ತಾಜಾ ಸುದ್ದಿ

ಮಂಗಳೂರು : ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್‌ ಮಂಜುನಾಥ ಹೆಗ್ಡೆ ನಾಪತ್ತೆ

ಮಂಗಳೂರು : ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್‌ ಮಂಜುನಾಥ ಹೆಗ್ಡೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಮಂಜುನಾಥ್‌ ಅವರನ್ನು ಸಿಸಿಆರ್‌ಬಿ ಘಟಕಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಿಗೆ ಜನವರಿ 13ರಂದು ವರದಿ ಮಾಡಿಕೊಳ್ಳಬೇಕಿತ್ತು. ಜನವರಿ 13ರಂದು ಮಧ್ಯಾಹ್ನ ಮನೆಯಿಂದ ಹೊರಟ ಅವರ ಮೊಬೈಲ್‌ ನಂತರ ಸ್ವಿಚ್‌ ಆಫ್‌ ಆಗಿದೆ. ‘ಸದ್ಯ ಅವರು ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಅವರ ಪತ್ತೆಗೆ ಕ್ರಮವಹಿಸಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಹಿಂದೆಯೂ ಒಮ್ಮೆ ಇದೇ ರೀತಿ ನಾಪತ್ತೆ ಯಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Read More »

ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದ ಮುಸ್ಲೀಂ ಯುವಕ, ಹಿಂದೂ ಯುವತಿ- ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು

ಬೆಳ್ತಂಗಡಿ : ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮುಸ್ಲೀಂ ಯುವಕನ ಜೊತೆ ಬಂದಿದ್ದ ಹಿಂದೂ ಯುವತಿಯ ಜೋಡಿಯನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ಬಳಿಕ ಪೋಲಿಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಈ ಜೋಡಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಂಶಯಗೊಂಡ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ, ಆಗ ಯುವಕ ಮುಸ್ಲೀಂ ಧರ್ಮದವನಾಗಿದ್ದು ಯುವತಿ ಹಿಂದೂ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆಧಾವಿಸಿ ಬಂದ ಪೊಲೀಸರು ಯುವಕ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದು ವಿಚಾರಣೆ ನಡೆಸಿದ್ದಾರೆ.

Read More »

ಉಡುಪಿ: ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶದ ಆಮಿಷ – ವ್ಯಕ್ತಿಗೆ ಒಂದು ಕೋಟಿಗೂ ಅಧಿಕ ವಂಚನೆ!

ಉಡುಪಿ: ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಒಂದು ಕೋಟಿಗೂ ಅಧಿಕ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲೆವೂರಿನ ವೆಂಕಟರಮಣ ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ಆ್ಯಪ್ ಎಪ್ಲಿಕೇಶನ್ ನಲ್ಲಿ ಸಂಪರ್ಕಿಸಿ, ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ ಟ್ರೇಡಿಂಗ್ ಆ್ಯಪ್‌ನ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಂಬಿದ ಪಿರ್ಯಾದಿದಾರರು ಲಿಂಕ್‌ನಿಂದ Choice Equity Broking Pvt Ltd ಎಂಬ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿ ನಂತರದಲ್ಲಿ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ …

Read More »

ಶಾಲಾ ವಾಹನ-ಆಂಬ್ಯುಲೆನ್ಸ್ ನಡುವೆ ಅಪಘಾತ: ರೋಗಿ ಮೃತ್ಯು, ಆರು ಮಂದಿಗೆ ಗಾಯ

ಶಾಲಾ ವಾಹನ ಹಾಗೂ ಆಂಬ್ಯುಲೆನ್ಸ್ ನಡುವೆ ಉಂಟಾದ ಅಪಘಾತದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮೃತ ಪಟ್ಟು ಐವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯದಲ್ಲಿ ನಡೆದಿದೆ. ಕಣ್ಣೂರಿನ  ಸುರೇಶ್ ಕುಮಾರ್ ಮೃತ ಪಟ್ಟವರು. ಶಿರಿಯದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಮತ್ತು ಕಣ್ಣೂರಿನಿಂದ ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದಾಗ ಅಪಘಾತ ನಡೆದಿದೆ. ಇನ್ನು ಗಾಯಗೊಂಡ ವಿದ್ಯಾರ್ಥಿಗಳನ್ನು ಕುಂಬಳೆ ಮತ್ತು ಬಂದ್ಯೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಮಂಗಳೂರಿಗೆ ಕೊಂಡೊಯ್ದರೂ ದಾರಿ …

Read More »

ಬೆಳ್ತಂಗಡಿ : ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕ ಮೃತ್ಯು..!

ಬೆಳ್ತಂಗಡಿ: ಮಕ್ಕಳ ಜೊತೆ ಆಟವಾಡುತ್ತಿದ್ದ ವೇಳೆ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಪಣಕಜೆ ನಿವಾಸಿ ಮುಹಮ್ಮದ್ ಹನೀಫ್ ಎಂಬವರ ಪುತ್ರ ಮುಹಮ್ಮದ್ ಅನಾನ್ (7) ಮೃತಪಟ್ಟ ಬಾಲಕ. ಈತ ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸೋಮವಾರ ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯ ಮಕ್ಕಳ ಜೊತೆ ಕಟ್ಟೆ ಇಲ್ಲದ ಬಾವಿಯ ಬಳಿ ಆಟವಾಡುತ್ತಿದ್ದಾಗ ಬಾಲಕ ಅನಾನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರ ಸಹಕಾರದಲ್ಲಿ …

Read More »

ಉಡುಪಿಗೆ ಬರುವವರು ಗಮನಿಸಿ : ಪರ್ಯಾಯ ಮಹೋತ್ಸವದ ಹಿನ್ನೆಲೆ, ಬದಲಿ ಮಾರ್ಗ ಸಂಚಾರದಲ್ಲಿ ಭಾರಿ ಬದಲಾವಣೆ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವು ರಸ್ತೆಗಳ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಜ.17 ರಂದು ಸಾಯಂಕಾಲ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ ಖಾಸಗಿ ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೇ ರಾ.ಹೆ- 66 ಮೂಲಕ ಕರಾವಳಿ ಜಂಕ್ಷನ್​- ಬನ್ನಂಜೆ- …

Read More »

ಮಂಗಳೂರು : ಹಠಾತ್ ಬ್ರೇಕ್ ಹಾಕಿದ ಚಾಲಕ, ಬಸ್ ನಿಂದ ಹೊರಕ್ಕೆಸೆಯಲ್ಪಟ್ಟ ಮಹಿಳೆ ಸಾವು..!

ಮಂಗಳೂರು : ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ನಿಂದ ಬಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಮಂಗಳುರು ಹೊರವಲಯದ ಬೈಕಂಪಾಡಿ ಜೋಕಟ್ಟೆ ಬಳಿ ಸಂಭವಿಸಿದೆ. ಮೃತ ಮಹಿಳೆಯನ್ನು ಈರಮ್ಮ (65) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು ‌10 ಗಂಟೆಗೆ ಈರಮ್ಮ ತನ್ನ ಮಗಳ ಜೊತೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ನಿಯಂತ್ರಣ ಕಳಕೊಂಡು ರಸ್ತೆಗೆ ಬಿದ್ದ ಈರಮ್ಮ ಅವರ ಮೇಲೆ ಬಸ್ಸಿನ ಹಿಂಬದಿಯ ಟಯರ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ …

Read More »

ಕಾರ್ಕಳ: ಜ.21 ರಿಂದ 26 ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು. ಅವರು ಬಸಿಲಿಕಾದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ …

Read More »

ಮಂಗಳೂರು: ಬೈಕಂಪಾಡಿ ಕಾರ್ಖಾನೆಯಲ್ಲಿ ಬೆಂಕಿ ಸ್ಪೋಟ : ಓರ್ವ ಮೃತ್ಯು, 6 ಜನರಿಗೆ ಗಾಯ

ಮಂಗಳೂರು: ಕಾರ್ಖಾನೆಯೊಂದಲ್ಲಿ ನಡೆದ ಬೆಂಕಿ ಅನಾಹುತಕ್ಕೆ ಕೆಲಸ ನಿರತ ಕಾರ್ಮಿಕನೋರ್ವ ಸಾವನ್ನಪ್ಪಿ , ಇತರ ಆರು ಮಂದಿ ಗಾಯಗೊಂಡ ಘಟನೆ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ನಡೆದಿದೆ. ಇಲ್ಲಿನ ಜೋನ್ಸ್ ಪೆಟ್ರೋ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕ ರೊನಾಲ್ಡ್ ಪೌಲ್ ಮೃತ ದುರ್ದೈವಿಯಾಗಿದ್ದಾರೆ. ರೊನಾಲ್ಡ್ ಪಾಲ್ ಮತ್ತು ಇತರ ಆರು ಮಂದಿ ಖಾಲಿ ತೈಲ ಟ್ಯಾಂಕ್‌ನ ದುರಸ್ಥಿ ಕಾರ್ಯ ಮಾಡುತ್ತಿದ್ದರು. ಮೇಲ್ಭಾಗದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಸ್ಥಳದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ರೊನಾಲ್ಡ್ ಅವರಿಗೆ ಬೆಂಕಿ …

Read More »

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ.!

2019ರ ಎಪ್ರಿಲ್ 1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶ ಹೊರಡಿಸಿದೆ. ಇದಾದ ಬಳಿಕ 700 ಕೋಟಿ ರು.ಗ‍ಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ.   ಎಚ್‌ಎಸ್‌ಆರ್‌ಪಿ ತಯಾರಕರಿಂದ ಹಳೆಯ ಮತ್ತು ಹೊಸ ವಾಹನಗಳಿಗೆ ಖಾಲಿ ನೋಂದಣಿ ಫಲಕಗಳನ್ನು ಖರೀದಿ ಮಾಡಬೇಕಾಗುತ್ತದೆ. ವಿತರಕರು ಈ ಫಲಕಗಳ ಮೇಲೆ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಬೇಕಾಗುತ್ತದೆ. ಇದಾದ ಬಳಿಕ ಹಳೆಯ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಮಾರಾಟ ಮಾಡಬೇಕು. ಆದರೆ ಈ …

Read More »

You cannot copy content of this page.