ಕರಾವಳಿ

ಮಂಗಳೂರು: ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆಸ್ತಿ ವಿವರ…

ಮಂಗಳೂರು: ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವಿವಾಹಿತರಾಗಿರೋ 42 ವರ್ಷ ಪ್ರಾಯದ ಬ್ರಿಜೇಶ್ ಚೌಟ ನಾಮಪತ್ರದ ಅಫಿದವಿತ್ ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ. ಎಪ್ರಿಲ್ 4ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಸಾಂಕೇತಿಕ ನಾಮಪತ್ರದಲ್ಲಿ ಆಸ್ತಿ ವಿವರ ಘೋಷಿಸಿರುವ ಚೌಟ ಅವರು, ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂಪಾಯಿ ಆಗಿದ್ದು ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ.ಆಗಿದೆ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ. ಇದೆ. ಚೌಟಾಗೆ …

Read More »

ಮಂಗಳೂರು: ದ್ವಿಚಕ್ರ ವಾಹನ ಕಳ್ಳನೋರ್ವನ ಬಂಧನ…!!

ಮಂಗಳೂರು: ನಗರದ ಬಜಪೆ ಸಮೀಪ ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬಜಪೆ ಠಾಣೆಯ ಎಎಸ್‌ಐ ರಾಮ ಪೂಜಾರಿ ಮತ್ತು ಸಿಬಂದಿ ಸ್ವಾಮಿಲಪದವು ಎನ್ನುವಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ ‌ ಬಂಧಿತ ಆರೋಪಿ ಉಡುಪಿ ಜಿಲ್ಲೆಯ ಕುಂದಾಪುರ ಸಾಸ್ತಾನದ ಗೋಳಿಬೆಟ್ಟುಮನೆಯ ಪ್ರಹ್ಲಾದ್‌ (30) ಎಂದು ತಿಳಿಯಲಾಗಿದೆ ‌ ಮುಂಜಾನೆ ವಾಹನ ತಪಾಸಣೆ ಮಾಡುತ್ತಿರುವಾಗ ಸ್ಕೂಟರ್‌ ಅನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಇದ್ದು, ಆಗ ಆತನನ್ನು ಹಿಡಿದು ವಿಚಾರಿಸಿದಾಗ ಸ್ಕೂಟರ್‌ ಅನ್ನು ಬಂಟ್ವಾಳದ ಮೆಲ್ಕಾರ್‌ ಎಂಬಲ್ಲಿಂದ ಕಳವು ಮಾಡಿದಾಗಿ ತಿಳಿಸಿದ್ದ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಹಿಂದೆ …

Read More »

ಮಂಗಳೂರು: ಅಕ್ರಮ ಕಸಾಯಿಖಾನೆಗೆ ದಾಳಿ – 180 ಕೆ.ಜಿ. ದನದ ಮಾಂಸ ಸಹಿತ ಮೂವರ ಬಂಧನ

ಮಂಗಳೂರು: ನಗರದ ಹೊರ ವಲಯದ ವಳಚ್ಚಿಲ್ ಖಾದರ್ ಮಹಮ್ಮದ್ ಗೌಸ್ ಎಂಬಾತನ ಮನೆಯ ಶೆಡ್‌ನಲ್ಲಿ ಗುರುವಾರ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವುದನ್ನು ಗ್ರಾಮಾಂತರ ಪೊಲೀಸರು ಪತ್ತೆ ಮಾಡಿ, 180 ಕೆ.ಜಿ. ದನದ ಮಾಂಸ ಸಹಿತ ಮೂವರನ್ನು ಬಂಧಿಸಿದ್ದಾರೆ. ವಳಚ್ಚಿಲ್ ಖಾದರ್ ಮಹಮ್ಮದ್ ಯಾನೆ ಮೋನು (52), ಮಾರಿಪಳ್ಳ ಮಸೀದಿ ಬಳಿಯ ಇಸ್ಮಾಯಿಲ್ (27), ಅಡ್ಯಾರ್ ಪದವು ಮಸೀದಿ ಬಳಿಯ ಮೊಹಮ್ಮದ್ ಶವೀರ್ (18) ಬಂಧಿತರು.ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಆದೇಶದಂತೆ ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಶಿವಕುಮಾರ್, ಪಿಎಸ್‌ಐ ಅರುಣ್ ಕುಮಾರ್, …

Read More »

ಸುರತ್ಕಲ್: ಎನ್‌ಐಟಿಕೆ ನೀರು ಪೋಲು ಮಾಡಿ ಹೋಳಿ ಆಚರಣೆ – ವ್ಯಾಪಕ ಆಕ್ರೋಶ

ಸುರತ್ಕಲ್: ಎನ್‌ಐಟಿಕೆಯಲ್ಲಿ ಬಣ್ಣದ ಹಬ್ಬ ಹೋಳಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಗಿದೆ. ಹೋಳಿ ಹಬ್ಬ ಆಚರಣೆಗೆ ಯಾವುದೇ ಅಪಸ್ವರ ಇಲ್ಲ. ಆದರೆ ದುಡ್ಡುಕೊಟ್ಟು ಹೊರಗಡೆಯಿಂದ ನೀರು ಖರೀದಿಸಿ ನೀರನ್ನು ಪೋಲು ಮಾಡಿ ಹೋಳಿ ಅಚರಿಸಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಎನ್‌ಐಟಿಕೆ ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರದ ಪ್ರತಿಷ್ಠಿತ ಇಂಜನಿಯರಿಂಗ್ ಕಾಲೇಜುಗಳಲ್ಲೊಂದು. ಎನ್‌ಐಟಿಕೆ ನಡೆಯುತ್ತಿರುವುದು ಸರಕಾರದ ದುಡ್ಡಿನಿಂದ. ಇಂತಹ ಒಂದು ಪ್ರತಿಷ್ಠಿತ ಸಂಸ್ಥೆ ನೈಸರ್ಗಿಕ ಸಂಪತ್ತು ನೀರನ್ನು ಹೋಳಿ ಆಚರಣೆಗಾಗಿ ಬಳಸಿ ಪೋಲು ಮಾಡಿರುವುದು ಟೀಕೆಗೆ ಗ್ರಾಸವಾಗಿದೆ. ಒಂದೆಡೆ ನೀರಿಲ್ಲ, ಇನ್ನೊಂದೆಡೆ ದುಡ್ಡು ನೀಡಿ ಹೊರಗಡೆಯಿಂದ …

Read More »

ಉಡುಪಿ ನೇಜಾರು ಹತ್ಯಾಕಾಂಡ ಪ್ರಕರಣ: ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ

ಉಡುಪಿ ನೇಜಾರು ಹತ್ಯಾಕಾಂಡದ ಆರೋಪಿ ಪ್ರವೀಣ್ ಚೌಗುಲೆ ಅವರು ತನ್ನ ಮೇಲಿನ ಆರೋಪವನ್ನು ನ್ಯಾಯಾಲಯದಲ್ಲಿ ನಿರಾಕರಿಸಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು. ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ, ವಿಚಾರಣೆ ಎದುರಿಸುವುದಾಗಿ …

Read More »

ಮಂಗಳೂರು: ಬೈಕಂಪಾಡಿ ಸೀ ಫುಡ್ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ..!

ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇಂದು(ಗುರುವಾರ) ಬೆಳಿಗ್ಗೆ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಕೋಳಿ ಆಹಾರಕ್ಕೆ ಬೇಕಾಗಿರುವ ಮೀನು ಪದಾರ್ಥಗಳನ್ನು ಉತ್ಪಾದಿಸುವ ಶಿಹಾರ ಎಂಟರ್ಪ್ರೈಸ್ ನಲ್ಲಿ‌ ಈ ಅಗ್ನಿ ದುರಂತ ಸಂಭವಿಸಿದೆ. ತಡ ರಾತ್ರಿ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಕಾರ್ಖಾನೆ ಇಡೀಯ ವ್ಯಾಪಿಸಿದ್ದು ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಶಾರ್ಟ್ ಸರ್ಕಿಟ್ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಸಿದೆ ಎಂದು ಮಾಲಿಕ …

Read More »

ವಡಭಾಂಡೇಶ್ವರದ ಭಕ್ತವೃಂದಕ್ಕೆ ಬೇಟಿ ನೀಡಿದ ಖ್ಯಾತ ಚಲನ ಚಿತ್ರ ನಟ ವಸಿಷ್ಠ ಸಿಂಹ

ಖ್ಯಾತ ಚಲನ ಚಿತ್ರ ನಟ ವಸಿಷ್ಠ ಸಿಂಹರವರು ವಡಭಾಂಡೇಶ್ವರದ ಭಕ್ತವೃಂದಕ್ಕೆ ಬೇಟಿ ನೀಡಿದರು ಈ ಸಂದರ್ಭದಲ್ಲಿ ಭಕ್ತವೃಂದ ಅಧ್ಯಕ್ಷರಾದ ಹರೀಶ್ ಕಾಂಚನ್ ಅವರನ್ನು ಸನ್ಮಾನಿಸಿದರು ಭಕ್ತವೃಂದದ ಮಾಜಿ ಅಧ್ಯಕ್ಷರಾದ ಶರತ್ ಕುಮಾರ್ ಬೈಲಕೆರೆ ಸದಸ್ಯರಾದ ಭರತ್ ಬೈಲಕೆರೆ ,ನಿದೀಶ್ ಶ್ರೀಯನ್ , ಸುದರ್ಶನ್ ಬಂಗೇರ ಸ್ವಾಗತಿಸಿ ಬರಮಾಡಿಕೊಂಡರು

Read More »

ಸುಳ್ಯ: ಕೂಜಿಮಲೆಯಲ್ಲಿ ಅಪರಿಚಿತ ಮಹಿಳೆ ಓಡಾಟ- ಮತ್ತೆ ನಕ್ಸಲ್‌ ಸಂಚಾರದ ಶಂಕೆ

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿಭಾಗದ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು ಆಕೆ ನಕ್ಸಲ್ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಲಾಗಿದೆ. ಸುಳ್ಯ ತಾಲೂಕಿನ ಗಡಿಗ್ರಾಮ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ 12ರ ಬಳಿಕ ಅಪರಿಚಿತ ಮಹಿಳೆ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬ್ಬಂದಿ ನೋಡಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಹಿನ್ನಲೆ ನಕ್ಸಲ್ ನಿಗ್ರಹ ಪಡೆ ಆಗಮಿಸಿ ಶೋಧ ನಡೆಸಿದರು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ. …

Read More »

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಿಸಿಬಿ ಬಲೆಗೆ – 6.325 ಕೆಜಿ ಮಾದಕದ್ರವ್ಯ ವಶಕ್ಕೆ

ಮಂಗಳೂರು: ವಿಶಾಖಪಟ್ಟಣದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿರುವ ಸಿಸಿಬಿ ಪೊಲೀಸರು 6.325 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದ ನೀರುಮಾರ್ಗ ಜಂಕ್ಷನ್, ಬೇಬಿ ಕಾಂಪ್ಲೆಕ್ಸ್ ನಿವಾಸಿ ನಿಶಾಂತ್ ಶೆಟ್ಟಿ(35) ಬಂಧಿತ ಆರೋಪಿ. ಆರೋಪಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ. ‌ಬಳಿಕ ಅದನ್ನು ಸಣ್ಣಸಣ್ಣ ಪ್ಯಾಕೆಟ್ ಗಳನ್ನಾಗಿ ಮಾಡಿಕೊಂಡು ಮಂಗಳೂರಿನ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ತೊಕ್ಕೊಟ್ಟು …

Read More »

ಉಡುಪಿ: ನಾಲ್ವರ ಹತ್ಯೆ ಪ್ರಕರಣ – ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಕೋರ್ಟ್ ಗೆ ಕರೆತಂದ ಪೊಲೀಸರು

ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರವೀಣ್‌ ಚೌಗುಲೆಯ ಚಾರ್ಜ್‌ (ಆಪಾದನೆ ವಾಚಿಸುವ) ಪ್ರಕ್ರಿಯೆ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಇಂದು ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಮಾರ್ಚ್ 7ರಂದು ನ್ಯಾಯಾಧೀಶ ದಿನೇಶ್‌ ಹೆಗ್ಡೆ, ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಆಪಾದನೆ ವಾಚಿಸಲು ಬೇಕಾದ ಸಾಕ್ಷ್ಯಾಧಾರಗಳಿವೆ ಎಂದು ತೀರ್ಮಾನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್‌ ಚೌಗುಲೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ …

Read More »

You cannot copy content of this page.