ಮಂಗಳೂರು; ಜಲೀಲ್ ಕೊಲೆ ಹಿನ್ನೆಲೆ, 4 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಸನ್ ಜಾರಿ

ಮಂಗಳೂರು:ಸುರತ್ಕಲ್ ನಲ್ಲಿ ಜಲೀಲ್ ಕೊಲೆ ಬೆನ್ನಲ್ಲೇ ಪಣಂಬೂರು, ಬಜ್ಪೆ, ಕಾವೂರು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಕಮಿಷನರ್ ಆದೇಶಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಡಿ.25 ರ ಬೆಳಗ್ಗೆ 6 ಗಂಟೆಯಿಂದ ಡಿ.27 ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ.

ಈ ನಿಷೇಧಾಜ್ಞೆ ಕ್ರಿಸ್ ಮಸ್ ಆಚರಣೆ, ತುರ್ತು ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಇದಲ್ಲದೆ ಸುರತ್ಕಲ್, ಬಜಪೆ ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

Check Also

BIG NEWS: ವಿಧಾನಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ‘ಸಿಎಂ ಆಸನ’ದ ಮೇಲೆ ಕುಳಿತು ಮಹಾ ಯಡವಟ್ಟು

ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡೋದಕ್ಕೆ ವಿಧಾನಸಭೆಯ ಸದನಕ್ಕೆ ತೆರಳಿದ್ದಂತ ಮೂಡುಗೆರೆ ಶಾಸಕಿ ನಯನಾ ಮೋಟಮ್ಮ …

Leave a Reply

Your email address will not be published. Required fields are marked *

You cannot copy content of this page.