ತಾಜಾ ಸುದ್ದಿ

ಕಾರ್ಕಳ: ದೇವಸ್ಥಾನದ ಅರ್ಚಕ ನಾಪತ್ತೆ

ಕಾರ್ಕಳ: ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದ ಅರ್ಚಕ ವಾಗೀಶ್ (31) ಅವರು ಫೆ 20ರಿಂದ ನಾಪತ್ತೆಯಾಗಿದ್ದಾರೆ. ಫೆ.20ರಂದು ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ ಉಡುಪಿಗೆ ಹೋಗಿ ಬರುತ್ತೇನೆಂದು ತೆರಳಿದ್ದರು. ಆ ಬಳಿಕ ಮನೆಗೆ ವಾಪಾಸ್ ಬಂದಿಲ್ಲ, ಪೊನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವೇಣೂರಿನ ಬಾಹುಬಲಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ

ವೇಣೂರಿನ ಭಗವಾನ್‌ ಬಾಹುಬಲಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ ನೆರವೇರಲಿದ್ದು ನಿನ್ನೆ ಮುನಿವರ್ಯರಾದ 108 ಅಮೋಘಕೀರ್ತಿ ಮಹಾರಾಜರು &108 ಶ್ರೀ ಅಮರಕೀರ್ತಿ ಮಹಾರಾಜರ ಪುರಪ್ರವೇಶವಾಗಿದೆ. ಫೆ.22ರಿಂದ ಮಾ.1ರವರೆಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಗುರುವಾರ ಬೆಳಗ್ಗೆ ತೋರಣ ಮುಹೂರ್ತ ನಡೆದು ಬಳಿಕ ಅಪರಾಹ್ನ 3ಕ್ಕೆ ಡಿಸಿಎಂ ಡಿಕೆಶಿ ಕಾರ್ಯಕ್ರಮ ಉದ್ಭಾ.ಿಸಲಿದ್ದಾರೆ. ಬಾಹುಬಲಿಗೆ ಮೊಲದ ದಿನ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್‌ ಅಜಿಲ & ಕುಟುಂಬಸ್ಥರ ನೇತೃತ್ವದಲ್ಲಿ ಇಂದು ಸಂಜೆ 6.55ರಿಂದ 108 ಕಲಶಗಳ ಮಸ್ತಕಾಭಿಷೇಕ ಮಹಾಪೂಜೆ ನೆರವೇರಲಿದೆ.

Read More »

ಲೋಕಸಭೆ ಚುನಾವಣೆ: ಶೋಭಾ ಕರಂದ್ಲಾಜೆ ಟಿಕೆಟ್ ನೀಡದಂತೆ ಪತ್ರ ಚಳುವಳಿ :5000ಕ್ಕೂ ಹೆಚ್ಚು ಪತ್ರಗಳನ್ನ ಕಳುಹಿಸಿ ಕೇಂದ್ರ ನಾಯಕರ ಬಳಿ ಮನವಿ‌‌

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಈ ಬೆಳವಣಿಗೆಯ ಮಧ್ಯೆಯೇ ʼಗೋಬ್ಯಾಕ್ ಶೋಭಾʼ ಪತ್ರ ಅಭಿಯಾನ ಶುರುವಾಗಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಮೂರನೇ ಬಾರಿ ಸ್ಪರ್ಧಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿರುವ ಬೆನ್ನಲ್ಲೇ ʼಗೋಬ್ಯಾಕ್ ಶೋಭಾʼ ಪತ್ರ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ಆರಂಭಿಸಿದ್ದಾರೆ. ಈ ಪತ್ರವನ್ನು ರಾಷ್ಟ್ರ ನಾಯಕರಿಗೆ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಶೋಭಾ ಕರಂದ್ಲಾಜೆ ಎರಡು ಬಾರಿ ಆಯ್ಕೆಯಾಗಿದ್ದರೂ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯೇನೂ ನೀಡಿಲ್ಲ. ಈ ಹಿನ್ನಲೆಯಲ್ಲಿ …

Read More »

ಅಕ್ಷಯ್ ಕಲ್ಲೇಗ ಮರ್ಡರ್ ರಿವೇಂಜ್ ಗೆ ಸ್ಕೇಚ್ ಹಾಕುತ್ತಿದ್ದ ನಾಲ್ವರು ಪೊಲೀಸ್ ವಶಕ್ಕೆ

ಪುತ್ತೂರು: ಅಕ್ಷಯ್ ಕಲ್ಲೇಗ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿವೇಂಜ್ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದು, ಆಗಬಹುದಾಗಿದ್ದ ಕೃತ್ಯವನ್ನು ಪೊಲೀಸರು ತಡೆದಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಕಿಶೋರ್‌ ಕಲ್ಲಡ್ಕ (36), ಪುತ್ತೂರಿನ ಮನೋಜ್‌ (23), ಆಶಿಕ್‌ (28), ಸನತ್‌ ಕುಮಾರ್‌ (24) ಎಂದು ಗುರುತಿಸಲಾಗಿದೆ. ಬಂಧಿತರು ಅಕ್ಷಯ್ ಕಲ್ಲೆಗ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್ ನ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಹಾಕಿದ್ದರು. ಈ ಮೊದಲು ಮನೋಜ್ ಗೆ ಬೆದರಿಕೆ ಕರೆ ಮಾಡಿರುವ ಆರೋಪಿಗಳು ನಿನ್ನ …

Read More »

ಪೆರ್ಡೂರು ರತ್ನಾಕರ ಕಲ್ಯಾಣಿ ಯವರಿಗೆ ಗೌರವಾಭಿನಂದನೆ

ಕಿದಿಯೂರು ಹೋಟೆಲ್ ಉಡುಪಿ ಇದರ ತೃತೀಯ ಅಷ್ಟ ಪವಿತ್ರ ನಾಗಮಂಡಲ ಉತ್ಸವದ ಧಾರ್ಮಿಕ ಸಭೆ ಯಲ್ಲಿ ಸುಮಾರು 25ವರ್ಷಗಳ ಕಾಲ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೆರ್ಡೂರ್ ರತ್ನಾಕರ ಕಲ್ಯಾಣಿ ಯವರನ್ನು ಅವರ ಸೇವಾ ಹಿರಿತನವನ್ನು ಪರಿಗಣಿಸಿ ಹೋಟೆಲ್ ನ ಎಮ್ ಡಿ ಶ್ರೀ ಭುವನೇಂದ್ರ ಕಿದಿಯೂರು, ಗಣ್ಯರ ಸಮ ಕ್ಷಮದಲ್ಲಿ ಗೌರವ ವಿಸಿ ಅಭಿನಂದಿಸಿದರು. ಇತ್ತೀಚೆಗಷ್ಟೇ ಕಸಾಪ ಪುರಸ್ಕಾರವನ್ನು ಪಡೆದ ಹೆಮ್ಮೆ ಇವರದ್ದು.

Read More »

BPL ಕಾರ್ಡ್ ಹಾಗೂ APL ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಎಲ್ಲ ವರ್ಗದ ರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಜಾರಿಗೊಂಡಿರುವ ಆಯುಷ್ಮನ್ ಭಾರತ್ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್​ನಲ್ಲಿ ಪ್ರಾರಂಭಿಸಿದ್ದರು. ದೇಶದ ಪ್ರತಿಯೊಬ್ಬ ನಾಗರಿಕರಿಕನಿಗೂ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಈ ಯೋಜನೆಯಡಿ ಅರ್ಹತೆಯನ್ನು ಪರಿಶೀಲಿಸುವ ಮಾರ್ಗವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದಲೇ ಹೇಳಲಾಗಿದೆ. ಈಗಾಗಲೇ ಆಯುಷ್ಮನ್ ಭಾರತ್ ಜನ ಅರೋಗ್ಯ ಯೋಜನೆ ಹಾಗೂ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ …

Read More »

ಪುತ್ತೂರು: ಟಿಪ್ಪರ್-ಸ್ಕೂಟರ್ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಹಿಂದೂ ಮುಖಂಡ

ಪುತ್ತೂರು : ಮಧ್ಯರಾತ್ರಿ ಪುತ್ತೂರಿನಲ್ಲಿ ಟಿಪ್ಪರ್ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ದರ್ಬೆಯ ಅಶ್ವಿನಿ ಸರ್ಕಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ಅದೇ ರಸ್ತೆಯಲ್ಲಿ ಸಾಗುತಿದ್ದ ಹಿಂದೂ ಮುಖಂಡ ಅರುಣ್ ಪುತ್ತಿಲ ತಕ್ಷಣ ತಮ್ಮ ಕಾರಿನಲ್ಲಿ ಗಂಭೀರ ಗಾಯಗೊಂಡ ದಿವಾಕರ್ ಮಡಿವಾಳ ಎಂಬವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಪುತ್ತಿಲ ಪರಿವಾರದ ಪ್ರಮುಖರಾದ ಮನೀಶ್ ಕುಲಾಲ್ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More »

ಪುತ್ತೂರು: ರಾತ್ರಿ ಅನುಮಾನಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ..! 4 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು: ಮುಕ್ರಂಪಾಡಿ ಜಂಕ್ಷನ್ ನಲ್ಲಿ ತಡರಾತ್ರಿ ಅನುಮಾನಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆಯಾಗಿದ್ದು, ಕಾರಿನಲ್ಲಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಕಾರಿನಲ್ಲಿದ್ದ ಗೋಳ್ತಮಜಲು ಗ್ರಾಮ, ಬಂಟ್ವಾಳ ನಿವಾಸಿ ಕಿಶೋರ್‌ (36), ಕಬಕ ಗ್ರಾಮ, ಪುತ್ತೂರು ನಿವಾಸಿ ಮನೋಜ್‌ (23), ಕಬಕ ಗ್ರಾಮ, ಪುತ್ತೂರು ನಿವಾಸಿ ಆಶಿಕ್‌ (28) ಮತ್ತು ಪಡ್ನೂರು ಗ್ರಾಮ, ಪುತ್ತೂರು ನಿವಾಸಿ ಸನತ್‌ ಕುಮಾರ್‌ (24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ, ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ, …

Read More »

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿಗಳು;ನಕಲಿ ಚಿನ್ನ ಬದಲಿಸಿ ಪರಾರಿ

ಉಡುಪಿ: ಉಡುಪಿಯ ಕನಕದಾಸ ರಸ್ತೆಯ ಮಾರುತಿ ಜ್ಯುವೆಲರ್ಸ್ ಮಾಲೀಕನಿಗೆ ಮೂವರು ಬುರ್ಕಾದಾರಿ ಮಹಿಳೆಯರು ವಂಚಿಸಿ ನಕಲಿ ಚಿನ್ನವನ್ನು ಅಸಲಿ ಚಿನ್ನದೊಂದಿಗೆ ಬದಲಿಸಿ ಪರಾರಿಯದ ಘಟನೆ ಬೆಳಕಿಗೆ ಬಂದಿದೆ. ಉಡುಪಿಯ ಕನಕದಾಸ ರಸ್ತೆಯಲ್ಲಿರುವ ಮಾರುತಿ ಜ್ಯುವೆಲರ್ಸ್ ನಲ್ಲಿ ಫೆ.18 ರಂದು ಸಮಯ ಸಂಜೆ 7:30ಕ್ಕೆ ಬಂದ ಸುಮಾರು 35 ರಿಂದ 45 ವರ್ಷ ಪ್ರಾಯದ ಮೂವರು ಬುರ್ಕಾದಾರಿ ಮಹಿಳೆಯರು ಗ್ರಾಹಕರಂತೆ ಅಂಗಡಿಗೆ ಬಂದು 15,800 ಗ್ರಾಂ ತೂಕದ ಒಂದು ಚಿನ್ನದ ಬ್ರೆಸ್ಲೆಟ್ ಖರೀದಿಸಿದ್ದು, ಇದಕ್ಕೆ ಬದಲಾಗಿ ತಮ್ಮ ಬಳಿ ಇದ್ದ 31.490ಗ್ರಾಂ ತೂಕದ ಒಂದು ನೆಕ್ಲೆಸ್ ಮತ್ತು …

Read More »

SSLC, PUC 2024 ಪರೀಕ್ಷೆಗೆ ಡೇಟ್ ಫಿಕ್ಸ್ ; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ  ಪರೀಕ್ಷೆ ಹಿನ್ನೆಲೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಟಿ ಮಾಡಿ ವೇಳಾಪಟ್ಟಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ 1/03/24 ರಿಂದ 22/03/24 ರವರೆಗೆ ನಡೆಯುತ್ತೆ. SSLC 25/03/24 ರಿಂದ 6/4/ 24 ವರೆಗೆ ನಡೆಯುತ್ತೆ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8,96,271 ವಿದ್ಯಾರ್ಥಿಗಳು ನೋಂದಣಿ ನೋಂದಣಿ ಮಾಡಿಕೊಂಡಿದ್ದಾರೆ. ಪಿಯುಸಿಗೆ 1124 ಪರೀಕ್ಷಾ ಕೇಂದ್ರಗಳು ಇರಲಿದೆ. SSLC ಗೆ 2747 ಪರೀಕ್ಷಾ ಕೇಂದ್ರಗಳು ಇರಲಿದೆ ಎಲ್ಲ ಪರೀಕ್ಷೇಗೆ ನೋಂದಣಿ …

Read More »

You cannot copy content of this page.