ತಾಜಾ ಸುದ್ದಿ

ತಮಿಳುನಾಡಿಗೆ ನೀರು ಹಂಚಿಕೆ ವಿವಾದ: ಕೋರ್ಟ್ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ- ಪೇಜಾವರ ಶ್ರೀ

ಉಡುಪಿ: ರಾಜ್ಯದಲ್ಲಿ ಕಾವೇರಿ ನದಿ ನೀರು ತಮಿಳುನಾಡಿಗೆ ಹಂಚಿಕೆ ವಿವಾದ ಭುಗಿಲೆದ್ದಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿರುವುದು ಅಗತ್ಯ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಕಾವೇರಿ ನದಿ ನೀರು ತಮಿಳುನಾಡಿಗೆ ಹಂಚಿಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿಯ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕೋರ್ಟ್ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ. ಹೋರಾಟಗಳು ಜನಾಭಿಪ್ರಾಯವನ್ನು ರೂಪಿಸುತ್ತದೆ ನಿಜ.ಸಮರ್ಪಕವಾದ ವಾದ ಮಂಡಿಸಿ ನಿಜ ಸ್ಥಿತಿಯನ್ನು ಕೋರ್ಟ್ ಗೆ ವಿವರಿಸಬೇಕು. ನ್ಯಾಯಾಲಯದ ಮೇಲೆ ಪ್ರಭಾವ ಬೀಳುವುದಾದರೆ ಪ್ರತಿಭಟನೆಗಳು ಬೇಕು. ಕುಡಿಯಲು ನೀರು ಮೊದಲು …

Read More »

ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆ ಜೊತೆಗೆ ಇರುವ ಫೋಟೋ ವೈರಲ್ – ಸೆನ್ ಠಾಣೆಯಲ್ಲಿ ದೂರು ದಾಖಲು

ಪುತ್ತೂರು : ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆ ಜೊತೆ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ನವೀನ್ ರೈ ಕೈಕಾರ ಎಂಬವರು ಮಹಿಳೆಯೊಂದಿಗೆ ಇರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿರೋ ನವೀನ್ ರೈ ಕೈಕಾರ ಮಹಿಳೆಯೊಂದಿಗೆ ರೂಂ ಒಂದರಲ್ಲಿ ಸೆಲ್ಫೀ ಫೋಟೊ ವೈರಲ್ ಆಗಿದೆ. ಈ ಹಿನ್ನಲೆ ನವೀನ್ ರೈ ಕೈಕಾರ ಸೆನ್ ಪೊಲೀಸ್ ಠಾಣೆಗೆ …

Read More »

KSRTC ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಶಾಲಾ ಮಕ್ಕಳು – ವಿಡಿಯೋ ವೈರಲ್..!

ಬಂಟ್ವಾಳ: ಶಾಲಾ ಮಕ್ಕಳು ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಭಯಾನಕ ವಿಡಿಯೋ ಬಂಟ್ವಾಳದಿಂದ ವೈರಲ್ ಆಗಿದೆ. “ಶಾಲಾಮಕ್ಕಳ ಭವಿಷ್ಯ ಯಾರ ಕೈಯಲ್ಲಿ” ಎಂಬ ತಲೆಬರಹದ ಜೊತೆ ವಿಡಿಯೋ ವೈರಲ್ ಆಗಿದೆ. ಬಿಸಿರೋಡು ವಿಟ್ಲ ಎಂಬ ಬೋರ್ಡ್ ಬಸ್ ನಲ್ಲಿ ಕಂಡು ಬಂದಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ಎರಡು ಪುಟ್ ಬೋರ್ಡಿನಲ್ಲಿ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳು ನೇತಾಡುವ ದೃಶ್ಯ ಕಂಡು ಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಇಂತಹ ವಿಡಿಯೋ ಗಳು ವೈರಲ್ ಆಗಿರುವುದು ಮಕ್ಕಳ ಪೋಷಕರಿಗೆ ಹೆದರಿಕೆ ಉಂಟು ಮಾಡಿದೆ.‌ …

Read More »

ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಕುಂದಾಪುರ: ಭಾನುವಾರ ರಾತ್ರಿ ಕುಂದಾಪುರದಲ್ಲಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್(42) ಸೋಮವಾರ ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸುಮಾರು 7 ಗಂಟೆಗೆ ರಾಘವೇಂದ್ರ ಅವರು ಕಾರಿನಲ್ಲಿ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಬಳಿ ಹೋಗುತ್ತಿದ್ದರು. ಈ ವೇಳೆ ಕೆ.ಎ.51 ಎಂಜಿ 9665 ನಂಬರಿನ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತಗಾದೆ ತೆಗೆದು ಚೂರಿಯಿಂದ ರಾಘವೇಂದ್ರ ಅವರ ತೊಡೆಗೆ ಇರಿದು ಪರಾರಿಯಾಗಿದ್ದ. …

Read More »

ಕುಂದಾಪುರ: ವ್ಯಕ್ತಿಗೆ ಚೂರಿ ಇರಿದು ಪರಾರಿ…!

ಕುಂದಾಪುರ: ಕಾರಿನಲ್ಲಿ ಬಂದ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರ ತೊಡೆಗೆ ಚೂರಿ ಇರಿದು ಪರಾರಿಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಚೂರಿ ಇರಿತಕ್ಕೊಳಗಾದ ರಾಘವೇಂದ್ರ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಜೆ ಸುಮಾರು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಎದುರು ಈ ಹಲ್ಲೆ ನಡೆದಿದೆ. ರಾಘವೇಂದ್ರ ಅವರು ತನ್ನ ಕಾರಿನಲ್ಲಿ ಬಂದಿದ್ದು ಇದೇ ಸಂದರ್ಭ ಇನ್ನೊಂದು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ …

Read More »

ಬೈಕ್‌ ಅಪಘಾತ: ಮೈ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ. ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು. ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬನಿಗೆ …

Read More »

ಉಡುಪಿ: ಐದನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಮುಷ್ಕರ

ಉಡುಪಿ: ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಪೊಲೀಸ್‌ ಇಲಾಖೆಯಿಂದ ಲಾರಿ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದೆ. ಲಾರಿಗಳನ್ನು ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ತೆರವುಗೊಳಿಸುವಂತೆ ಸೂಚನೆ ನೀಡಿದ್ದು,ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನುಮುಷ್ಕರ ಕುರಿತು, ಲಾರಿ ಮಾಲಿಕರ ಸಂಘಟನೆಯ ಮುಖಂಡ ರಾಘವೇಂದ್ರ ಶೆಟ್ಟಿ ಮಾತನಾಡಿ, ನಾವು ಅಕ್ರಮವಾಗಿಯೇ ಬೇಕು ಎಂದಿದ್ದೇವೆ ಎಂಬಂತೆ ನಮ್ಮನ್ನು ಬಿಂಬಿಸಲಾಗಿದೆ. ಇದು ಶುದ್ದ ಸುಳ್ಳು, ನಮಗೆ ಅಕ್ರಮ ಬೇಡ ಸಕ್ರಮ ‌ಮಾಡಿದರೆ  ನಮ್ಮ  ಚಾಲಕರಿಗೆ ಕಿರುಕುಳ ಕೂಡಾ  ಆಗುವುದಿಲ್ಲಎಂದರು. ಗಣಿ‌ …

Read More »

ಸ್ವಚ್ಛ & ಸ್ವಸ್ತ್ ಭಾರತ್ʼ: ಸ್ವಚ್ಛತಾ ಅಭಿಯಾನದಲ್ಲಿ ಭಾಗಿ, ಕಸ ಗುಡಿಸಿ ಎಲ್ಲರಿಗೂ ಮಾದರಿಯಾದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆ ಮತ್ತು ಯೋಗಕ್ಷೇಮದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ, ಕುಸ್ತಿಪಟು ಮತ್ತು ಫಿಟ್‌ನೆಸ್ ಪ್ರಭಾವಿ ಅಂಕಿತ್ ಬೈಯನ್‌ಪುರಿಯಾ ಅವರೊಂದಿಗೆ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪಿಎಂ ಮೋದಿ ಅವರು ಸ್ವಚ್ಛತೆ, ಫಿಟ್‌ನೆಸ್ ಮತ್ತು ಯೋಗಕ್ಷೇಮದ ಮಿಶ್ರಣವನ್ನು ಒತ್ತಿಹೇಳಿದರು. ಇದು ‘ಸ್ವಚ್ಛ ಮತ್ತು ಸ್ವಸ್ತ್ ಭಾರತ’ದ ಸಾರವನ್ನು ಸಾರುತ್ತದೆ. ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಒಗ್ಗೂಡಿ ಸ್ವಚ್ಛತೆಗಾಗಿ ಪ್ರಧಾನಿ ಮೋದಿಯವರ ಕರೆಗೆ ರಾಷ್ಟ್ರವ್ಯಾಪಿ ರಾಜಕೀಯ ಮುಖಂಡರು ಒಟ್ಟುಗೂಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ …

Read More »

ಉಪ್ಪಿನಂಗಡಿ: ಎಂಡೋ ಸಂತ್ರಸ್ತ ಬಾಲಕ ಸಾವು..!

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಣಾಲು ಗ್ರಾಮದ ಪಾಂಡಿಬೆಟ್ಟು ಮನೆ ನಿವಾಸಿ, ಎಂಡೋ ಸಂತ್ರಸ್ತನಾಗಿದ್ದ ಹೃತಿಕ್ ಎಂಬ ಹನ್ನೆರಡು ವರ್ಷದ ಬಾಲಕ ಶನಿವಾರ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ತನ್ನನ್ನು ಕಾಡುತ್ತಿದ್ದ ಅನಾರೋಗ್ಯ ಉಲ್ಬಣಿಸಿ ಕಳೆದ 28 ದಿನಗಳಿಂದ ಮಂಗಳೂರಿನ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಶುಕ್ರವಾರ ಮನೆಗೆ ಹಿಂದಿರುಗಿದ್ದ, ಶನಿವಾರ ಆತ ಮೃತಪಟ್ಟನು. ಮೃತ ಬಾಲಕ ತಂದೆ, ತಾಯಿ, ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.

Read More »

ಬಜಪೆ: ಎರಡು ಮನೆಗಳ್ಳತನ ಪ್ರಕರಣ- ಇಬ್ಬರ ಬಂಧನ

ಮಂಗಳೂರು: ಬಜಪೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮನೆಗಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಕಳವು ಮಾಡಿರುವ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುರತ್ಕಲ್ ಬೊಕ್ಕಬೆಟ್ಟು ನಿವಾಸಿ ತೌಸೀಫ್ ಅಹಮ್ಮದ್ (34) ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ಎಂದು ಗುರುತಿಸಲಾಗಿದೆ. ಆರೋಪಿಗಳು ದಿನಾಂಕ 13-01- 2023 ರಂದು ಮಂಗಳೂರು ತಾಲೂಕು ಅತ್ತೂರು ಗ್ರಾಮದ ಪುಣಿಕೋಡಿಯ ರಸ್ತೆಯ ಬದಿಯಲ್ಲಿರುವ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಮತ್ತು ದಿನಾಂಕ 26-03-2021 ರಂದು ಮಂಗಳೂರು …

Read More »

You cannot copy content of this page.