ತಾಜಾ ಸುದ್ದಿ

`ಕೋವಿಡ್ ಕಂಟ್ರೋಲ್’ ಗೆ ರಾಜ್ಯ ಸರ್ಕಾರದಿಂದ ಮಹತ್ವದ ಸಭೆ : ಇಂದಿನಿಂದಲೇ ಹೊಸ ಮಾರ್ಗಸೂಚಿ ಜಾರಿ ಸಾಧ್ಯತೆ

ಬೆಂಗಳೂರು:ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಭಾರತದಲ್ಲೂ ಆತಂಕ ಶುರುವಾಗಿದ್ದು, ಕೇಂದ್ರ ಸರ್ಕಾರವು ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟಿಸಿದ್ದು, ಇಂದು ರಾಜ್ಯ ಸರ್ಕಾರವು ಮಹತ್ವದ ಸಭೆ ನಡೆಸಲಿದೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್​ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್​ ನಡೆಯಲಿದೆ. ಸಭೆಯಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್​​​, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೊಸ ವರ್ಷಾಚರಣೆ ಬಗ್ಗೆ ಮತ್ತೊಂದು ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದರೆ, ರಾಜ್ಯ ಸರ್ಕಾರವು ಇಂದು ಉನ್ನತ ಮಟ್ಟದ ಸಭೆ ಕರೆದಿದೆ. ಸಭೆಯ ನಂತರ ವಿಸ್ತೃತ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದೆ. ಬೆಂಗಳೂರಿ ನಗರಕ್ಕೆ ಪ್ರತ್ಯೇಕ ನಿಯಮ …

Read More »

ಉಪ್ಪಿನಂಗಡಿ: ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬಸ್ ಡಿಕ್ಕಿ- ಕುದುರೆ ಸಾವು, ಸವಾರ ಗಂಭೀರ

ಉಪ್ಪಿನಂಗಡಿ: ಕುದುರೆಯೊಂದಕ್ಕೆ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ್ದು, ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದುಮಲೆ ಎಂಬಲ್ಲಿ ಡಿ.25 ರ ಭಾನುವಾರ ನಡೆದಿದೆ. ಸಚಿನ್ ಪೆಲಪ್ಪಾರು ಗಾಯಗೊಂಡ ಕುದುರೆ ಸವಾರ. ಉಪ್ಪಿನಂಗಡಿಯಲ್ಲಿ ಸಚಿನ್ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತಿದ್ದ ಸರ್ಕಾರಿ ಬಸ್ ಕುದುರೆಗೆ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಪ್ಪಿನಂಗಡಿ ಸಮೀಪ ಪಿಲಿಗೂಡಿನ ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಅಪಘಾತದ …

Read More »

ಜಲೀಲ್ ಮೃತದೇಹ ಇದ್ದ ಆ್ಯಂಬುಲೆನ್ಸ್ ತಡೆದು ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಒತ್ತಾಯ, ಉದ್ವಿಗ್ನ ಸ್ಥಿತಿ ನಿರ್ಮಾಣ!

ಮಂಗಳೂರು: ನಿನ್ನೆ ರಾತ್ರಿ ಕೊಲೆಯಾದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರು ಸ್ಥಳದಲ್ಲೇ ಧರಣಿ ನಡೆಸಿದರು. ಇಂದು ಮಧ್ಯಾಹ್ನ ವೇಳೆ 9ನೇ ಬ್ಲಾಕ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ನೆರೆದಿದ್ದ ಸಾವಿರಾರು ಮಂದಿ ಜಲೀಲ್ ಅವರ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಿ ಧರಣಿ ಆರಂಭಿಸಿದ್ದು, ಆರೋಪಿಗಳ‌ ಬಂಧನವಾಗದೇ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. …

Read More »

ಶುದ್ಧ ತುಳಸಿ ಮಾಲೆ ಧರಿಸಿದರೆ ಯಾವ ಕೊರೊನಾವೂ ಬರುವುದಿಲ್ಲ ; ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್

ಮಂಗಳೂರು: ಕೊರೊನಾವನ್ನು ತಡೆಯುವ ಅತ್ಯಂತ ಸುಲಭ ಮಾರ್ಗವೆಂದರೆ ತುಳಸಿ ಮಾಲೆ ಧರಿಸುವುದು: ಹೀಗೊಂದು ಸಲಹೆಯನ್ನು ನೀಡಿದ್ದಾರೆ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿ ಮಾಡುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌. ಶಿವಮೊಗ್ಗದಲ್ಲಿ ಭಾನುವಾರ ನಡೆಯಲಿರುವ ಹಿಂದು ಜಾಗರಣ ಸಮಾವೇಶದಲ್ಲಿ ಭಾಗವಹಿಸಲಿರುವ ಅವರು ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಮಾತನಾಡಿದ ಅವರು, ʻʻಶುದ್ಧ ತುಳಸಿ ಮಾಲೆಯನ್ನು ಧರಿಸಿದರೆ ಯಾವುದೇ ಕೊರೊನಾ ಬರುವುದಿಲ್ಲʼʼ ಎಂದರು. ʻʻಕೊರಳಿಗೆ ಹಾಕಿರುವ ತುಳಸೀ ಮಾಲೆಯಿಂದ ಔಷಧೀಯ ಗುಣಗಳು ಹುಟ್ಟುತ್ತವೆ. ಬೂಸ್ಟರ್ ಡೋಸನ್ನು ಅಗತ್ಯವಾಗಿ ಪಡೆದುಕೊಂಡು, …

Read More »

ಉಡುಪಿ ಕಟಪಾಡಿ- ಶಿರ್ವ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ : ಮಹಿಳೆ ಸೇರಿ ಇಬ್ಬರ ದುರಂತ ಸಾವು

ಉಡುಪಿ : ಕಟಪಾಡಿ- ಶಿರ್ವ ರಸ್ತೆಯಲ್ಲಿ ಕಾರು ಮತ್ತು ಟೆಂಪೋ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರೆ  ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಉಡುಪಿ ಜಿಲ್ಲೆಯ ಕಟಪಾಡಿ – ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದೆ. ಮೂಡಬಿದಿರೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರಿಗೆ ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಟೆಂಪೋ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವತ್ರೆಗೆ ಕಾರಿನಲ್ಲಿದ ಇದ್ದ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ …

Read More »

ಸುರತ್ಕಲ್: ಜಲೀಲ್ ಹತ್ಯೆ ಪ್ರಕರಣ ;ತನಿಖೆ ತೀವ್ರಗೊಳಿಸಿದ ಪೊಲೀಸರು..!

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ 24 ರಂದು ಸಂಜೆ ನಡೆದ ಅಂಗಡಿ ಮಾಲಿಕ ಜಲೀಲ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಹತ್ಯೆಯಾದ ಜಲೀಲ್ ಮೃತ ದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಜಲೀಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದೆ . ಬಳಿಕ ಇಂದು ಅಪರಾಹ್ನ ಕೃಷ್ಣಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇಬ್ಬರು ಮುಸುಕುದಾರಿಗಳು ಬಂದು ಜಲೀಲ್ …

Read More »

ವಿಚಿತ್ರ ಘಟನೆ: ಮಹಿಳೆಯ ಕಣ್ಣಿನಿಂದ ಉದುರುತ್ತಿರುವ ಕಲ್ಲಿನ ಚೂರುಗಳು; ಈ ಬಗ್ಗೆ ವೈದ್ಯರು ಹೇಳುವುದೇನು?

ಮೈಸೂರು:ಮಹಿಳೆಯೋರ್ವರ ಕಣ್ಣಿನಿಂದ ಕಲ್ಲಿ‌ನ ಚೂರುಗಳು ಉದುರುತ್ತಿರುವ ವಿಚಿತ್ರ ಘಟನೆ ಹುಣಸೂರು ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಿಂದ ವರದಿಯಾಗಿದೆ. ಬೆಂಕಿಪುರ ಗ್ರಾಮದ ವಿಜಯ ಎಂಬ ಮಹಿಳೆಯ ಕಣ್ಣಿನಿಂದ ಈ ರೀತಿ ಕಲ್ಲುಗಳು ಉದುರುತ್ತಿದೆ. ಗ್ರಾಮಸ್ಥರು‌ ಮತ್ತು ವೈದ್ಯರು ಅಚ್ಚರಿಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಿಜಯ,ತಲೆಯ ಮೆದುಳಿನ ಭಾಗದಲ್ಲಿ ನೋವು ಬರುತ್ತಿತ್ತು, ತಲೆಯಲ್ಲಿ ಉರುಳಿಕೊಂಡು ಹೋದ ಹಾಗೆ ಭಾಸವಾಗುತ್ತಿತ್ತು. ಮುಖವೆಲ್ಲಾ ಚುಚ್ಚಿದ ರೀತಿ ಅನಿಸಿ ಕಣ್ಣಿನ ಮುಂಭಾಗದಲ್ಲಿ ಕಲ್ಲಿನ ಚೂರು ಬೀಳುತ್ತಿದೆ. 200ಕ್ಕೂ ಹೆಚ್ಚು ಕಲ್ಲುಗಳು ಕಣ್ಣಿನಿಂದ ಬಿದ್ದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ …

Read More »

ಮಂಗಳೂರು; ಜಲೀಲ್ ಕೊಲೆ ಹಿನ್ನೆಲೆ, 4 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಸನ್ ಜಾರಿ

ಮಂಗಳೂರು:ಸುರತ್ಕಲ್ ನಲ್ಲಿ ಜಲೀಲ್ ಕೊಲೆ ಬೆನ್ನಲ್ಲೇ ಪಣಂಬೂರು, ಬಜ್ಪೆ, ಕಾವೂರು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಕಮಿಷನರ್ ಆದೇಶಿಸಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಡಿ.25 ರ ಬೆಳಗ್ಗೆ 6 ಗಂಟೆಯಿಂದ ಡಿ.27 ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಈ ನಿಷೇಧಾಜ್ಞೆ ಕ್ರಿಸ್ ಮಸ್ ಆಚರಣೆ, ತುರ್ತು ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ಸುರತ್ಕಲ್, ಬಜಪೆ ಕಾವೂರು, …

Read More »

ಸುರತ್ಕಲ್: ವ್ಯಕ್ತಿಯೋರ್ವರಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು

ಸುರತ್ಕಲ್:ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ನೈತಂಗಡಿ ಬಳಿ ನಡೆದಿದೆ. ಕೃಷ್ಣಾಪುರ ನಿವಾಸಿ ಜಲೀಲ್ ಅವರ ಎದೆಯ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ. ಜಲೀಲ್ ಮೇಲೆ ಇಬ್ಬರು ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಕೇರಳದ ಈ ವಿಶ್ವವಿದ್ಯಾನಿಲಯದಲ್ಲಿ ವಿಧ್ಯಾರ್ಥಿನಿಯರಿಗೆ 60 ದಿನ ರಜೆ -ಯಾವ ಕಾರಣಕ್ಕೆ ಗೊತ್ತಾ…?

ಕೊಟ್ಟಾಯಂ : ಕೇರಳದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿಧ್ಯಾರ್ಥಿನಿಯರಿಗೆ 60 ದಿನಗಳ ಮೆಟರ್ನಿಟಿ ರಜೆ ನೀಡಲು ತೀರ್ಮಾನಿಸಿದೆ. ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ಸ್ನಾತಕ (ಯುಜಿ) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿನಿಯರಿಗೆ ಈ ಅವಕಾಶ ನೀಡಲಿದೆ. ವಿವಿಯ ಕುಲಪತಿ ಸಿ.ಟಿ ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಮಾತೃತ್ವ ರಜೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುವುದನ್ನು ತಡೆಯಬಹುದಾಗಿದೆ ಎಂದು ವಿವಿ ತಿಳಿಸಿದೆ. …

Read More »

You cannot copy content of this page.