ತಾಜಾ ಸುದ್ದಿ

ಮಂಗಳೂರು: ಪಿಎಸ್ಐ ಎಂದು ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಮಂಗಳೂರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯನ್ನು ಲಾಡ್ಜ್ ಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಫೋಟೋವನ್ನು ವೈರಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಮೂಲದ ಯಮನೂರ ಬಂಧಿತ ಆರೋಪಿ. ಸಂತ್ರಸ್ತ ಯುವತಿಗೆ ಯಮನೂರ ಇನ್ ಸ್ಟಾಗ್ರಾಂ ಮುಖಾಂತರ ಪರಿಚಯವಾಗಿದ್ದಾನೆ. ಆತ ತಾನು ವಾಮಂಜೂರು ಸ್ಟೇಷನ್ ನಲ್ಲಿ ಪಿಎಸ್‌ಐ ಎಂದು ಆಕೆಯನ್ನು ನಂಬಿಸಿದ್ದಾನೆ. ಬಳಿಕ ಯುವತಿಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ಅವರ ದಾಖಲಾತಿಗಳನ್ನು ಪಡೆದುಕೊಂಡಿದ್ದಾನೆ. 2023 ಮೇಯಲ್ಲಿ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿದ್ದಾನೆ. ಬಳಿಕ ಅದೇ …

Read More »

ರೀಲ್ಸ್​ ಗೀಳು ಸ್ಟಂಟ್​ ಸುಂದ್ರಾ ಅಂದರ್ : ಪೊಲೀಸರ ಅತಿಥಿಯಾದ ಕ್ರೇಜಿ ಬೈಕ್ ರೈಡರ್

ಬೆಂಗಳೂರು : ಬೈಕ್ ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡ್ತಿದ್ದ ಕ್ರೇಜಿ ಬೈಕರ್ ಪೊಲೀಸ್ರ ಅತಿಥಿಯಾಗಿದ್ದಾನೆ. ವಿಶೇಷ ವೇಷಭೂಷಣ ಧರಿಸಿ ಬೈಕ್ ನಲ್ಲಿ ಸ್ಟಂಟ್ ಮಾಡೋದ್ರ ಜೊತೆಗೆ ಕಲರ್ ಪುಲ್ ಆಗಿ ಬೈಕ್ ಆಲ್ಟರ್ ಮಾಡಿ ರೈಡ್ ಮಾಡ್ತಿದ್ದ. ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್‌ ಜಂಪ್ ಮಾಡಿ ಕಾರೊಂದು ಬೈಕ್ ಗೆ ಡಿಕ್ಕಿಗೆ ಹೊಡೆದಿತ್ತು. ಬಳಿಕ ಕಾರನ್ನ ಹಿಂಬಾಲಿಸಿದ ರೈಡರ್ ಕಾರಿನ ಕನ್ನಡಿ ಒಡೆದು ಹಾಕಿದ್ದ. ಕನ್ನಡಿ ಹೊಡೆದು ಓನ್ ವೇನಲ್ಲಿ ಬೈಕ್ ತಿರುಗಿಸಿ ಎಸ್ಕೇಪ್ ಆಗಿದ್ದ. ಲೈಕ್ ಕಮಾಂಟ್ ಗಾಗಿ ತನ್ನ ಎಲ್ಲ …

Read More »

ಶಿರ್ವ : ಸ್ಕೂಲ್ ಬಸ್ ಹಾಗೂ ರಿಕ್ಷಾ ಮಧ್ಯೆ ಡಿಕ್ಕಿ

ಶಿರ್ವ : ಶಾಲಾ ಬಸ್ ಹಾಗೂ ಶಾಲಾ ಮಕ್ಕಳನ್ನು ಕೊಂಡೊಯುತ್ತಿದ್ದ ರಿಕ್ಷಾದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಕಾಪು ತಾಲೂಕಿನ ಕಲ್ಲುಗುಡ್ಡೆ ಗರಡಿ ರಸ್ತೆ ಬಳಿ ನಡೆದಿದೆ. ರಿಕ್ಷಾದಲ್ಲಿದ್ದ 5 ಮಂದಿ ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಕ್ಕಳನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳೆಯ ನಾರಾಯಣ ಗುರು ಶಾಲಾ ಬಸ್ ಹಾಗೂ ರಿಕ್ಷಾದಲ್ಲಿ ಇನ್ನಂಜೆ ಶಾಲಾ ವಿದ್ಯಾರ್ಥಿಗಳು ಇದ್ದರು ಎಂದು ತಿಳಿದುಬಂದಿದೆ. ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನೀಡಿದ್ದಾರೆ.

Read More »

ಮಂಗಳೂರು: ಸೌಜನ್ಯಾಳಿಗೆ ನ್ಯಾಯ ದೊರಕಿಸಿಕೊಡುವಂತೆ ಕದ್ರಿ ಶ್ರೀ ಮಂಜುನಾಥ ದೇವರಲ್ಲಿ ಪ್ರಾರ್ಥನೆ

ಮಂಗಳೂರು: 11 ವರ್ಷ ಕಳೆದರೂ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಮಾಡಿದ ಹಂತಕರು ಯಾರೆಂದು ಇನ್ನೂ ಬಯಲಾಗಿಲ್ಲ. ಆದ್ದರಿಂದ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳು ಯಾರೆಂದು ತಿಳಿಸಿಕೊಡಬೇಕೆಂದು ನೂರಾರು ಮಂದಿ ಇಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವರ ಮೊರೆ ಹೊಕ್ಕರು. ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರ ನೇತೃತ್ವದಲ್ಲಿ ಸೌಜನ್ಯಾ ತಾಯಿ ಕುಸುಮಾವತಿಯವರು ಸೇರಿದಂತೆ ನೂರಾರು ಮಂದಿ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಅತ್ಯಾಚಾರ ಹಾಗೂ ಕೊಲೆ ಮಾಡಿದವರು ಯಾರೆಂದು ಬಯಲಾಗಬೇಕು. ಅವರಿಗೆ ಶಿಕ್ಷೆಯಾಗಬೇಕು. ಈ …

Read More »

ಉಡುಪಿ ಪ್ರಕರಣ: ಗೊಂಬೆ ನಿರ್ಮಿಸಿ ಪ್ರಕರಣದ ಮರು ಸೃಷ್ಟಿ- ದಾಖಲೆ ಪರಿಶೀಲಿಸಿದ ಸಿಐಡಿ

ಉಡುಪಿ: ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣವನ್ನು ಸಿಐಡಿಗೆ ರಾಜ್ಯ ಸರಕಾರ ನೀಡಿದ್ದು, ತನಿಖೆ ಪುನರಾರಂಭಗೊಂಡಿದೆ. ಪ್ರಕರಣದ ಮರು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಬೊಂಬೆಯನ್ನು ಸೃಷ್ಟಿಸಿ ತನಿಖೆ ಆರಂಭಿಸಿದ್ದಾರೆ. ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಎಸ್ ಪಿ ರಾಘವೇಂದ್ರ ಹೆಗಡೆ ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಕೃತ್ಯ ನಡೆದ ಕಾಲೇಜಿಗೆ ಭೇಟಿ ಕೊಟ್ಟ ಸಿಐಡಿ ತಂಡ ಮಾಹಿತಿಗಳನ್ನು ಕಲೆ ಹಾಕಿದೆ. ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿಯನ್ನು ವಿಚಾರಣೆ ಮಾಡಿ ದಾಖಲೆಗಳನ್ನು …

Read More »

ನೀರಿಗೆ ಬಿದ್ದ 1.5 ಲಕ್ಷದ ಐಫೋನ್- ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ

ಉಡುಪಿ:  ಉಡುಪಿಯ ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ.ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‌ಗೆ ಧುಮುಕಿ 1.5 ಲಕ್ಷ ರೂಪಾಯಿ ಮೌಲ್ಯದ ಐ – ಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ. ಇಂದು ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಐ-ಫೋನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್‌ ನ ನೀರಿಗೆ ಬಿದ್ದಿತ್ತು. ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಪರಿಚಿತರೊಬ್ಬರ ಸಹಾಯದಿಂದ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ …

Read More »

ಉಡುಪಿ: ಹಿರಿಯ ಸಂಸ್ಕೃತ ವಿದ್ವಾಂಸ ಹರಿದಾಸ ಉಪಾಧ್ಯಾಯ ವಿಧಿವಶ

ಉಡುಪಿ: ಇಲ್ಲಿನ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರೂ ಶ್ರೀಕೃಷ್ಣಮಠದ ಆಸ್ಥಾನ ವಿದ್ವಾಂಸರೂ ಆಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ವಿದ್ವಾಂಸ ವಿದ್ವಾನ್ ಕೆ. ಹರಿದಾಸ ಉಪಾಧ್ಯಾಯ ಬುಧವಾರ ರಾತ್ರಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಅಧ್ಯಕ್ಷರಾದ ಅವರು, ಉಡುಪಿ ಅಷ್ಟಮಠಾಧೀಶರಿಂದ ಗೌರವಿಸಲ್ಪಟ್ಟಿದ್ದರು. ಸಂಸ್ಕತದಲ್ಲಿ 5 ಯಕ್ಷಗಾನ ಪ್ರಸಂಗ ರಚಿಸಿ ಉಜ್ಜಯಿನಿ ಮೊದಲಾದೆಡೆಗಳಲ್ಲಿ ಪ್ರದರ್ಶಿಸಿದ್ದರು. ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಅನೇಕ ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದರು. ಪ್ರಾಚಾರ್ಯ ಪದಕ್ಕೆ ಕನ್ನದಲ್ಲಿ ಪ್ರಾಂಶುಪಾಲ ಎಂಬ ಪದ ನಿಕ್ಷೇಪಿಸಿದ …

Read More »

ರೋಗಿಗೆ ಯೂರಿನ್ ಬ್ಯಾಗ್ ಹಾಕುವ ಬದಲು ಸ್ಪ್ರೈಟ್ ಬಾಟಲಿ ಬಳಸಿದ ಜಿಲ್ಲಾಸ್ಪತ್ರೆ ಸಿಬ್ಬಂದಿ

ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಅಷ್ಟಿಷ್ಟಲ್ಲ. ಸ್ವಚ್ಚತೆ ಇರಲ್ಲ. ನೂರೆಂಟು ಸಮಸ್ಯೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಗೋಚರವಾಗುತ್ತವೆ. ಅಷ್ಟೇ ಅಲ್ಲದೇ, ವೈದ್ಯರು ಕೂಡಾ ಒಂದಲ್ಲೊಂದು ಎಡವಟ್ಟು ಮಾಡುತ್ತಿರುತ್ತಾರೆ. ಅದಕ್ಕೆ ತಾಜಾ ಉದಾಹರಣ ಈ ಘಟನೆ ಸಾಕ್ಷಿ. ಹೌದು, ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಬಿಹಾರದ ಆಸ್ಪತ್ರೆಯ ಸಿಬ್ಬಂದಿ ಒಳರೋಗಿಯಾಗಿ ದಾಖಲಾಗಿರುವ ವ್ಯಕ್ತಿಗೆ ಮೂತ್ರ ಚೀಲ(ಯೂರಿನ್‌ ಬ್ಯಾಗ್‌) ಹಾಕುವ ಬದಲು ಸ್ಪ್ರೈಟ್ ಬಾಟಲಿಯನ್ನು ಬಳಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಜಾಮುನೈ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ರೋಗಿಯ ತಪಾಸಣೆ ಮಾಡಿದ್ದ ವೈದ್ಯರು, ರೋಗಿಗೆ ಯೂರಿನ್‌ ಬ್ಯಾಗ್‌ಅನ್ನು ಜೋಡಿಸುವಂತೆ ನರ್ಸ್‌ಗೆ ಸೂಚಿಸಿದ್ದಲ್ಲದೆ, ಇನ್ಸುಲಿನ್‌ …

Read More »

 ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ..!

ಬೆಂಗಳೂರು : ಸಂಬಂಧಿಕರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತಪಟ್ಟ ಸ್ಪಂದನ ಅವರ ಮೃತ ದೇಹವನ್ನ ನಿನ್ನೆ ಬೆಂಗಳೂರಿಗೆ ತರಲಾಗಿತ್ತು. ಇಂದು ಬೆಂಗಳೂರಿನ ಶ್ರೀರಾಂಪುರದ ಹರೀಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅವರು ಪಂಚಭೂತಗಳಲ್ಲಿ ಲೀನವಾದರು.   ಶ್ರೀರಾಮಪುರದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆಗಮಿಸಿದ ನಂತರ ಈ ವೇಳೆ ಪುತ್ರ ಶೌರ್ಯ ವಿಧಿ ವಿಧಾನಗಳ ಪ್ರಕಾರ ಮಡಿಕೆಯನ್ನು ಹೊತ್ತು ಅವರ ತಾಯಿಯ ಮೃತದೇಹದ ಸುತ್ತ ಮೂರು ಸುತ್ತು ಹಾಕಿದ. …

Read More »

ಸ್ಥಳೀಯರು ಪತ್ನಿಯನ್ನು ಕಳ್ಳಿ ಎಂದು ನಿಂದಿಸಿದ್ದಕ್ಕೆ ಕೊಲೆ ಮಾಡಿದ ಪತಿರಾಯ..!

ಬೆಂಗಳೂರು: ಶೀಲ ಶಂಕಿಸಿ ಪತ್ನಿಗೆ ವಿಚ್ಛೇದನ ನೀಡಿರುವ ಅಥವಾ ಕೊಲೆ ಮಾಡಿರುವ ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಅದರೆ ಇಲ್ಲೊಬ್ಬ ಗಂಡ ಪತ್ನಿಗೆ ಸ್ಥಳೀಯರು ಕಳ್ಳಿ ಎಂದು ನಿಂದಿಸುತ್ತಿದ್ದರಿಂದ ಬೇಸರಗೊಂಡು ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಕುಂದಲಹಳ್ಳಿ ನಿವಾಸಿ  ಸರಿತಾ (35)  ಕೊಲೆಯಾದ ಮಹಿಳೆ.ತಾರನಾಥ್‌  (40) ಬಂಧಿತ ಆರೋಪಿ.ಈ ದಂಪತಿಗಳು  ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರು.ಮಂಗಳೂರು ಮೂಲದ ತಾರನಾಥ್‌ ಮತ್ತು ಸರಿತಾ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ಹಿಂದೆ ಮಂಗಳೂರಿನ ಮುಲ್ಕಿಯಲ್ಲಿ ವಾಸವಾಗಿದ್ದರು.ಕೆಲವು …

Read More »

You cannot copy content of this page.