ಬೈಂದೂರು: ವಿದ್ಯಾರ್ಥಿನಿಗೆ ನಿಂದನೆ ಆರೋಪ – ಶಿಕ್ಷಕನ ವರ್ಗಾವಣೆಗೆ ಆಗ್ರಹ

ಬೈಂದೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳಿಗೆ ಶಿಕ್ಷಕನೊಬ್ಬ ಅವಾಚ್ಯವಾಗಿ ನಿಂದಿಸಿ ಅವಹೇಳನ ಮಾಡಿದ ಘಟನೆಗೆ ಸಂಬಂಧಿಸಿ ಆರೋಪಿ ಶಿಕ್ಷಕನ ವರ್ಗಾವಣೆಗೆ ಆಗ್ರಹಿಸಿದ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಟ್ಯೂಷನ್ ಹೋಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶಿಕ್ಷಕ ಸುಬ್ರಹ್ಮಣ್ಯ ಮುದ್ದೋಡಿ ಎಂಬುವರು ಅವಾಚ್ಯವಾಗಿ ನಿಂದಿಸಿದ್ದರೆನ್ನಲಾಗಿದೆ. ಬಳಿಕ ವಿದ್ಯಾರ್ಥಿನಿಯ ತಾಯಿಯನ್ನು ಬರಹೇಳಿ ಬೈದಿದ್ದರು ಎನ್ನಲಾಗಿದೆ. ಇದರಿಂದ ಬೆಸರಗೊಂಡ ತಾಯಿ ಮುಖ್ಯೋಪಾದ್ಯಾಯರಿಗೆ ಮತ್ತುಎಸ್.ಡಿ.ಎಂಸಿ ಅಧ್ಯಕ್ಷರಿಗೆ ದೂರು ನೀಡಿದ್ದರು. ಮಂಗಳವಾರ ಈ ಬಗ್ಗೆ ಶಾಲೆಯಲ್ಲಿ ಸಭೆ ಕರೆದ ಎಸ್.ಡಿ.ಎಂ.ಸಿ ಸಮಿತಿ, ಆರೋಪಿತ ಶಿಕ್ಷಕನ್ನು ಬೇರೆಗೆ ವರ್ಗಾಯಿಸುವಂತೆ ನಿರ್ಣಯಿಸಿದ್ದಾರೆ. ಈ ಸಂದರ್ಭ ಪ್ರತಿಕ್ರಿಯಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಮೊಗವೀರ, ಶಿಕ್ಷಕರು ತಪ್ಪುಗಳನ್ನು ಪದೇ ಪದೇ ಮಾಡುತ್ತಿದ್ದರೆ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಇಂತಹ ಘಟನೆಗಳನ್ನು ಖಂಡಿಸುವುದಾಗಿ ತಿಳಿಸಿದರು. ನಾಮ ನಿರ್ದೇಶಿತ ಸದಸ್ಯ ರಾಜೇಂದ್ರ ಬಿಜೂರು ಮಾತನಾಡಿ, ಈ ಹಿಂದೆ ಇದೆ ರೀತಿಯ ಘಟನೆಗಳು ನಡೆದಾಗ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು ಮತ್ತೆ ಇಂತಹ ಘಟನೆ ನಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ, ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ಅವರು 10ನೇ ತರಗತಿ ವಿದ್ಯಾರ್ಥಿನಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಕುರಿತು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಯಿತು. ಆಕೆಯ ತಾಯಿ ನೀಡಿದರ ದೂರಿನ ಅನ್ವಯ ಮುಂದಿನ ಕ್ರಮಕೈಗೊಳ್ಳಲ್ಲು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲು ಮುಖ್ಯಶಿಕ್ಷಕರಿಗೆ ಸೂಚಿಸಲಾಯಿತು. ಎಸ್.ಡಿ.ಎಂ.ಸಿ ಕಾರ್ಯದರ್ಶಿ, ಮುಖ್ಯಶಿಕ್ಷಕ ಗಜಾನನ ಹೆಗ್ಡೆ, ಎಸ್ಡಿಎಂಸಿ ನಾಮನಿದೇಶಿತ ಸದಸ್ಯ ರಾಜೇಂದ್ರ ಬಿಜೂರು, ಸದಸ್ಯರಾದ ಇಂದಿರಾ, ಸವಿತಾ, ಸುಶೀಲ, ಸೀತು ಹಾವಳಿ, ಶಾರದ ಮೊದಲಾದವರು ಉಪಸ್ಥಿತರಿದ್ದರು.

Check Also

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ …

Leave a Reply

Your email address will not be published. Required fields are marked *

You cannot copy content of this page.