ತಾಜಾ ಸುದ್ದಿ

ಬೆಳ್ತಂಗಡಿ : ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನ ಬಂಧನ

ಬೆಳ್ತಂಗಡಿ : ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಸದ್ಯ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ ಉಮೇಶ್​ ಬಳೆಗಾರ ಎಂದು ಗುರುತಿಸಲಾಗಿದೆ. ಕಳೆದ ಆಗಸ್ಟ್ 12ರಂದು ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿದ ಆರೋಪಿ 15 ಪವನ್ ಚಿನ್ನಾಭರಣ ಮತ್ತು 20 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದನು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಉಮೇಶ್​ …

Read More »

ಕಾರವಾರ : ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ, ಬ್ಲಾಕ್ ಮೇಲ್ : ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ಅರೆಸ್ಟ್..!!!

ಕಾರವಾರ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬವರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.ದೂರುದಾರ ವಿವಾಹಿತ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದು, ಮೊಬೈಲ್ ನಲ್ಲಿರುವ ಕ್ಲಬ್ ಹೌಸ್ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡು ಹಾಡುತ್ತಿದ್ದಳು. 2020 ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ …

Read More »

ಇಂದು ಕರ್ನಾಟಕ ಬಂದ್‌: ಕರಾವಳಿಗರಿಂದ ನೈತಿಕ ಬೆಂಬಲ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರ ಇಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ಆದರೆ ಕರಾವಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ. ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, …

Read More »

ಮಂಗಳೂರು : ಮೀನುಗಾರರ ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು.

ಉಳ್ಳಾಲ:(ಮಂಗಳೂರು) ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಸೋಮೇಶ್ವರ,ಉಚ್ಚಿಲ ಮೀನುಗಾರರ ಬಲೆಗೆ ಬಿದ್ದಿದೆ. ಸಮುದ್ರ ತೀರದಲ್ಲಿ ಬೀಸಿದ ಬಲೆಗೆ ನಿನ್ನೆ‌ ಸಂಜೆ ಹೊತ್ತಿಗೆ 75 ಕೆ.ಜಿ ಯ ಮೀನು ಬಲೆಗೆ ಬಿದ್ದಿದೆ. ಉಚ್ಚಿಲ,ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಬಿದ್ದಿದೆ. ಈ ವರ್ಷದ ತಮ್ಮ ಮೀನುಗಾರಿಕೆಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಅನ್ನುವ ಅಭಿಪ್ರಾಯ ಅವರದ್ದಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ …

Read More »

ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ : ದಿಲ್ ರಾಜ್ ಆಳ್ವ

ಕಾವೇರಿ ನದಿ ನೀರಿನ ಹೋರಾಟ ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ಸಾಮಾನ್ಯವಾಗಿ ಈ ಹಿಂದಿನ ಅನೇಕ ದಶಕಗಳ ಬೆಳವಣಿಗೆಗಳನ್ನು ಗಮನಿಸಿದಾಗ ಕರ್ನಾಟಕದ ನೆಲ ಜಲ ಪರ ಹೋರಾಟಗಳಿಗೆ ಕರಾವಳಿ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಕಾವೇರಿ ಪರ ಹೋರಾಟ, ಕನ್ನಡ ಪರ ಹೋರಾಟ, ಮೇಕೆದಾಟು, ಸೇರಿದಂತೆ ನೆಲ ಜಲ ಭಾಷೆಗೆ ಸಂಬಂಧಿಸಿದ ಕರ್ನಾಟಕದ ಹೋರಾಟಗಳಿಗೆ ಕರಾವಳಿ ಭಾಗ ಅರ್ಥಾತ್ ತುಳುನಾಡಿನಲ್ಲಿ ಬೆಂಬಲ …

Read More »

ಉಪ್ಪಿನಂಗಡಿ: 500 ರೂ. ಟಿಕೆಟ್ ಖರೀದಿಸಿದ್ದ ಮೇಸ್ತ್ರಿಗೆ ಒಲಿದ 50 ಲಕ್ಷ ಬಂಪರ್ ಕೇರಳ ಲಾಟರಿ

ಉಪ್ಪಿನಂಗಡಿಯ ಮೇಸ್ತ್ರಿಯೊಬ್ಬರಿಗೆ ಕೇರಳ ಅದೃಷ್ಟ ಲಾಟರಿ ಒಲಿದಿದೆ. ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವವರು 500 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್‌ ಗೆ ಈಗ 50ಲಕ್ಷ ಬಹುಮಾನ ಸಿಕ್ಕಿದೆ. ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಸೆ.20ರಂದು ಓಣಂ ಲಾಟರಿ ಡ್ರಾ ಆಗಿದ್ದು, ಮೇಸ್ತ್ರಿ ಚಂದ್ರಯ್ಯ ಬಂಪರ್ ಬಹುಮಾನ ಗೆದ್ದಿದ್ದಾರೆ. ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿಗೆ 80 ಲಕ್ಷ ಬಹುಮಾನ ಬಂದಿತ್ತು. ಆನಂದ ಟೈಲರ್ ಎಂಬವರು …

Read More »

ಸುಳ್ಯ : ಕೆವಿಜಿ ಪ್ರಿನ್ಸಿಪಾಲ್ ರಾಮಕೃಷ್ಣ ಕೊಲೆ ಪ್ರಕರಣ- ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು.!

ಬೆಂಗಳೂರು: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌  ಪ್ರಾಂಶುಪಾಲರಾಗಿದ್ದ ಎ.ಎಸ್‌ ರಾಮಕೃಷ್ಣ  ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಡಾ.ರೇಣುಕಾ ಪ್ರಸಾದ್‌  ಸೇರಿದಂತೆ ಆರು ಮಂದಿಯನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿದೆ. ಅಂದರೆ, ಅವರನ್ನು ದೋಷಿಗಳು  ಎಂದೆ ತೀರ್ಮಾನಿಸಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸಿತ್ತು. …

Read More »

ಸಮುದ್ರದಲ್ಲಿ ಹೃದಯಾಘಾತಕ್ಕೊಳಗಾದ ಮೀನುಗಾರನ ರಕ್ಷಣೆ ಮಾಡಿದ ಕರಾವಳಿ ರಕ್ಷಣಾ ಪಡೆ

ಮಂಗಳೂರು: ಮೀನುಗಾರಿಕೆಗೆಂದು ತೆರಳಿದ್ದಾಗ ಸಮುದ್ರದಲ್ಲಿಯೇ ಹೃದಯಾಘಾತಕ್ಕೊಳಗಾದ ಮೀನುಗಾರರೊಬ್ಬರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ಒದಗಿಸಿದ ಕರಾವಳಿ ರಕ್ಷಣಾ ಪಡೆ ತಕ್ಷಣ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಪಡೆಯಲು ನೆರವಾಗಿದೆ. ‘ಬೇಬಿ ಮೇರಿ-4’ ದೋಣಿಯಲ್ಲಿ ಮೀನುಗಾರಿಕೆಂದು ತೆರಳಿದ್ದ ವಸಂತ ಎಂಬ ಮೀನುಗಾರ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಮುದ್ರದಲ್ಲಿದ್ದರು. ಆದರೆ ಮಂಗಳವಾರ ಮಧ್ಯಾಹ್ನ 3.20ರ ವೇಳೆಗೆ ಅವರಿಗೆ ತೀವ್ರ ಎದೆನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮತ್ತೊಂದು ಮೀನುಗಾರಿಕಾ ದೋಣಿಯ ಮೀನುಗಾರರು ಈ ಬಗ್ಗೆ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ …

Read More »

ಬೈಂದೂರು: ವಿದ್ಯಾರ್ಥಿನಿಗೆ ನಿಂದನೆ ಆರೋಪ – ಶಿಕ್ಷಕನ ವರ್ಗಾವಣೆಗೆ ಆಗ್ರಹ

ಬೈಂದೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳಿಗೆ ಶಿಕ್ಷಕನೊಬ್ಬ ಅವಾಚ್ಯವಾಗಿ ನಿಂದಿಸಿ ಅವಹೇಳನ ಮಾಡಿದ ಘಟನೆಗೆ ಸಂಬಂಧಿಸಿ ಆರೋಪಿ ಶಿಕ್ಷಕನ ವರ್ಗಾವಣೆಗೆ ಆಗ್ರಹಿಸಿದ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಟ್ಯೂಷನ್ ಹೋಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶಿಕ್ಷಕ ಸುಬ್ರಹ್ಮಣ್ಯ ಮುದ್ದೋಡಿ ಎಂಬುವರು ಅವಾಚ್ಯವಾಗಿ ನಿಂದಿಸಿದ್ದರೆನ್ನಲಾಗಿದೆ. ಬಳಿಕ ವಿದ್ಯಾರ್ಥಿನಿಯ ತಾಯಿಯನ್ನು ಬರಹೇಳಿ ಬೈದಿದ್ದರು ಎನ್ನಲಾಗಿದೆ. ಇದರಿಂದ ಬೆಸರಗೊಂಡ ತಾಯಿ ಮುಖ್ಯೋಪಾದ್ಯಾಯರಿಗೆ ಮತ್ತುಎಸ್.ಡಿ.ಎಂಸಿ ಅಧ್ಯಕ್ಷರಿಗೆ ದೂರು ನೀಡಿದ್ದರು. ಮಂಗಳವಾರ ಈ ಬಗ್ಗೆ ಶಾಲೆಯಲ್ಲಿ ಸಭೆ ಕರೆದ ಎಸ್.ಡಿ.ಎಂ.ಸಿ ಸಮಿತಿ, ಆರೋಪಿತ ಶಿಕ್ಷಕನ್ನು ಬೇರೆಗೆ ವರ್ಗಾಯಿಸುವಂತೆ ನಿರ್ಣಯಿಸಿದ್ದಾರೆ. …

Read More »

‘ರೋಬೋಟ್ ಸೈನ್ಸ್ ಸಿಟಿ’ಯಲ್ಲಿ ಚಹಾ ಸವಿದ ಪ್ರಧಾನಿ ಮೋದಿ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗುಜರಾತ್ ಸೈನ್ಸ್ ಸಿಟಿಯ ‘ರೊಬೊಟಿಕ್ಸ್ ಗ್ಯಾಲರಿ’ಗೆ ಭೇಟಿ ನೀಡಿದರು. ಭೇಟಿಯ ನಂತರ, ಪ್ರಧಾನಿಯವರು ‘ರೊಬೊಟಿಕ್ಸ್ ಗ್ಯಾಲರಿ’ಯ ‘ಆಕರ್ಷಕ ಆಕರ್ಷಣೆಗಳ’ ಸ್ನ್ಯಾಪ್ಶಾಟ್ಗಳನ್ನ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಂಡರು. ತಮ್ಮ ತವರು ರಾಜ್ಯಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಇದ್ದರು. ಹೈಟೆಕ್ ರೋಬೋಟ್ಗಳನ್ನ ಆಶ್ಚರ್ಯಚಕಿತಗೊಳಿಸಿದ ಪಿಎಂ ಮೋದಿ, ಒಬ್ಬರು ಬಡಿಸಿದ ಒಂದು ಕಪ್ ಚಹಾವನ್ನ ಆನಂದಿಸುತ್ತಿರುವುದು ಕಂಡುಬಂದಿದೆ. ಗುಜರಾತ್ ವಿಜ್ಞಾನ ನಗರದ ಭಾಗವಾಗಿರುವ ‘ರೊಬೊಟಿಕ್ಸ್ ಗ್ಯಾಲರಿ’ 11,000 ಚದರ …

Read More »

You cannot copy content of this page.