ತಾಜಾ ಸುದ್ದಿ

ಉಡುಪಿ: ರಾಜ್ಯದ 25 ಜಾತಿಯವರಿಗೆ ಶೀಘ್ರ ಶುಭಸುದ್ದಿ-ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ

ಉಡುಪಿ: ರಾಜ್ಯದ 25 ವಿವಿಧ ಜಾತಿಗಳ ಮೀಸಲಾತಿ ಸಂಬಂಧ ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 17 ಜಾತಿ ವರದಿ ಮುದ್ರಿಸಲಾಗಿದ್ದು, ಇನ್ನೂ 8 ಜಾತಿ ವರದಿ ಸಿದ್ಧವಾಗಿವೆ. ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗುವುದು. ಅಲ್ಲದೆ ಕುಡುಬಿ ಜಾತಿಯನ್ನು ಬುಡಕಟ್ಟುವಿಗೆ ಸೇರಿಸಲು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಪಕ್ಷ ಬಯಸಿದರೆ ಮತ್ತೆ ಸ್ಪರ್ಧೆ ಪಕ್ಷ ಬಯಸಿದರೆ ತಾವು ರಾಜ್ಯ …

Read More »

ಮಂಗಳೂರು: ವಿಮಾನ‌ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ- 4 ಕೋಟಿ ಮೌಲ್ಯದ ಚಿನ್ನ ವಶಕ್ಕೆ

ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳೊಂದರಲ್ಲಿ ಅಕ್ರಮ ಸಾಗಾಟದ 4 ಕೋಟಿ ರೂ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ. ನವೆಂಬರ್ 1 – 30ರವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹತ್ತು ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ವೇಳೆ 24 ಕ್ಯಾರೆಟ್ ಶುದ್ಧತೆಯ 7,692.000 ಗ್ರಾಂ ಮೌಲ್ಯದ ಚಿನ್ನವನ್ನು ಸೀಝ್ ಮಾಡಲಾಗಿದೆ. ವಶಕ್ಕೆ ತೆಗೆದುಕೊಂಡ ಚಿನ್ನದ ಮೌಲ್ಯ 4,01,18,280 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ದುಬೈನಿಂದ ಆಗಮಿಸಿರುವ ಈ ಹತ್ತು ಪ್ರಯಾಣಿಕರು …

Read More »

ಕಾಪು: ಮನೆ ಮನೆಗೆ ತೆರಳಿ ವೈಯಕ್ತಿಕ ಮಾಹಿತಿ ಸಂಗ್ರಹ..! ಆತಂಕಗೊಂಡ ಜನ

ಕಾಪು: ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನೆ ಮಂದಿಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿ ಸಂಗ್ರಹ ಕುರಿತ ಆರೋಪದ ವಿಡಿಯೋವೊಂದು ವೈರಲ್ ಆಗಿದೆ.ಉಚ್ಚಿಲದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮನೆಮಂದಿಯ ಸಂಪೂರ್ಣ ಮಾಹಿತಿ ಕೇಳಿದ್ದಾರೆ.ವೈಯಕ್ತಿಕವಾಗಿ ಪಾಸ್‌ಪೋರ್ಟ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಕೇಳಿರುವ ಆರೋಪ ಕೇಳಿ ಬಂದಿದೆ.ಸಂಶಯ ಬಂದು ಮಾಹಿತಿ ನೀಡಲು‌ ಹಿಂದೇಟು ಹಾಕಿದಾಗ ಪೊಲೀಸರು ಬಂದು‌ ಮಾಹಿತಿ ಕಲೆ ಹಾಕುತ್ತಾರೆಂದು ಬೆದರಿಸಿರುವ ಆರೋಪ ಕೂಡ‌ ಮಾಡಲಾಗಿದೆ. ಈ …

Read More »

ಉಡುಪಿ: ಹೆಜಮಾಡಿ ಟೋಲ್ ಶುಲ್ಕ ಗೊಂದಲ ಕುರಿತು ಇಂದು(ಡಿ.3) ಜನಪ್ರತಿನಿಧಿಗಳ ಸಭೆ

ಉಡುಪಿ: ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿ, ಅಲ್ಲಿನ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಹೆಜಮಾಡಿ ಟೋಟ್ ದರ ಪರಿಷ್ಕರಣೆ ಸಂಬಂಧ ಡಿ.3ರ ಬೆಳಗ್ಗೆ 9ಕ್ಕೆ ತಾ.ಪಂ. ಕಚೇರಿಯಲ್ಲಿ ಜನ ಪ್ರತಿನಿಧಿಗಳ ಸಭೆ ನಡೆಸಲಿದೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಟೋಲ್‌ ದರ ಪರಿಷ್ಕರಣೆಯಾಗುವ ಸಾಧ್ಯತೆಯೂ ಇದೆ. ಸಭೆಯಲ್ಲಿ ಸಚಿವ ಸುನಿಲ್ ಕುಮಾರ್, ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಎಸ್ಪಿ …

Read More »

ಕಟಪಾಡಿ: ಟಿಪ್ಪರ್ ಡಿಕ್ಕಿ- ದ್ವಿಚಕ್ರ ಸಹಸವಾರ ಸಾವು

ಕಾಪು: ತಾಲೂಕಿನ ಕಟಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ಬಳಿ ಟಿಪ್ಪರ್ ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಸಂಭವಿಸಿದೆ. ಉದ್ಯಾವರ ಬೊಳ್ಳೆಯ ಸುಶಿಕ್ಷಿತ್(20) ಮೃತ ಯುವಕನಾಗಿದ್ದಾನೆ. ಅಪಘಾತದಿಂದ ಗಾಯಗೊಂಡಿರುವ ಬೈಕ್ ಸವಾರ ಜಯದೀಪ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಉದ್ಯಾವರದಿಂದ ಪಡುಬಿದ್ರೆ ಕಡೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುಶಿಕ್ಷಿತ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು …

Read More »

ಉಡುಪಿ: ಡಾಕ್ಟರ್ ಎಂದು ನಂಬಿಸಿ ಪ್ರೀತಿ ನಾಟಕ- ಮಹಿಳೆಗೆ 6.9 ಲಕ್ಷ ರೂ. ವಂಚನೆ

ಉಡುಪಿ: ಡಾಕ್ಟರ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಮಹಿಳೆಯೊಬ್ಬರಿಗೆ ವಂಚಕರು 6,91,000 ರೂ. ವಂಚಿಸಿದ ಘಟನೆ ನಡೆದಿದೆ. ಕಳೆದ ಸೆಪ್ಟಂಬರ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ತಾನು ಸ್ಕಾಟ್ಲೆಂಡ್‌ನಲ್ಲಿ ಡಾಕ್ಟರ್‌ ಎಂಬುದಾಗಿ ಬಿಂಬಿಸಿದ್ದ. ಆನಂತರ ಮಹಿಳೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ಚಾಟಿಂಗ್ ನಡೆಸಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ನವೆಂಬರ್ ಮೊದಲ ವಾರದಲ್ಲಿ ಕೊರಿಯರ್ ಮೂಲಕ ಪಾರ್ಸೆಲ್ ಗಿಫ್ಟ್ ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ ವ್ಯಕ್ತಿ, ಬಳಿಕ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಪೌಂಡ್ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ …

Read More »

ಹೃದಯ ವಿದ್ರಾವಕ ಘಟನೆ; ಶಾಲೆಯಲ್ಲಿಯೇ ಕುಸಿದು ಬಿದ್ದ ಬಾಲಕ- 6ನೇ ತರಗತಿ ವಿದ್ಯಾರ್ಥಿ ಮೃತ್ಯು

ಹುಬ್ಬಳ್ಳಿ: 6ನೇ ತರಗತಿಯ ಬಾಲಕನೊಬ್ಬ ಶಾಲೆಯಲ್ಲಿಯೇ  ಕುಸಿದುಬಿದ್ದಿದ್ದು, ಹೃದಯಾಘಾದಿಂದ ಸಾವನ್ನಪ್ಪಿರುವ ಘಟನೆ ಧಾರವಾಡ  ಜಿಲ್ಲೆಯ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕಲಘಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ  ಮಕ್ತುಮ್ ಮಹ್ಮದ್ ರಫಿ ಮನಿಯಾರ್ (13) ಮೃತ ಬಾಲಕನಾಗಿದ್ದು, ಆತ ಕೆಲ ವರ್ಷಗಳಿಂದಲೇ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಶಾಲೆಯಲ್ಲಿ ಬಾಲಕ ಕುಸಿದುಬಿದ್ದ ತಕ್ಷಣವೇ ಆತನನ್ನು ಶಿಕ್ಷಕರು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Read More »

ಗಂಗೊಳ್ಳಿ: ನದಿಗೆ ಬಿದ್ದ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರು ಬಳಿ ಬೋಟಿನಿಂದ ಬೋಟಿನಿಂದ ಮೀನು ಖಾಲಿ ಮಾಡುವಾಗ ಅಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಒರಿಸ್ಸಾ ಮೂಲದ ಪ್ರಮೋದ ಮಿನ್ಜ್(32) ಎಂದು ಗುರುತಿಸ ಲಾಗಿದೆ. ಇವರು ಗಂಗೊಳ್ಳಿ ಮೂಲದ ಪ್ರಭಾಕರ ಖಾರ್ವಿ ಎಂಬವರ ಶ್ರೀ ಯಕ್ಷೇಶ್ವರಿ ಎಂಬ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ನ.30ರಂದು ಗಂಗೊಳ್ಳಿ ಬಂದರು ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ರಾತ್ರಿ 9.30ಕ್ಕೆ ಬೋಟಿನಿಂದ ಮೀನು ಖಾಲಿ ಮಾಡುತ್ತಿರುವಾಗ …

Read More »

ಸುಬ್ರಹ್ಮಣ್ಯ ಷಷ್ಟಿ ಮಹೋತ್ಸದಲ್ಲಿ ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನಿಗೆ ಸುಬ್ರಹ್ಮಣ್ಯ ಪೋಲಿಸ್ ಸಿಬ್ಬಂದಿಯಿಂದ ಹಲ್ಲೆ

ಕಡಬ : ಸುಬ್ರಹ್ಮಣ್ಯ ಷಷ್ಠಿ ಮಹೋತ್ಸದಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ ನೀಡುವಂತೆ ಒತ್ತಾಯಿಸಿ ಪೋಲಿಸ್ ವಸತಿ ಗೃಹದಲ್ಲಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಯೂಸ್ ಐಸ್ ಕ್ರೀಂ ವ್ಯಾಪಾರಿ ಕುಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಆರೋಪ ಮಾಡುತ್ತಿದ್ದಾನೆ. ಪಂಚಮಿಯ ರಾತ್ರಿ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ಹಣಕ್ಕಾಗಿ ಒತ್ತಾಯಿಸಿದರು. ನಾನು ಒಂದು ಸಾವಿರ ರೂಪಾಯಿ ನೀಡಿದೆ. ಐದು ಸಾವಿರ ರೂಪಾಯಿ ನೀಡುವಂತೆ ಹೇಳಿದರು. ನಾನು ನೀಡದಿದ್ದಾಗ …

Read More »

ಕಾರ್ಕಳ: ವಿದೇಶದಿಂದ ಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತ್ಯು

ಕಾರ್ಕಳ: ವಿದೇಶದಿಂದ ಬಂದಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪಿದ ಘಟನೆ ನಡೆಸಿದೆ.ರಿತೇಶ್ ನೀಲ್ ಮೊಂತೆರೋ(35) ಮೃತಪಟ್ಟ ಯುವಕ. ರಿತೇಶ್ ದುಬೈನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತೀಚೆಗೆ ಊರಿಗೆ ಬಂದಿದ್ದರು. ಕೆಲ ದಿನಗಳ ಹಿಂದೆ ಮೂಡುಬಿದಿರೆಯಲ್ಲಿ ನಾದಿನಿಯ ಮನೆಯ ಅಂಗಳದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಬಳಿಕ‌ ಚಿಕಿತ್ಸೆ ಪಡೆದು ಬೆಳ್ಮನ್ ನ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ದಿನಾಂಕ ನ.30ರಂದು ಊಟ ಮಾಡಿ ಮಲಗಿದವರು ಬೆಳ್ಳಿಗ್ಗೆ ಎಬ್ಬಿಸಿದಾಗ ಅವರು ಮಾತನಾಡದೇ ಇದ್ದುದರಿಂದ ಅವರನ್ನು ಉಪಚರಿಸಿ ಬೆಳ್ಮಣನಿನ ವೈದ್ಯರನ್ನು ಮನೆಗೆ ಕರೆಸಿ ತೋರಿಸಿದಾಗ ರಿತೇಶ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ …

Read More »

You cannot copy content of this page.