ಕಾಂತಾರ-2’ ಚಿತ್ರಕ್ಕೆ ದೈವ ಒಪ್ಪಿಗೆ.. ಕೋಲದಲ್ಲಿ ದೈವ ನೀಡಿದ ಷರತ್ತು ಏನು ಗೊತ್ತಾ..?

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರವು ಇಡೀ ವಿಶ್ವವೇ ಮೆಚ್ಚಿಕೊಂಡು ರೆಕಾರ್ಡ್ ಮಾಡ್ತಾನೆ ಇದೆ. ತುಳುನಾಡಿನ ದೈವಾರಾಧನೆಯನ್ನ ಪಸರಿಸಿದ ನಮ್ಮ ಹೆಮ್ಮೆಯ ಸಿನಿಮಾ ಕಾಂತಾರ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಕಂಡಿರುವ ಕಾಂತಾರ, ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಕೂಡ ಮಾಡ್ತಿದೆ. ಮತ್ತೆ ಕಾಂತಾರ ಪ್ರೇಕ್ಷಕರಿಗೆ ಶುಭ ಸುದ್ದಿಯೊಂದು ಹೊರಬಂದಿದೆ. ಕಾಂತಾರ ಭಾಗ-2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ಚಿತ್ರತಂಡ ಅನುಮತಿ ಕೇಳಿತ್ತು. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ದೈವದ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿ ಕಾಂತಾರ-2 ಚಿತ್ರವನ್ನು ಮಾಡಲು ಅನುಮತಿ ಕೇಳಿದೆ. ಈ ವೇಳೆ ಕಾಂತಾರ ಭಾಗ-2 ಸಿನಿಮಾಗೆ ಅಣ್ಣಪ್ಪ ಪಂಜುರ್ಲಿ ದೈವ ಷರತ್ತುಬದ್ಧ ಅನುಮತಿ ನೀಡಿದೆ.

ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕಾಂತಾರ ಚಿತ್ರತಂಡ ಹರಕೆ ಕೋಲ ನೀಡಿದ್ದರು. ಈ ವೇಳೆ ಚಿತ್ರತಂಡಕ್ಕೆ ದೈವ ಅಣ್ಣಪ್ಪ ಪಂಜುರ್ಲಿ ಹಲವು ಷರತ್ತುಬದ್ಧ ನಿಯಮಗಳನ್ನು ನೀಡಿದೆ. ಮೊದಲು ಚಿತ್ರ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ ಎಂದು ದೈವ ಷರತ್ತು ನೀಡಿದೆ. ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ ಎಂದು ಅಣ್ಣಪ್ಪ ಪಂಜುರ್ಲಿ ದೈವ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.

ಅಣ್ಣಪ್ಪ ಪಂಜುರ್ಲಿ ಕೋಲದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ,ಪ್ರಮೋದ್ ಶೆಟ್ಟಿ,ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಕಾಂತಾರ ಕಲಾವಿದರು ಹಾಗೂ ರಿಷಬ್ ಕುಟುಂಬಸ್ಥರು ಭಾಗಿಯಾಗಿದ್ದರು.

Check Also

ಸುಳ್ಯದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಸುಳ್ಯ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡ ಘಟನೆ ಸುಳ್ಯ ಶ್ರೀರಾಮ್ ಪೇಟೆ …

Leave a Reply

Your email address will not be published. Required fields are marked *

You cannot copy content of this page.