ಮಗಳ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹುಡುಗನನ್ನು ಪ್ರಶ್ನಿಸಲು ಹೋದ ಬಿಎಸ್‌ಎಫ್ ಜವಾನನ್ನು ಹುಡುಗನ ಮನೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಬಿಎಸ್‌ಎಫ್ ಯೋಧನ ಮಗಳು ಹಾಗೂ ಆಕೆಯ ತರಗತಿಯಲ್ಲೇ ಓದುತ್ತಿದ್ದ 15 ವರ್ಷದ ಬಾಲಕ ಪರಸ್ಪರ ಸಂಬಂಧ ಹೊಂದಿದ್ದರು.
ಇತ್ತೀಚೆಗೆ ಈ 15 ವರ್ಷದ ಯುವಕ ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕಿಯ ಅಶ್ಲೀಲ ವಿಡಿಯೋವನ್ನು ಪೋಸ್ಟ್ ಮಾಡಿದ್ದ, ಇದು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಿಸಲು ಆತನ ಮನೆಗೆ ಹೋದ ಯೋಧ ಹಾಗೂ ಆತನ ಕುಟುಂಬವನ್ನು ಬಾಲಕನ ಮನೆಯವರು ನಿಂದಿಸಲು ಶುರು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮನೆಯವರೆಲ್ಲರೂ ಸೇರಿ ಯೋಧನನ್ನು ಥಳಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರು ನಂತರ ಸಾವನ್ನಪ್ಪಿದ್ದಾರೆ.
ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯೋಧ ಹಾಗೂ ಆತನ ಕುಟುಂಬ ಅಶ್ಲೀಲ ವಿಡಿಯೋ ವಿಚಾರವಾಗಿ ಕೇಳಲು ಶನಿವಾರ ಚಕ್ಲಾಸಿ ಗ್ರಾಮದ ಬಾಲಕನ ಮನೆಗೆ ತೆರಳಿದಾಗ ಈ ಅನಾಹುತ ಸಂಭವಿಸಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬಿಎಸ್‌ಎಫ್ ಯೋಧನ ಜೊತೆಗೆ ಆತನ ಪತ್ನಿ, ಇಬ್ಬರು ಪುತ್ರರು ಹಾಗೂ ಸೋದರಳಿಯ ಕೂಡ 15 ವರ್ಷದ ಬಾಲಕನ ಮನೆಗೆ ತೆರಳಿದ್ದರು. ಈ ಬಾಲಕ ಹಾಗೂ ಯೋಧನ ಪುತ್ರಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಯೋಧನ ಸಾವಿನ ನಂತರ ಬಾಲಕನ ಕುಟುಂಬಸ್ಥರು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.ತನ್ನ ನೆರೆಮನೆಯವರು ಆನ್‌ಲೈನ್‌ನಲ್ಲಿ ತನ್ನ ಅಶ್ಲೀಲ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ 12 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಡಿಸೆಂಬರ್ 19 ರಂದು ಈ ಘಟನೆ ನಡೆದಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇವರಿಬ್ಬರು ಇಬ್ಬರೂ ಖುಷಿನಗರ ಜಿಲ್ಲೆಯ ಖಾಡಾ ಪಟ್ಟಣ ನಿವಾಸಿಗಳಾಗಿದ್ದರು. ಆರೋಪಿ ಇರ್ಫಾನ್‌ನನ್ನು ಡಿಸೆಂಬರ್ 21 ರಂದು ಬಂಧಿಸಿದ್ದರೆ ಆತನ ತಂದೆ ಅಬ್ದುಲ್ ಎಂಬಾತನನ್ನು ಶನಿವಾರ (ಡಿಸೆಂಬರ್ 24) ಪೊಲೀಸರು ಬಂಧಿಸಿದ್ದರು.