ಉಡುಪಿ: ಇವತ್ತು ಮತ್ತೊಂದು ಚಂದ್ರ ಗ್ರಹಣಕ್ಕೆ ಕ್ಷಣಗಣನೆ ಆರಂಭಗೊಂಡಿದೆ.ಶ್ರೀ ಕೃಷ್ಣಮಠದಲ್ಲಿ ಗ್ರಹಣ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವತ್ತು ಬೆಳಗ್ಗಿನಿಂದಲೇ ಆಸ್ತಿಕರು ಕೃಷ್ಣ ದರ್ಶನಕ್ಕೆ ಬರುತ್ತಿದ್ದಾರೆ.ಶ್ರೀ ಕೃಷ್ಣನ ದರ್ಶನ ಮಾಡಿ ಕೈಮುಗಿದು ಭಕ್ತರು ತೆರಳಿತ್ತಿದ್ದಾರೆ.ಆದರೆಗ್ರಹಣ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿರುವುದು ಕಂಡು ಬಂತು. ಇದೇವೇಳೆ ಬೆಳಗ್ಗಿನಿಂದಲೇ ಅಷ್ಟಮಠಗಳ ಯತಿಗಳು ಜಪತಪದಲ್ಲಿ ನಿರತರಾಗಿದ್ದಾರೆ. ಇವತ್ತು ಎಂದಿನಂತೆ ಭಕ್ತರಿಗೆ ಅನ್ನ ಪ್ರಸಾದ ಇರುವುದಿಲ್ಲ.ಹಾಗೆಯೇ ಮಠದಲ್ಲಿ ಗ್ರಹಣ ಮೋಕ್ಷ ಬಳಿಕ ರಾತ್ರಿಯ ಮಹಾಪೂಜೆ ನೆರವೇರಿಸಲಾಗುತ್ತದೆ.
Check Also
ಗಣಪತಿ ಮೆರವಣಿಗೆಯಲ್ಲಿ ಘರ್ಷಣೆ, ಅಂಗಡಿಗಳಿಗೆ ಬೆಂಕಿ ಹಚ್ಚಿದ ಅನ್ಯಕೋಮಿನ ಯುವಕರು- 144 ಸೆಕ್ಷನ್ ಜಾರಿ..!
ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೂರ್ತಿ ವಿಸರ್ಜನ ಮೆರವಣಿಗೆ ವೇಳೆ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಘಟನೆಯ ನಂತರ ಕೆಲವು …