ತಾಜಾ ಸುದ್ದಿ

ಉಡುಪಿ: ನಡುರಸ್ತೆಯಲ್ಲಿ ಕಾಡುಕೋಣ ತಿರುಗಾಟ – ಆತಂಕಗೊಂಡ ವಾಹನ ಸವಾರರು

ಉಡುಪಿ: ದೈತ್ಯ ಗಾತ್ರದ ಕಾಡುಕೋಣವೊಂದು ರಸ್ತೆಯಲ್ಲಿ ಪ್ರತ್ಯಕ್ಷ ವಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರ್ವ ಸಮೀಪದ ಪಿಲಾರು ಕಾಡಿನ ಬಳಿ ಇರುವ ರಸ್ತೆಯ ಪಕ್ಕದಲ್ಲಿ ಈ ಕಾಡು ಕೋಣ ಕಂಡು ಬಂದಿದೆ. ಆಹಾರ ಅರಸಿಕೊಂಡು ನಾಡಿಗೆ ಬಂದಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ವಿಜಯ್ , ಧೀರಜ್ ಮತ್ತು ಸಂಗಡಿಗರು ಕಾಡುಕೋಣವನ್ನು ಮತ್ತೆ ಕಾಡಿಗೆ ಕಳಿಸುವಲ್ಲಿ ಸಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಡು …

Read More »

ಮಂಗಳೂರು: ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌‌ನಲ್ಲಿ ಮಹಿಳೆ ಶವ ಪತ್ತೆ

ಮಂಗಳೂರು: ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌‌ನಲ್ಲಿ ಮಹಿಳೆಯ ಶವವೊಂದು ಪತ್ತೆಯಾದ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮಹಿಳೆ ನಾಗಮ್ಮ ಕಳೆದ 4ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮನೆ ಮಾಲಕ ಪುಷ್ಪರಾಜ್ ಅಮೀನ್ ಅವರು ಮುಂಬೈನಲ್ಲಿ ವಾಸವಾಗಿದ್ದು, ಯಾವಾಗಲಾದರೂ ಒಮ್ಮೆ ಊರಿಗೆ ಬರ್ತಾ ಇರುತ್ತಾರೆ. ಇದೀಗ …

Read More »

ಮೂರ್ನಾಲ್ಕು ತಿಂಗಳಲ್ಲಿ ಕೆಎಸ್ ಆರ್ ಟಿಸಿ ಸ್ಥಗಿತಗೊಳ್ಳುವ ಆತಂಕ:ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ರಾಜ್ಯದಲ್ಲಿ ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ಮೂರು ನಾಲ್ಕು ತಿಂಗಳಲ್ಲಿ ಕೆಎಸ್ಆರ್ ಟಿಸಿ ಸ್ಥಗಿತಗೊಳ್ಳುವ ಆತಂಕ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಮಾತನಾಡಿದ ಶೋಭಾ ಕರಂದ್ಲಾಜೆ, ಕೆಎಸ್ಆರ್ ಟಿಸಿ ಗೆ ಬಜೆಟ್ ನಲ್ಲಿ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ಇವತ್ತಿನ ತನಕ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದ ಶೋಭಾ ಕರಂದ್ಲಾಜೆ, 5 ಕೊಡುಗೆಗಳನ್ನು ಯಾವಾಗ ಜನರಿಗೆ ನೀಡುತ್ತೀರಿ ಎಂದು ಘೋಷಣೆ ಮಾಡಿ, ಭರವಸೆಗಳನ್ನು ಕೊಟ್ಟು ಓಟು ಪಡೆದುಕೊಂಡಿದ್ದೀರಿ, ರಾಜ್ಯದಲ್ಲಿ …

Read More »

ಮೂಡಬಿದಿರೆ: ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ತಗೊಂಡು ಯುವಕ ಪರಾರಿ..!

ಮೂಡಬಿದಿರೆ: ಬೈಕ್ ಮಾರಾಟಕ್ಕಿದೆ ಎಂದು ಯುವಕನೊರ್ವ ಓ ಎಲ್ ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದು, ಇದನ್ನು ನೋಡಿದ ಈಶಾನ್ ಶೆಟ್ಟಿ ಎಂಬಾತ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಅನ್ನು ತೆಗೆದುಕೊಂಡು ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಅಕ್ಷಯ್ ಎಂಬವರು ತನ್ನ ಕೆಟಿಎಂ ಡ್ಯೂಕ್  ಬೈಕನ್ನು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದರು.   ಜು.16ರಂದು ಈಶಾನ್ ಶೆಟ್ಟಿ ಎಂಬಾತ ಕರೆ ಮಾಡಿ ಬೈಕ್ ಅನ್ನು ಖರೀದಿಸುವುದಾಗಿ ಹೇಳಿ ಸಂಜೆ ಶಿರ್ತಾಡಿ ಬಸ್ ತಂಗುದಾಣ ಬಳಿ ಬರಲು ಹೇಳಿದ್ದನು. ಅದರಂತೆ ಅಕ್ಷಯ್ ಬೈಕ್ ತಗೊಂಡು …

Read More »

ಮಂಗಳೂರು: ಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ-ಹುಡುಕಾಟ ನಡೆಸಿದ ಪೊಲೀಸರು!

ಮಂಗಳೂರು: ನಗರದ ಸಭಾಂಗಣದಲ್ಲಿ ಯುವಕನೊಬ್ಬನ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿ ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಸ್ವಾರಸ್ಯಕರ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಅಲ್ಲಿರಲಿಲ್ಲ. ಹೀಗಾಗಿ 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು ಬಿದ್ದಿದ್ದಾರೆ. ಆದರೆ ದೂರನ್ನು ನಿರ್ಲಕ್ಷಿಸುವ ಹಾಗಿಲ್ಲವಲ್ಲ. ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. …

Read More »

ಕಾರ್ಕಳ: ಪ್ರಥಮ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ: ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.19 ರಂದು ಮಂಗಳವಾರ ಮಧ್ಯಾಹ್ನ ನಡೆದಿದೆ. ಮಾಳ ಮುಳ್ಳೂರು ನಿವಾಸಿ ಕೌಶಿಕ್(17) ಆತ್ಮಹತ್ಯೆ ಮಾಡಿಕೊಂಡವರು. ಕೌಶಿಕ್ ಬಜಗೋಳಿಯಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಮೃತ ಕೌಶಿಕ್ ತಂದೆ,ತಾಯಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಮಲ್ಪೆ: ಮೀನುಗಾರಿಕಾ ದೋಣಿ ಮುಳುಗಡೆ – ಮೀನುಗಾರರ ರಕ್ಷಣೆ

ಉಡುಪಿ : ಸಮುದ್ರದ ಅಲೆಗಳ ಅಬ್ಬರಕ್ಕೆ ಅರಬ್ಬೀ‌ ಸಮುದ್ರದಲ್ಲಿ ಮಲ್ಪೆಯ ಆಳ ಸಮುದ್ರ ದೋಣಿಯೊಂದು ಮುಳುಗಡೆಯಾಗಿದೆ. ದೋಣಿಯಲ್ಲಿ ನಾಲ್ವರು ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರು ಮೂಲದ ಜೈಸನ್ ಲೋಬೋ ಮಾಲಕತ್ವದ ಕ್ವೀನ್ ಮೇರಿ ಹೆಸರಿನ ದೋಣಿ ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆದು ವಾಪಾಸ್ ಮಂಗಳೂರಿಗೆ ಬರಲು ಪ್ರತಿಕೂಲ ಹವಾಮಾನ ಇದ್ದ ಕಾರಣ ದೋಣಿ ಉಡುಪಿ ಮಲ್ಪೆ ಬಂದರಿಗೆ ಬರುವಾಗ ಈ ದುರಂತ ಸಂಭವಿಸಿದೆ.ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ದೋಣಿಯ ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರು ನಾಲ್ವರು …

Read More »

ಸೌಜನ್ಯ ಪ್ರಕರಣ: ಮರು ತನಿಖೆಗೆ ಆಗ್ರಹಿಸಿ, ಜು.20 ರಂದು ಬೃಹತ್ ಪ್ರತಿಭಟನೆ

ನಂಜನಗೂಡು: ಧರ್ಮಸ್ಥಳದ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಆಗ್ರಹಿಸಿ ಜು.20 ರಂದು ನಂಜನಗೂಡಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು. ನಂಜನಗೂಡು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣದ ನ್ಯಾಯಬದ್ಧ ತನಿಖೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ನಂಜನಗೂಡು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತಾಲ್ಲೂಕು ಆಡಳಿತ ಭವನದವರೆಗೆ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ …

Read More »

ಉಡುಪಿ : ದೋಷಪ ಪೂರಿತ ಮಾರ್ಬಲ್ ಪೂರೈಕೆ- ಕಂಪನಿಗೆ 1 ಲ. ರೂ ದಂಡ

ಕುಂದಾಪುರ ಜು.17 : ಗ್ರಾಹಕರೊಬ್ಬರಿಗೆ ಕಳಪೆ ಗುಣಮಟ್ಟದ ಮಾರ್ಬಲ್ ಪೂರೈಕೆ ಮಾಡಿದ ಉಡುಪಿಯ ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಒಂದು ಲಕ್ಷಕ್ಕೂ ಅಧಿಕ ದಂಡ ವಿಧಿಸಿದೆ. ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ಎಂಬವರು ತಮ್ಮ ಹಳೆ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರಿನಲ್ಲಿ ಇರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂಪಾಯಿ ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ಟೈಲ್ಸ್ ಗಳ ಪೈಕಿ ಹಾಲ್ ಹಾಗೂ ಬೆಡ್ …

Read More »

ಬೆಂಗಳೂರಿನಲ್ಲಿ ಮಂಗಳೂರು ಮೂಲದ ವೃದ್ಧ ದಂಪತಿಯ ಮರ್ಡರ್

ಬೆಂಗಳೂರು: ನಗರದ ಏರ್ಪೋರ್ಟ್​ ರಸ್ತೆಯ ಬ್ಯಾಟರಾಯನಪುರ ಗ್ರಾಮದಲ್ಲಿ ವಾಸವಿದ್ದ ಮಂಗಳೂರು ಮೂಲದ ವೃದ್ಧ ದಂಪತಿ ಹತ್ಯೆಯಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕರಣ ಬಯಲಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.   ಸುಮಾರು 20 ವರ್ಷಗಳ ಹಿಂದೆ ವೃದ್ಧ ದಂಪತಿ ಸೈಟ್ ಖರೀದಿಸಿ ವಾಸವಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ತಿಂಡ್ಲು ಗ್ರಾಮದಲ್ಲಿ ವಾಸವಿದ್ದಾರೆ. ಕಿರಿಯ ಮಗ ತಂದೆ-ತಾಯಿ ಜತೆ ಇದ್ದನು. ಕೊಲೆ ನಡೆದ ಬಳಿಕ ಕಿರಿಯ ಮಗ ಮನೆಯಲ್ಲಿ ಕಾಣಿಸುತಿಲ್ಲ ಎಂದು ಸ್ಥಳೀಯರು …

Read More »

You cannot copy content of this page.