-9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಕುಟುಂಬವೊಂದು ವಿಹಾರಕ್ಕೆಂದು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಶೋಧ ಮತ್ತು ರಕ್ಷಣಾ ತಂಡಗಳು ಅಲ್ಲಿಗೆ ಧಾವಿಸಿ ನೀರಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿವೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ತಿಳಿಸಿದ್ದಾರೆ. ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದ ನೀರಲ್ಲಿ …

Read More »

ಬೆಳ್ತಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಕಾರ್ಕಳದಲ್ಲಿ ಶವವಾಗಿ ಪತ್ತೆ..!

ಬೆಳ್ತಂಗಡಿ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ (35) ಕಾರ್ಕಳದ ನಲ್ಲೂರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುಧಾಕರ್ ಶುಕ್ರವಾರ ಜೂನ್ 28 ರಂದು ಆಟೋರಿಕ್ಷಾ ಚಲಾಯಿಸಿಕೊಂಡು ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಅವರ ಕುಟುಂಬ ಸದಸ್ಯರು ವ್ಯಾಪಕ ಹುಡುಕಾಟ ನಡೆಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಕಾರ್ಕಳದ ನಲ್ಲೂರು ಸಮೀಪದ ಪಾಡೆಗುಡ್ಡೆ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

Read More »

You cannot copy content of this page.