December 9, 2024
768-512-17298244-thumbnail-3x2-lek

ಮೈಸೂರು:ಮಹಿಳೆಯೋರ್ವರ ಕಣ್ಣಿನಿಂದ ಕಲ್ಲಿ‌ನ ಚೂರುಗಳು ಉದುರುತ್ತಿರುವ ವಿಚಿತ್ರ ಘಟನೆ ಹುಣಸೂರು ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಿಂದ ವರದಿಯಾಗಿದೆ.

ಬೆಂಕಿಪುರ ಗ್ರಾಮದ ವಿಜಯ ಎಂಬ ಮಹಿಳೆಯ ಕಣ್ಣಿನಿಂದ ಈ ರೀತಿ ಕಲ್ಲುಗಳು ಉದುರುತ್ತಿದೆ. ಗ್ರಾಮಸ್ಥರು‌ ಮತ್ತು ವೈದ್ಯರು ಅಚ್ಚರಿಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ವಿಜಯ,ತಲೆಯ ಮೆದುಳಿನ ಭಾಗದಲ್ಲಿ ನೋವು ಬರುತ್ತಿತ್ತು, ತಲೆಯಲ್ಲಿ ಉರುಳಿಕೊಂಡು ಹೋದ ಹಾಗೆ ಭಾಸವಾಗುತ್ತಿತ್ತು. ಮುಖವೆಲ್ಲಾ ಚುಚ್ಚಿದ ರೀತಿ ಅನಿಸಿ ಕಣ್ಣಿನ ಮುಂಭಾಗದಲ್ಲಿ ಕಲ್ಲಿನ ಚೂರು ಬೀಳುತ್ತಿದೆ.
200ಕ್ಕೂ ಹೆಚ್ಚು ಕಲ್ಲುಗಳು ಕಣ್ಣಿನಿಂದ ಬಿದ್ದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು,ಈ ರೀತಿಯ ಪ್ರಕರಣ ನನಗೂ ಆಶ್ಚರ್ಯ ತಂದಿದೆ.ಇದು ಮೊದಲ ಕೇಸ್ ಆಗಿದ್ದು, ಪರೀಕ್ಷೆಯ ವರದಿಗಳು ಬಂದ ನಂತರ ಕಾರಣ ಖಚಿತವಾಗಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.