ತಾಜಾ ಸುದ್ದಿ

2,000 ರೂ. ಮುಖಬೆಲೆ ನೋಟು ವಿನಿಮಯಕ್ಕೆ ನಾಳೆ ಕೊನೆ ದಿನ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದಲ್ಲಿ ಚಾಲ್ತಿಯಲ್ಲಿದ್ದ 2 ಸಾವಿರ ರೂ ಮುಖಬೆಲೆಯ ನೋಟುಗಳ ವಿನಿಮಯ ಮತ್ತು ಠೇವಣಿ ಇರಿಸಲು ನೀಡಿರುವ ಗಡುವು ನಾಳೆಗೆ (ಅ. 7) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಜನರು ಇನ್ನು ಎರಡು ದಿನದೊಳಗೆ ತಮ್ಮಲ್ಲಿರುವ 2000ರೂ. ನೋಟುಗಳನ್ನು ಬದಲಿಸಿಕೊಳ್ಳದಿದ್ದರೆ ಆ ಬಳಿಕ ಅವುಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಮೇ 19ರಂದು ಈ ಬಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿ ಸೆ.30ರೊಳಗೆ ನೋಟು ವಿನಿಮಯ ಮಾಡಿಕೊಳ್ಳುವಂತೆ ಮುನ್ಸೂಚನೆ ಕೊಟ್ಟಿದ್ದು, ಬಳಿಕ ಒಂದು ವಾರದ ಮಟ್ಟಿಗೆ ವಿಸ್ತರಿಸಿತ್ತು. ಅಕ್ಟೋಬರ್ 8ರ ನಂತರ …

Read More »

ಶಿವಮೊಗ್ಗ ಗಲಾಟೆ : ಕಲ್ಲು ತೂರಾಟ ಕತ್ತಿಯಿಂದ ಹೊಡೆಯುವುದು ಸಣ್ಣ ವಿಚಾರವೇ? – ಪೇಜಾವರಶ್ರೀ

 ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಇತ್ತೀಚಿಗೆ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಂತಹ ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ತೂರಾಟ ಕತ್ತಿ ತಗೊಂಡು ಹೊಡೆಯುವುದು ಸಣ್ಣ ವಿಚಾರನಾ? ಶಿವಮೊಗ್ಗದ ಘಟನೆ ಯಾರು ಸಣ್ಣ ವಿಚಾರವೆಂದು ಭಾವಿಸಬಾರದು. ಇಂತಹ ಗಲಭೆಗಳನ್ನು ಸರ್ಕಾರ ಮೂಲದಲ್ಲಿಯೇ ಹತ್ತಿಕ್ಕಬೇಕು ಎಂದು ತಿಳಿಸಿದ್ದಾರೆ. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು. ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ನೀತಿ ನಿಯಮವೇ …

Read More »

ಕಾರ್ಕಳ: ವಾಹನ ಢಿಕ್ಕಿ ಹೊಡೆದು ಚಿರತೆ ಸಾವು..!

ಕಾರ್ಕಳ: ವೇಗವಾಗಿ ಸಾಗುತಿದ್ದ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಸಾವಿಗೀಡಾದ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಕಾರ್ಕಳ ರಸ್ತೆಯ ಭಕ್ರೆ ಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ. ಕಾರ್ಕಳದಿಂದ ಮುದ್ರಾಡಿ ಕಡೆಗೆ ಅತ್ಯಂತ ವೇಗವಾಗಿ ಸಾಗುತ್ತಿದ್ದ ಇನ್ನೋವಾ ಕಾರು ಚಿರತೆಗೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ‌ನಡೆಸಿದರು. ಡಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆಗೆ ಪೊಲೀಸರು ಯತ್ನಿಸಿದ್ದಾರೆ.

Read More »

ಉಡುಪಿ: ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ಸಾವು- ಮೂವರ ರಕ್ಷಣೆ..!

ಉಡುಪಿ: ಉಡುಪಿ ಬೆಳಪುವಿನಲ್ಲಿರುವ ಔದ್ಯೋಗಿಕ ನಗರದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿ. ವಿಶ್ವಾಸ್ ನಾಲ್ವರೊಂದಿಗೆ ಔದ್ಯೋಗಿಕ ನಗರದಲ್ಲಿ ನೀರು ತುಂಬಿದ್ದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದರು. ತೀವ್ರ ಅಸ್ವಸ್ಥಗೊಂಡ ವಿಶ್ವಾಸ್ ನನ್ನು ಸ್ಥಳೀಯರಾದ ಜಹೀರ್ ಅಹ್ಮದ್ ಬೆಳಪು, ಉಚ್ಚಿಲದ ಜಲಾಲ್, ಹಂಝ, ಮೋಹಿಯುದ್ದೀನ್, ಶಾಹಿದ್ ರವರು ತುರ್ತಾಗಿ ಉಡುಪಿಯ ಖಾಸಗಿ …

Read More »

ಮೂಡುಬಿದಿರೆ: ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ; ಪೊಲೀಸರಿಂದ ತೆರವು

ಮೂಡುಬಿದಿರೆ: ತಾಲೂಕಿನ‌ ಪುಚ್ಚೆಮುಗೇರು ಗ್ರಾಮದಲ್ಲಿ ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ನೆಟ್ಟ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್​ ಎಂಬುವವರು ಪಂಚಾಯತ್ ಅನುಮತಿ ಪಡೆಯದೆ ಹಾಕಿರುವ ಧ್ವಜ ಇದಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಪಿಡಿಒ ಕರ್ತವ್ಯದ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಮ್ಮ ಮೇಲೆ ಕೇಸ್ ಹಾಕೋದಾಗಿ ಎಚ್ಚರಿಸಿದ್ದಾರೆ. ಇನ್ನು ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಧ್ವಜ ಕಾರಣವಾಗುತ್ತಿತ್ತು. …

Read More »

ಸುಳ್ಯ: KVG ಎಂ.ಎಸ್ ರಾಮಕೃಷ್ಣ ಕೊಲೆ ಕೇಸ್–ಡಾ. ರೇಣುಕಾ ಪ್ರಸಾದ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಹನ್ನೆರಡು ವರ್ಷಗಳ ಹಿಂದೆ ನಡೆದ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಐದು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಹೈಕೋರ್ಟ್ ನ್ಯಾಯಾಧೀಶರು ಇಂದು ತೀರ್ಪು ಪ್ರಕಟಿಸಿದ್ದಾರೆ. ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಾರದ ಹಿಂದೆ ರದ್ದುಗೊಳಿಸಿದ್ದ ಹೈಕೋರ್ಟ್ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿತ್ತು. ಡಾ.ರೇಣುಕಾ ಪ್ರಸಾದ್ ಕೆ.ವಿ. ಸೇರಿದಂತೆ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ …

Read More »

ಯುವತಿಗೆ ವಂಚನೆ ಪ್ರಕರಣ – ಬಿಗ್ ಬಾಸ್ ನಟ ಶಿಯಾಝ್ ಕರೀಂ ಬಂಧನ

ಕಾಸರಗೋಡು: ವಿವಾಹ ಭರವಸೆ ನೀಡಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ ಬಗ್ಗೆ ಲಭಿಸಿದ ದೂರಿನಂತೆ ಬಿಗ್ ಬಾಸ್ ನಟ ಶಿಯಾಝ್ ಕರೀಂ (34)ನನ್ನು ಕಾಸರಗೋಡು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ ವಿದೇಶದಿಂದ ಬಂದಿಳಿದ ಶಿಯಾಝ್ ನನ್ನು ಕಾಸರಗೋಡು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಶಿಯಾಝ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆ ಗೊಳಿಸಲಾಗಿತ್ತು. ಕಾಸರಗೋಡು ಪಡನ್ನ ದ 32 ರ ಹರೆಯದ ಯುವತಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶಿಯಾಝ್ ಬಿಗ್ ಬಾಸ್ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡಿದ್ದರು. ಎರ್ನಾಕುಲಂ ನ …

Read More »

ಪತ್ನಿಗೆ ವಿಚ್ಛೇದನೆ ನೀಡಿದ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಶಿಖರ್ ಧವನ್

ದೆಹಲಿ: ಕ್ರಿಕೆಟಿಗ ಶಿಖರ್ ಧವನ್ ಅವರು ಪತ್ನಿ ಆಯಿಷಾ ಮುಖರ್ಜಿಗೆ ವಿಚ್ಚೇದನ ನೀಡಿದ್ದಾರೆ. ದೆಹಲಿಯ ಕೌಟುಂಬಿಕ ನ್ಯಾಯಾಲಯವು ಬುಧವಾರ ಕ್ರಿಕೆಟಿಗ ಶಿಖರ್ ಧವನ್‌ಗೆ ವಿಚ್ಛೇದನ ನೀಡಿದ್ದು, ಪತ್ನಿ ಆಶಾ ಮುಖರ್ಜಿ ಅವರನ್ನು ಮಾನಸಿಕ ಕ್ರೌರ್ಯಕ್ಕೆ ಶಿಖರ್ ಧವನ್ ಒಳಪಟ್ಟಿದ್ದಾರೆ ಎಂದು ತಿಳಿಸಿದೆ.ಕ್ರಿಕೆಟಿಗ ಶಿಖರ್ ಧವನ್ ತನ್ನ ಪತ್ನಿಯ ವಿರುದ್ಧ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಸರಿಯಾಗಿದ್ದು, ಪತ್ನಿ ಹೇಳಿದ ಆರೋಪಗಳನ್ನು ವಿರೋಧಿಸಲಿಲ್ಲ ಅಥವಾ ತನ್ನನ್ನು ಸಮರ್ಥಿಸಿಕೊಳ್ಳಲು ವಿಫಲರಾದರು ಎಂದು ಆದೇಶದಲ್ಲಿ ಹೇಳಲಾಗಿದೆ. ಇನ್ನು ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿ …

Read More »

ಉಡುಪಿ : ಸಿಎಂ ಉಪಸ್ಥಿತಿಯಲ್ಲಿ ಇಂದು ವಿಶೇಷ ಸಭೆ ಆಯೋಜನೆ -ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಉಂಟಾಗಿರುವ ಮರಳು, ಕೆಂಪು ಕಲ್ಲು ಹಾಗೂ ಇನ್ನಿತರೇ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳಕರ್ ತಿಳಿಸಿದ್ದಾರೆ. ಇಂದು ಸಂಜೆ.5 ಗಂಟೆಗೆ ಬೆಂಗಳೂರಿನ ವಿಧಾನಸೌಧದ 3ನೇ ಮಹಡಿ ಕೊಠಡಿ ಸಂಖ್ಯೆ-313ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ, ಗಣಿ ಮತ್ತು ಭೂ ವಿಜ್ಞಾನ ಸಚಿವರು ಎಸ್.ಎಸ್.ಮಲ್ಲಿಕಾರ್ಜುನ್, ಉಡುಪಿ ಜಿಲ್ಲೆಯ ಹಿರಿಯ …

Read More »

ಮಂಗಳೂರು: ಹೊಟ್ಟೆಯಲ್ಲಿ ಮಲ ತುಂಬಿಕೊಂಡು ಅಸ್ವಸ್ಥಗೊಂಡಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಗರದ ಕದ್ರಿಯಲ್ಲಿ ಹೊಟ್ಟೆಯಲ್ಲಿ ಮಲ ತುಂಬಿಕೊಂಡು ಅಸ್ವಸ್ಥಗೊಂಡಿದ್ದ ಹೆಬ್ಬಾವನ್ನು ಉರಗ ರಕ್ಷಕ ಧೀರಜ್ ಗಾಣಿಗ ಅವರು ಪತ್ತೆ ಹಚ್ಚಿದ್ದಾರೆ. ಬಳಿಕ ವೈದ್ಯರ ಬಳಿಗೆ ತಂದಿದ್ದಾರೆ. 13 ಕೇಜಿ ತೂಕದ ಹೆಬ್ಬಾವಿಗೆ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮಲ ತುಂಬಿದ್ದು ಪತ್ತೆಯಾಗಿತ್ತು. ಹೀಗಾಗಿ ಮೂರು ಗಂಟೆಗಳ ಕಾಲ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿಯವರ ತಂಡ ಹೆಬ್ಬಾವಿಗೆ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಹೆಬ್ಬಾವು ಸ್ವಸ್ಥಗೊಂಡಿದೆ. ಬಳಿಕ ಹೆಬ್ಬಾವನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.

Read More »

You cannot copy content of this page.