ತಾಜಾ ಸುದ್ದಿ

ಗ್ರಾಮ ಪಂಚಾಯತ್ ಗ್ರಂಥಪಾಲಕರಿಗೆ ಗುಡ್ ನ್ಯೂಸ್; ಕನಿಷ್ಠ ವೇತನ ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯದ ಗ್ರಾಮ ಪಂಚಾಯಿತಿಗಳ ಗ್ರಂಥಪಾಲಕರ ಬಹುದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಗ್ರಂಥಪಾಲಕರಿಗೆ ₹ 15,196 ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ಸಿಗಲಿದೆ. ಈ ಹಿಂದೆ ₹ 12,000 ವೇತನ ನೀಡಲಾಗುತ್ತಿತ್ತು.ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನಾಗಿ ಬದಲಿಸಲಾಗಿದೆ. ಕೆಲಸದ ಅವಧಿಯನ್ನು ಎರಡು ಗಂಟೆ ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕ ರಜಾ ದಿನಗಳು, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಮಂಗಳವಾರ ಹಾಗೂ ವಾರದ ರಜೆ (ಸೋಮವಾರ) ಹೊರತು ಪಡಿಸಿ ಮಂಗಳವಾರ, …

Read More »

ಮಂಗಳೂರು: ಆಸ್ಪತ್ರೆಯಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಮಂಗಳೂರು: ನಗರದ ಪಂಪ್ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆ ವರದಯಾಗಿದೆ.ವಿಶೇಷ ಸಾಮರ್ಥ್ಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಬೈಕ್ ಅಫಘಾತ ದಲ್ಲಿ ಗಾಯಗೊಂಡು ಆಸ್ಪತ್ರೆ ಗೆ ಸೇರಿದ್ದ ಮುಂಬೈ ಮೂಲದ ಅಬ್ದುಲ್ ಹಲೀಂ ಮತ್ತು ಮನ್ಸೂರ್ ಅಹ್ಮದ್ ಬಾವ ಎಂಬಾತನಿಗೂ ಅಫಘಾತ ದಲ್ಲಿ ಗಾಯವಾಗಿತ್ತು. ಸಂತ್ರಸ್ತ ಬಾಲಕಿಯ ತಾಯಿಯ ತಮ್ಮನಾಗಿರುವ ಮನ್ಸೂರ್ ಅಹ್ಮದ್ ನನ್ನು ನೋಡಲು ಬಾಲಕಿಯನ್ನು ಸಂತ್ರಸ್ತೆಯ ತಾಯಿ ಕರೆದುಕೊಂಡು ಆಸ್ಪತ್ರೆ ಗೆ ಹೋಗಿದ್ದರು. ಬಳಿಕ ಬಾಲಕಿಯನ್ನು ಆಸ್ಪತ್ರೆ ಯಲ್ಲೇ ಬಿಟ್ಟು ಹೋಗಿದ್ದರು. …

Read More »

ಮಿಠಾಯಿ ತಿಂದ ಇಬ್ಬರು ಸಹೋದರಿಯರು ನಿಗೂಢವಾಗಿ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

ಕೌಶಂಬಿ: ಗುರುವಾರ ಬೆಳಗ್ಗೆ ಮಿಠಾಯಿ ತಿಂದ ಒಂದೇ ಕುಟುಂಬದ ನಾಲ್ವರು ಬಾಲಕಿಯರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾದಾಗ, ಮೂವರನ್ನು ಪ್ರಯಾಗರಾಜ್‌ನಲ್ಲಿರುವ ಸರೋಜಿನಿ ನಾಯ್ಡು ಬಾಲ ಚಿಕಿತ್ಸಾಲಯಕ್ಕೆ (ಮಕ್ಕಳ ಆಸ್ಪತ್ರೆ) ದಾಖಲಿಸಲಾಯಿತು. ಅಲ್ಲಿ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಅಕ್ಕಪಕ್ಕದ ಯುವಕರು ಟಾಫಿಯಲ್ಲಿ ವಿಷ ಬೆರೆಸಿ ತಿನ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರೊಂದಿಗೆ ಟೆರೇಸ್ ಮೇಲೆ ಮಲಗಿದ್ದ ಮಗಳು …

Read More »

ಕಾಸರಗೋಡು: ರೈಲು ಹಳಿಯಲ್ಲಿ ಕಲ್ಲು, ತುಂಡಾದ ಕ್ಲೋಸೆಟ್ ಪತ್ತೆ -ತಪ್ಪಿದ ಅಪಾಯ

ಕಾಸರಗೋಡು : ರೈಲು ಹಳಿಯಲ್ಲಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾದ ಘಟನೆ ಕಾಸರಗೋಡಿನ ಕೋಟಿಕುಲಂ ಎಂಬಲ್ಲಿ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಇದರಿಂದ ಭಾರೀ ಅಪಾಯ ತಪ್ಪಿದೆ. ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಈ ಘಟನೆ ನಡೆದಿದೆ. ಕಾಸರಗೋಡಿನಿಂದ ಹೊರಟ ಕೊಯಮುತ್ತೂರು – ಮಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಇದನ್ನು ಗಮನಿಸಿದ್ದು, ರೈಲು ಹಾದು ಹೋಗುವ ಸಂದರ್ಭ ಏನೋ ಬಡಿದ ಶಬ್ದ ಕೇಳಿದ್ದು, ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದರು.   ರೈಲ್ವೆ ಪೊಲೀಸರು ಹಾಗೂ …

Read More »

ಕಾರ್ಕಳ : ಶಾಲೆಯ ಸಮೀಪ ಮದ್ಯದಂಗಡಿ ತೆರೆಯಲು ಅನುಮತಿ – ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಾರ್ಕಳ : ಶಾಲೆಯ ಸನಿಹದಲ್ಲಿ ಮದ್ಯದಂಗಡಿ ಆರಂಭವಾಗುತ್ತದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಬಜಗೋಳಿ ಎಂಬಲ್ಲಿ ನಡೆದಿದೆ. ಬಜೆಗೋಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಂಭಾಗದ ಕಟ್ಟಡದಲ್ಲಿ ಮದ್ಯದಂಗಡಿ ಆರಂಭವಾಗುತ್ತಿರುವ ಮಾಹಿತಿ ಹಬ್ಬಿದೆ.‌ ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ತರಗತಿಗೆ ತೆರಳದೇ ಶಾಲೆಯ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಕ್ಕೆ ಅನುಮತಿ ನೀಡದಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳ‌ ಪ್ರತಿಭಟನೆಗೆ ಪೋಷಕರು …

Read More »

ತಾಯಿ ಹೋಮ್‌ವರ್ಕ್ ಮಾಡು ಅಂದಿದ್ಕೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್‌ ಕೊಟ್ಟ 10 ವರ್ಷದ ಬಾಲಕ..!

ಮಕ್ಕಳ ಹೃದಯವು ತುಂಬಾ ಪರಿಶುದ್ಧವಾಗಿರುತ್ತದೆ ಮತ್ತು ಅವರು ತಮ್ಮ ಹೃದಯದಲ್ಲಿ ಏನನ್ನೂಇಟ್ಟುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಚೀನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇದು ನಿಮ್ಮ ಆಲೋಚನೆಯನ್ನು ಬದಲಾಯಿಸುತ್ತದೆ.   ಇಲ್ಲಿ 10 ವರ್ಷದ ಮಗು ತನ್ನ ತಾಯಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾನೆ. ಚೀನಾದ ಚಾಂಗ್‌ಕಿಂಗ್ ಎಂಬ ಸ್ಥಳದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಮಗುವೊಂದು ಸದ್ದು ಮಾಡುತ್ತಾ ಹುಯಿಕ್ಸಿಂಗ್ ಪೊಲೀಸ್ ಠಾಣೆಯನ್ನು ತಲುಪಿತು. ಅವನು ಇಬ್ಬರು ಪೊಲೀಸರ ಬಳಿಗೆ ಹೋಗಿ ತನ್ನ ಕಥೆಯನ್ನು …

Read More »

‘ಭಾರತದ ಮುಸ್ಲಿಮರೂ ಮೂಲತಃ ಹಿಂದೂಗಳು’ – ಗುಲಾಂ ನಬಿ ಆಜಾದ್

ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಭಾರತದ ಯಾರೂ ಹೊರಗಿನವರಲ್ಲ, ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದಿದ್ದಾರೆ. ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡಿದ ಆಜಾದ್, ಹಿಂದೂಗಳಂತೆಯೇ ಮುಸ್ಲಿಮರು ಕೂಡ ಈ ನೆಲದೊಳಗೆ ಹೋಗುತ್ತಾರೆ. ಅವರ ದೇಹ ಹಾಗೂ ಎಲುಬುಗಳು ಕೂಡ ಭಾರತ ಮಾತೆಯ ಭಾಗವಾಗುತ್ತದೆ, ಹಾಗಿದ್ದಾಗ ಹಿಂದೂ-ಮುಸ್ಲಿಂ ಎನ್ನುವ ಭಾವನೆ ಏಕೆ ಎಂದು ಪ್ರಶ್ನಿಸಿದರು. 600 ವರ್ಷಗಳ …

Read More »

ವಿಟ್ಲ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ..!

ವಿಟ್ಲ: ಯುವಕನೋರ್ವ ಬಾವಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ. ಪ್ರಶಾಂತ್ ನಾಯ್ಕ್ (29)  ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಪ್ರಶಾಂತ್ ನೇರಳಕಟ್ಟೆ ಅಗ್ರಿ ಎಂಬ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು,  ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದ.ಸದಾ ನಗುಮೊಗದ ಪ್ರಶಾಂತ್ ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದುಕೊಂಡಿದ್ದ.ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದ. ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಈತ ಸದಸ್ಯನಾಗಿ ಸೇವೆ ಮಾಡುತ್ತಿದ್ದ.ಕೌಟುಂಬಿಕ ಕಲಹ ಪ್ರಶಾಂತ್ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ.

Read More »

ಕಿಂಗ್​ಫಿಶರ್​ ಬಿಯರ್​​ನಲ್ಲಿ ಅಪಾಯಕಾರಿ ಅಂಶ, ನಂಜನಗೂಡಿನಲ್ಲಿ 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ..!

ಬೆಂಗಳೂರು : ಕಿಂಗ್​ಫಿಶರ್  ​ಬಿಯರ್​ನಲ್ಲಿ ಅಪಾಯಕಾರಿ ಅಂಶ ಸೆಡಿಮೆಂಟ್ ಪತ್ತೆಯಾಗಿದ್ದು ಮೈಸೂರು ಜಿಲ್ಲೆಯ ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ  5 ಕೋಟಿ ರೂ. ಮೌಲ್ಯದ ಕಿಂಗ್​ಫಿಶರ್ ಬಿಯರ್​ ಜಪ್ತಿ ಮಾಡಲಾಗಿದೆ. ಜೊತೆಗೆ ನಂಜನಗೂಡಿನಿಂದ ಬಿಯರ್ ಸರಬರಾಜು ಆಗುವುದನ್ನು ಅಬಕಾರಿ ಅಧಿಕಾರಿಗಳು ತಡೆಹಿಡಿದಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್, ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಕಿಂಗ್​ಫಿಶರ್​ ಸ್ಟ್ರಾಂಗ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಹೀಗಾಗಿ ಒಟ್ಟು‌ 78,678 ಬಿಯರ್ ಬಾಕ್ಸ್​ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, …

Read More »

ಉಡುಪಿ: ವಿಡಿಯೋ ಪ್ರಕರಣ-ಮೊದಲ ಹಂತದ ಸಿಐಡಿ ತನಿಖೆ ಪೂರ್ಣ

ಉಡುಪಿ: ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ತನ್ನ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ತನಿಖಾಧಿಕಾರಿ(ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಸಂತ್ರಸ್ತೆ ಅಧಿಕೃತವಾಗಿ …

Read More »

You cannot copy content of this page.