ತಾಜಾ ಸುದ್ದಿ

BIGG NEWS : ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌ಗೆ ಭಾರೀ ದಂಡ

ನವದೆಹಲಿ: ಚಲಿಸುತ್ತಿರುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರಿಗೆ ಭಾರೀ ದಂಡ ವಿಧಿಸಲಾಗಿದೆ. ‘ಲಂಕಾಷೈರ್ನಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ವ್ಯಕ್ತಿಯನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ನಂತರ ನಾವು ಇಂದು (ಜನವರಿ 20) ಲಂಡನ್ನ 42 ವರ್ಷದ ವ್ಯಕ್ತಿಗೆ ನಿಗದಿತ ದಂಡದ ಷರತ್ತುಬದ್ಧ ಪ್ರಸ್ತಾಪವನ್ನು ನೀಡಿದ್ದೇವೆ’ ಎಂದು ಲಂಕಾಶೈರ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸುನಕ್ ಅವರ ಹೆಸರನ್ನು ಉಲ್ಲೇಖಿಸದೆ, ಲಂಕಾಶೈರ್ ಪೊಲೀಸರು ಲಂಡನ್ನ 42 ವರ್ಷದ ವ್ಯಕ್ತಿಗೆ ನಿಗದಿತ ದಂಡದ …

Read More »

ಉಡುಪಿ: ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತಿ

ಉಡುಪಿ: ಕುಡುಕ ಪತಿ ಮಹಾಶಯನೊಬ್ಬ ಪತ್ನಿಯ ಕಾಲಿನ ಕೆಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ಇಲ್ಲಿನ ಕಿರಿಮಂಜೇಶ್ವರ ಗ್ರಾಮದ ಸೋಡಿತಟ್ಟು ನಿವಾಸಿ ಶ್ರೀನಿವಾಸ ನಾಯರಿ ಎಂಬವರ ಮಗಳು ವಿಜಯಲಕ್ಷ್ಮೀ 2004ರಲ್ಲಿ ಕಿರಿಮಂಜೇಶ್ವರ ಗ್ರಾಮದ ಹೊಸಮನೆಯ ಶಿವಶಂಕರ ನಾಯರಿ ಎಂಬವರನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯ ಗಂಡನ ಮನೆಯಲ್ಲಿದ್ದ ವಿಜಯಲಕ್ಷ್ಮೀ ನಂತರ ತಾಯಿ ಮನೆಯಲ್ಲಿದ್ದರು.ಶಿವಶಂಕರ ನಾಯರಿ ಮದ್ಯಪಾನ ಮಾಡಿ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಜಗಳ ಮಾಡಿ ಹೊಡೆದು, ಬೆದರಿಕೆ ಹಾಕುತ್ತಿದ್ದ ಎಂದು ಎನ್ನಲಾಗಿದೆ. ಲಲಿತಾ, ಜಯಲಕ್ಷ್ಮಿ, ಗೀತಾ ಎಂಬವರು ವಿಜಯಲಕ್ಷ್ಮಿಯನ್ನು ಕೊಲ್ಲುವ …

Read More »

18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಅಭಿಮಾನಿ

ಸೂರತ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ. “ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗುಜರಾತ್‌ನ 182 ಸ್ಥಾನಗಳ ಪೈಕಿ 156ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ 156 ಗ್ರಾಂ ತೂಕದ ಅವರ ಪ್ರತಿಮೆಯನ್ನು ತಯಾರಿಸಲಾಗಿದೆ. ನಮ್ಮ ಕಾರ್ಖಾನೆಯಲ್ಲಿ 20 ಮಂದಿ ಕುಶಲಕರ್ಮಿಗಳು ಸುಮಾರು ಮೂರು ತಿಂಗಳಲ್ಲಿ …

Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎ ನಿಂದ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿದ್ದು, ಒಟ್ಟು 20 ಆರೋಪಿಗಳನ್ನು ಉಲ್ಲೇಖೀಸಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಮಂದಿಗಾಗಿ ಹುಡುಕಾಟ ನಡೆದಿದೆ. ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್‌ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ನಡುವೆ ಪ್ರಕರಣದ ಆರೋಪಿಗಳಾಗಿ ತಲೆಮರೆಸಿಕೊಂಡಿರುವ ಬಂಟ್ವಾಳ ತಾಲೂಕಿನ ಕೊಡಾಜೆಯ ಮೊಹಮ್ಮದ್‌ ಷರೀಫ್, …

Read More »

ಜ.22 ರಂದು ಕದ್ರಿ ಮಂಜುನಾಥ ಸ್ವಾಮಿಯ ರಥೋತ್ಸವ ಪ್ರಯುಕ್ತ ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕರೊಂದಿಗೆ ಅದ್ದೂರಿ ಕದ್ರಿ ನೈಟ್

ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್(ರಿ) ವತಿಯಿಂದ ಅಳ್ವಾಸ್ ಜಿಮ್ ಹಾಗೂ ದಕ್ಷಿಣ ಕನ್ನಡ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡಿಂಗ್ ಇದರ ಸಹಯೋಗದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ರವರ ಸಹಕಾರದೊಂದಿಗೆ ಕದ್ರಿ ಮನೋಹರ್ ಶೆಟ್ಟಿ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮ ಕದ್ರಿ ಮಂಜುನಾಥ ಸ್ವಾಮಿಯ ರಥೋತ್ಸವದಂದು ಕದ್ರಿ ಮೈದಾನದಲ್ಲಿ ದಿನಾಂಕ 22-01-2023 ರಂದು ನಡೆಯಲಿದೆ.  …

Read More »

ಎ. 1ರಿಂದ 15 ವರ್ಷ ಹಳೆಯ ವಾಹನಗಳು ಗುಜರಿಗೆ

ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನಗಳ ಇಂಧನ ಕ್ಷಮತೆಯನ್ನು ಹೆಚ್ಚಿಸಲು, ಭಾರತ ಸರ್ಕಾರವು ‘ವಾಹನ ಸ್ಕ್ರ್ಯಾಪ್ ನೀತಿ’ಯನ್ನು ಪರಿಚಯಿಸಿದೆ. ಈ ನೀತಿಯಡಿ ದೇಶದಲ್ಲಿ 15 ವರ್ಷ ಹಳೆಯ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ. ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಎಲ್ಲಾ ಹಳೆಯ ವಾಹನಗಳನ್ನು ನೋಂದಾಯಿತ ಸ್ಕ್ರ್ಯಾಪ್ ಕೇಂದ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳನ್ನು ಏಪ್ರಿಲ್ 1 ರಿಂದ …

Read More »

ಮಂಗಳೂರು ಡ್ರಗ್ಸ್ ಕೇಸ್: ಏಳು ವಿದ್ಯಾರ್ಥಿಗಳು, ಇಬ್ಬರು ವೈದ್ಯರ ಅಮಾನತು

ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಒಂದು ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಮತ್ತು ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ ಮಂಗಳೂರು ಪೊಲೀಸ್ ಆಯುಕ್ತ ಎನ್.‌ಶಶಿಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿತ್ತು.‌ ಶುಕ್ರವಾರ ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ನಡುವೆ …

Read More »

ಜೈಲಿನಿಂದ್ಲೇ ಹೊಸ ವಿಡಿಯೋ ಹರಿಬಿಟ್ಟ ಭಯೋತ್ಪಾದಕ ‘ಮಕ್ಕಿ’

ವಿಶ್ವಸಂಸ್ಥೆಯು ಇದುವರೆಗೆ ಪಾಕಿಸ್ತಾನಕ್ಕೆ ಸಂಬಂಧಿಸಿದ ಸುಮಾರು 150 ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳ ಹೆಸರನ್ನ ಕಪ್ಪುಪಟ್ಟಿಗೆ ಸೇರಿಸಿದೆ. ಭದ್ರತಾ ಮಂಡಳಿಯ ಅಲ್ ಖೈದಾ ನಿರ್ಬಂಧಗಳ ಸಮಿತಿಯು ಭಯೋತ್ಪಾದಕ ಎಂದು ಘೋಷಿಸಿದ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿ ಸಧ್ಯ ಆ ಪಟ್ಟಿಗೆ ಸೇರಿದ ಹೊಸ ಹೆಸರು. ಮತ್ತೊಂದೆಡೆ, ಮಕ್ಕಿ ಗುರುವಾರ ಲಾಹೋರ್ನ ಕೋಟ್ ಲಖ್ಪತ್ ಜೈಲಿನಿಂದ ವೀಡಿಯೊವನ್ನ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ತನಗೆ ಅಲ್ ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಈ ವಿಡಿಯೋದಲ್ಲಿ ಮುಂಬೈ …

Read More »

ಕಡಬ: ಹಣದ ಬೇಡಿಕೆಯಿಟ್ಟು ದುಷ್ಕರ್ಮಿಗಳಿಂದ ಸಹೋದರರ ಅಪಹರಣ..!

ಕಡಬ : ಹಣಕ್ಕೆ ಬೇಡಿಕೆಯಿಟ್ಟು ಸಹೋದರರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ,ಕೊಲೆ ಬೆದರಿಕೆಯೊಡ್ಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜನವರಿ.19 ರ ರಾತ್ರಿ ಈ ಘಟನೆ ನಡೆದಿದ್ದು, ಅಪಹರಣಕ್ಕೊಳಗಾದ ಸಹೋದರಲ್ಲಿ ಓರ್ವ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೊಯಿಲಾ ನಿವಾಸಿಯಾದ ನಿಝಾಮ್ ಎಂಬಾತನನ್ನು ಅಪಹರಿಸಿ ಜೆಸಿಬಿ ಸಿದ್ದೀಕ್ ಎಂಬಾತನ ತಂಡ ಈ ಕೃತ್ಯ ನಡೆಸಿರುವುದಾಗಿ ನಿಝಾಮ್ ಆರೋಪಿಸಿದ್ದು, ಆತನ ಸಹೋದರ ಶಾರೂಕ್ ನನ್ನು ಅಪಹರಣಕಾರರು ತಮ್ಮ ಬಳಿಯೇ …

Read More »

ಫುಟ್ ಪಾತ್‌ ನಲ್ಲಿ ನವಜಾತ ಶಿಶುವಿನ ಶವ ಪತ್ತೆ..!

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಪಟ್ಟಣದ ರಾಮಪಟ್ಟಣ ಸರ್ಕಲ್‌ನ ರಸ್ತೆಯ ಫುಟ್‌ಪಾತ್ ಮೇಲೆ ಆಗತಾನೆ ಹೆರಿಗೆ ಆಗಿರುವ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಪಟ್ಟಣದ ವಾರ್ಡ್ ನಂಬರ್ 9ರ ರಾಮಪಟ್ಟಣ ಸರ್ಕಲ್‌ನಲ್ಲಿ ಫುಟ್‌ಪಾತ್ ಮೇಲೆ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ಪಟ್ಟಣದ ರಾಮಪಟ್ಟಣ ಸರ್ಕಲ್‌ನಲ್ಲಿ ಗುಡಿಬಂಡೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣದಲ್ಲಿ ಕಸ ಗುಡಿಸಲು ಹೋದಾಗ ಶಿಶು ಪತ್ತೆಯಾಗಿದೆ. ಮೊದಲು ಸಾರ್ವಜನಿಕರು ಕೋತಿ ಸತ್ತಿರಬಹುದು ಎಂದುಕೊಂಡಿದ್ದರು. ಬಳಿಕ ಪರಿಶೀಲಿಸಿದಾಗ ಅದು ನವಜಾತ ಹೆಣ್ಣು ಶಿಶುವಿನ ಶವ ಎಂಬುದು ತಿಳಿದುಬಂದಿದೆ. ತಕ್ಷಣ …

Read More »

You cannot copy content of this page.