ತಾಜಾ ಸುದ್ದಿ

ಸುಳ್ಯ: ಪ್ರವೀಣ್‌ ಹತ್ಯೆ ಆರೋಪಿಗಳಿಗೆ ಎನ್‌ಐಎ ಗಡುವು – ಜೂ. 30ರೊಳಗೆ ಶರಣಾಗದಿದ್ದರೆ ಮನೆ ಜಪ್ತಿ , ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಮೈಕ್ ಅನೌನ್ಸ್

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂ. 30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಯನ್ನು ಜಫ್ತಿ ಮಾಡಲಾಗುವುದೆಂದು ಸುಳ್ಯ ನಗರದಲ್ಲಿ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಲಾಗಿದೆ. ಎನ್‌ಐಎ ನ್ಯಾಯಾಲಯದ ಅಧಿಕಾರಿಗಳು ಹಾಗೂ ಸುಳ್ಯ ಪೊಲೀಸ್ ಸಿಬ್ಬಂದಿಯವರು ಅನೌನ್ಸ್ ಮಾಡಿದ್ದಾರೆ. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ. ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ನಿನ್ನೆ ಬೆಳ್ಳಾರೆಯಲ್ಲಿಯೂ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು …

Read More »

ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ- ಸಾರ್ವಜನಿಕ ಸ್ಥಳಗಳಲ್ಲಿ ವಾಂಟೆಡ್‌ ಪೋಸ್ಟರ್‌ ಅಳವಡಿಕೆ

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು ಬರೋಬ್ಬರಿ ವರ್ಷ ತುಂಬುತ್ತಾ ಬಂದರೂ ಪ್ರಮುಖ ಆರೋಪಿಗಳು ಪತ್ತೆಯಾಗಲೇ ಇಲ್ಲ, ಇದೀಗ ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ ಆರಂಭಿಸಿದೆ. 2022ರ ಜುಲೈ 26 ರಂದು ಬೆಳ್ಳಾರೆಯ ಪ್ರವೀಣ್ ಮಾಲೀಕತ್ವದ ಕೋಳಿ ಫಾರಂ ಮುಂಭಾಗ ತಲವಾರು ದಾಳಿ ನಡೆದು ಭೀಕರ ಹತ್ಯೆ ನಡೆಸಿದ್ದಾರೆ. ಮತ್ತೊಮ್ಮೆ ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿರುವ ಪೋಸ್ಟರ್ ಅಂಟಿಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿ NIA ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ ಪೈಚಾರ್, …

Read More »

ಸುಳ್ಯ: ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ಸುಳ್ಯ : ಯುವಕನೋರ್ವ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ನಿನ್ನೆ ರಾತ್ರಿ ವರದಿಯಾಗಿದೆ. ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ‌ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು‌ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದರೆನ್ನಲಾಗಿದ್ದು, ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ‌ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ‌ ರಾತ್ರಿಯೇ ಪೋಲೀಸರು ‌ಬಂದು‌ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. …

Read More »

ಮಣಿಪಾಲ: ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ 8 ವರ್ಷದ ಬಾಲಕ ಕೆಳಗೆ ಬಿದ್ದು ಸಾವು

ಮಣಿಪಾಲ: ಮನೆಯ ಟೆರೇಸ್ ಮೇಲೆ ಆಟ ಆಡುತ್ತಿದ್ದಾಗ 8 ವರ್ಷದ ಬಾಲಕನೋರ್ವ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ದಶರಥನಗರದಲ್ಲಿ ಸಂಭವಿಸಿದೆ. ಆಯುಶ್ (8) ಮೃತಪಟ್ಟ ಬಾಲಕನಾಗಿದ್ದು ,ಈತ ಧಾರವಾಡ ಮೂಲದ ನಾಮದೇವ ಜಾಧವ್ ಎಂಬವರ ಮಗನಾಗಿದ್ದಾನೆ. ಜಾಧವ್ ಅವರು ಕೆಲ ದಿನಗಳ ಹಿಂದೆ ಮಣಿಪಾಲದ 80 ಬಡಗುಬೆಟ್ಟು ಗ್ರಾಮದ ದಶರಥ ನಗರದಲ್ಲಿರುವ ಸಂಬಂದಿಕರ ಮನೆಯಲ್ಲಿ ಕುಟುಂಬ ಸಮೇತ ಉಳಿದುಕೊಂಡಿದ್ದರು. ಜೂನ್ 25 ರಂದು ಮಧ್ಯಾಹ್ನದ ವೇಳೆ ಆಯುಶ್ ಇತರ ಮಕ್ಕಳೊಂದಿಗೆ ಮನೆಯ ಟೆರಸ್ ಮೇಲೆ ಆಟವಾಡುತ್ತಿದ್ದಾಗ ಆಯತಪ್ಪಿ ಆಕಸ್ಮಿಕವಾಗಿ ಟೆರೇಸ್ ನಿಂದ …

Read More »

ವೇಣೂರು: ಕಾರು ಚಾಲಕ ನೌಷಾದ್ ಮನೆಗೆ NIA ದಾಳಿ

ವೇಣೂರು: : ಸುಳ್ಯ ತಾಲೂಕಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಕಾರು ಚಾಲಕ ನೌಷಾದ್ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿವೇಳೆ ನೌಷಾದ್ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇಂದು ದ.ಕ. ಮತ್ತು ಕೊಡಗು ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಳಿ ನಡಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಬೆಳೆ ರಕ್ಷಣೆಗೆ ಕರಡಿ ವೇಷ ತೊಟ್ಟು ಹೊಲದಲ್ಲಿ ಕುಳಿತ ರೈತ- ಫೋಟೋ ವೈರಲ್

ರೈತನೊಬ್ಬ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಹೊಸ ಪ್ಲಾನ್ ಒಂದನ್ನು ಮಾಡಿದ್ದು, ಈತನ ಪ್ಲಾನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.ಉತ್ತರ ಪ್ರದೇಶದ ರೈತನೊಬ್ಬ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಹೊಸ ಪ್ಲಾನ್ ಒಂದನ್ನು ಮಾಡಿದ್ದು, ಈತನ ಪ್ಲಾನ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಗಜೇಂದ್ರ ಸಿಂಗ್ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತ ರೈತ. ಗ್ರಾಮದಲ್ಲಿ ಪ್ರತೀ ದಿನ ಸುಮಾರು 40-45 ಮಂಗಗಳು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ …

Read More »

ಬೆಳ್ಳಂಬೆಳಿಗ್ಗೆ ಎನ್‌ಕೌಂಟರ್ : ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಕ್ರಿಮಿನಲ್ ಗುಫ್ರಾನ್ ಬಲಿ

ಲಖನೌ : ಎರಡು ಡಜನ್‌ಗೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ. ಕೊಲೆ ಹಾಗೂ ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಗುಫ್ರಾನ್ ಎಂಬ ಕ್ರಿಮಿನಲ್, ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕೌಶಂಬಿ ಜಿಲ್ಲೆಯಲ್ಲಿ ವಿಶೇಷ ಕಾರ್ಯ ಪಡೆಯು ಜಿಲ್ಲೆಯ ಮಾಂಝನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮ್ದಾ ಶುಗರ್ ಮಿಲ್ ರಸ್ತೆ ಸಮೀಪ ಬೆಳಗಿನ ಜಾವ 5.30ರ ಸುಮಾರಿಗೆ ರೇಡ್ ನಡೆಸುತ್ತಿತ್ತು. ಆಗ ಪೊಲೀಸ್ ತಂಡಕ್ಕೆ ಮುಖಾಮುಖಿಯಾದ ಗುಫ್ರಾನ್, ಅವರ ಮೇಲೆ …

Read More »

ವೈದ್ಯರ ಯಡವಟ್ಟು: ನಾಲಿಗೆ ಸರ್ಜರಿಗೆ ಬಂದ ಬಾಲಕನಿಗೆ ಸುನ್ನತ್: ಕೊನೆಗೆ ಆಗಿದ್ದೇ ದೊಡ್ಡ ಕಥೆ..!

ಬರೇಲಿ: ಬರೇಲಿಯ ಆಸ್ಪತ್ರೆಯೊಂದರಲ್ಲಿ 3 ವರ್ಷದ ಬಾಲಕನಿಗೆ ಸುನ್ನತಿ ಮಾಡಿದ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸೂಚನೆ ಮೇರೆಗೆ ಎಂ ಖಾನ್ ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಶನಿವಾರ ಈ ಬಗ್ಗೆ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, “ದೂರು ಸರಿಯಾಗಿದ್ದರೆ, ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಸಂಪೂರ್ಣ ವರದಿಯನ್ನು ನೀಡಲು ಬರೇಲಿಯ ಸಿಎಂಒಗೆ ಆದೇಶ ನೀಡಲಾಗಿದೆ” ಎಂದು ಪಾಠಕ್ ಹೇಳಿದ್ದಾರೆ. ಜೂನ್ 23ರಂದು ಸ್ಟೇಡಿಯಂ ರಸ್ತೆಯ ಎಂ …

Read More »

ಪುತ್ತೂರು: ದೇವಳದೊಳಗೆ ಅನ್ಯಧರ್ಮೀಯ ವ್ಯಕ್ತಿಯಿಂದ ವೀಡಿಯೋ ಚಿತ್ರೀಕರಣ- ಹಿಂದೂ ಸಂಘಟನೆಗಳ ಆಕ್ರೋಶ

ಪುತ್ತೂರು: ಹಿಂದೂ ದೇವಸ್ಥಾನದ ಒಳಗೆ ಅನ್ಯಮತೀಯ  ವ್ಯಕ್ತಿ ಯಿಂದ ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ನಿಷೇಧವಾಗಿದ್ದರೂ ಭಾವಚಿತ್ರ ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿದ್ದು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸಿದೆ. ಭಾವಚಿತ್ರ ತೆಗೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಗೆ ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾದರೆ ದೇವಸ್ಥಾನದ ಆಡಳಿತ ಮಂಡಳಿ ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಿದೆ. ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತಿಲ ಪರಿವಾರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ …

Read More »

ಮಂಗಳೂರು; ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣ; ಇಂದು ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟ

ಮಂಗಳೂರು: ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ಆರೋಪ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ಪ್ರಮಾಣವು ಜೂ.27ರಂದು ಪ್ರಕಟವಾಗಲಿದೆ.ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ. ಈತನು ಬಾಳೆಪುಣಿ ಗ್ರಾಮದ ಬೆಳ್ಕೇರಿಯ ಮಹಿಳೆಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ.ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಅಶ್ರಫ್ ಕೊಲೆಯಾದ ಮಹಿಳೆಯ ಸಹೋದರನ ಮನೆಯ ತೋಟದ ಕೆಲಸಕ್ಕೆ ಹೋಗುತ್ತಿದ್ದ. ಈ ಸಂದರ್ಭ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿರುವುದನ್ನು …

Read More »

You cannot copy content of this page.