ಕರಾವಳಿ

ಮಂಗಳೂರು : ಹಿಂದೂ ಜಾಗರಣ ವೇದಿಕೆ ಮುಖಂಡ ಅಕ್ಷಯ್ ರಜಪೂತ್ ಬಂಧನ – ಗಡಿಪಾರು

ಮಂಗಳೂರು : ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ಸದಸ್ಯ ಅಕ್ಷಯ್ ರಾಜಪೂತ್ ನನ್ನು ರಾತ್ರಿ ವೇಳೆ ಪೋಲೀಸರು ಮನೆಯಿಂದ ಬಂಧಿಸಿ ಹಾವೇರಿ ಜಿಲ್ಲೆಗೆ ಗಡಿಪಾರು ನಡೆಸುವ ಸಿದ್ದತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ ತೀವ್ರವಾಗಿ ಖಂಡಿಸಿದೆ. ಸದ್ಯ ಅಕ್ಷಯ್ ಅವರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ‌ ಲಭ್ಯವಾಗಿದೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ .

Read More »

ಉಡುಪಿ: ಅನುಮತಿ ಇಲ್ಲದೇ ಬೆಜೆಪಿಯ ಪೋಸ್ಟರ್‌ ಅಭಿಯಾನ: ತೆರವುಗೊಳಿಸಿದ ಚುನಾವಣಾಧಿಕಾರಿಗಳು

ಉಡುಪಿ: ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ದಿಂದನಗರದ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್ ಅಭಿಯಾನ ಆರಂಬಿಸಿದ್ದರು.ಆದರೆಯಾವುದೇ ಪರವಾನಿಗೆ ಪಡೆಯದೆ ಬಿಜೆಪಿ ಯುವಮೋರ್ಚಾ ಪೋಸ್ಟರ್ ಗಳನ್ನ ಅಂಟಿಸಿರುವುದನ್ನು ಅಧಿಕಾರಿಗಳು, ಪೊಲೀಸರು ತೆರವುಗೊಳಿಸಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಅಧಿಕಾರಿಯಿಂದ ಪೂರ್ವಾನುಮತಿಯನ್ನು ಪಡೆಯದೆ ಹಾಗೂ ಕರಪತ್ರದಲ್ಲಿ ಮುದ್ರಣ ಕುರಿತು ಪ್ರಕಾಶಕರ ವಿವರ ನಮೂದಿಸದೇ ಪೋಸ್ಟರ್ ಅಭಿಯಾನ ನಡೆಸಿದ ಬಿಜೆಪಿ ಯುವ ಮೋರ್ಚಾದ ಮುಖಂಡರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನವನ್ನು ನಗರದಲ್ಲಿ ಎ.23ರಂದು …

Read More »

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಮಣಿಪಾಲ: ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 405 ಸೂಕ್ಷ್ಮ ಮತಗಟ್ಟೆಗಳಿದ್ದು, ಅವುಗಳಲ್ಲಿ 203 ಉಡುಪಿ, 202 ಚಿಕ್ಕಮಗಳೂರಿನಲ್ಲಿದೆ. ಈ ಎಲ್ಲ ಮತಗಟ್ಟೆಗೂ ಸಿಎಪಿಎಫ್ ಸಿಬಂದಿ ನಿಯೋಜನೆ ಮಾಡಲಾಗಿದೆ. ಹಾಗೆಯೇ 1270 ಮತಗಳಿಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಎಲ್ಲ ಚಟುವಟಿಕೆಗಳನ್ನು ಆಯೋಗದ ದಿಲ್ಲಿ ಮತ್ತು ಬೆಂಗಳೂರಿನ ಕಚೇರಿಯಲ್ಲಿ ಪರಿವೀಕ್ಷಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನೇಜಾರು, ಹಾಲಾಡಿ ಮತ್ತು ಕುಂದಾಪುರದಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. 1,270 ಮತಗಟ್ಟೆಗಳಿಗೆ …

Read More »

ಮಣಿಪಾಲ: ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು..!

ಮಣಿಪಾಲ: ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಪಶ್ಚಿಮ ಬಂಗಾಳ ಮೂಲದ ಆಶೀಮ್ ಮಂಡಲ್(22) ಎಂದು ಗುರುತಿಸಲಾಗಿದೆ. ಮಣಿಪಾಲ ಗಾರ್ಮೆಂಟ್ ಕಂಪನಿಯ ಉದ್ಯೋಗಿ, ಪಶ್ಚಿಮ ಬಂಗಾಳ ಮೂಲದ ಆಶೀಮ್ ಮಂಡಲ್ ಜೀವನದಲ್ಲಿ ಜಿಗುಪ್ಪೆಗೊಂಡಯು ಮಧ್ಯಾಹ್ನ ವೇಳೆ ವಾಸವಿರುವ ರೂಮಿನ ಶೌಚಾಲಯದಲ್ಲಿ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಲ್ಪೆ ಬೀಚ್‌ನಲ್ಲಿ ಸುರಕ್ಷತಾ ಕ್ರಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ

ಉಡುಪಿ : ಮಲ್ಪೆ ಬೀಚ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಬೀಚ್ ಪ್ರದೇಶದಲ್ಲಿ ಸೂಚಿಸಿರುವಂತಹ ಸುರಕ್ಷತಾ ಮಾಹಿತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮದ್ಯಪಾನ ಮಾಡಿ ನೀರಿಗೆ ಇಳಿಯುವುದು, ಕಡಲ ತೀರದ ಅನಧಿ ದೂರದಲ್ಲಿ ಈಜುವುದು ಹಾಗೂ ಅಪಾಯವಿರುವಂತಹ ಸ್ಥಳದಲ್ಲಿ ನೀರಿನ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಪ್ರವಾಸಿಗರ ಮೇಲೆ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Read More »

ಉಡುಪಿ: ಡಿವೈಡರ್‌ಗೆ ಬೈಕ್‌ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಉಡುಪಿ: ಬೈಕ್ ಪಲ್ಟಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಸಮೀಪ  ನಡೆದಿದೆ. ವಿಕಾಸ್ ಆಚಾರ್ಯ (22) ಅಪಘಾತದಲ್ಲಿ ಮೃತಪಟ್ಟ ಯುವಕ. ಕೋಟ ಮಣೂರು ಸುರೇಶ್ ಆಚಾರ್ಯ ಅವರ ಪುತ್ರ ವಿಕಾಸ್ ಸೋಮವಾರ ಮಧ್ಯರಾತ್ರಿ 1:30 ರ ಸುಮಾರಿಗೆ ಸಾಸ್ತಾನದಿಂದ ಕೋಟ ಕಡೆ ಬರುತ್ತಿದ್ದ. ಕೋಟ ಗುಜರಿ ಅಂಗಡಿ ಸಮೀಪ ಬರುವಾಗ ವಿಕಾಸ್‌ಗೆ ಬೈಕ್‌ನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಪಲ್ಟಿಯಾಗಿ ಗಂಭೀರ ಗಾಯಗೊಂಡ ವಿಕಾಸ್‌ ತೀವ್ರ ರಕ್ತಸ್ರಾವವಾಗಿ …

Read More »

ಮೀನುಗಾರಿಕೆ ವೇಳೆ ಬೋಟ್ ಚಾಲಕರೋರ್ವರು ನಾಪತ್ತೆ…!!

ಮಂಗಳೂರು: ಸಮುದ್ರದ ಮಧ್ಯೆ ಮೀನುಗಾರಿಕೆ ವೇಳೆ ಬೋಟ್ ಚಾಲಕರೋರ್ವರು ನಾಪತ್ತೆಯಾದ ಘಟನೆ ಸಂಭವಿಸಿದೆ. ಮುನೀಶ್‌ ಕುಮಾರ್‌ (32) ನಾಪತ್ತೆಯಾದ ಬೋಟ್ ಚಾಲಕ ಎಂದು ತಿಳಿಯಲಾಗಿದೆ. ಮುನೀಶ್‌  ಅವರು ದಕ್ಷಿಣ ದಕ್ಕೆಯಲ್ಲಿ ಇರ್ಫಾನ್‌ ಅವರ ಮಾಲಕತ್ವದ ಕುವತ್‌ ಹೆಸರಿನ ಬೋಟ್‌ನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮುನೀಶ್ ಅವರು 10 ಗಂಟೆಗೆ ಇತರ 10 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆ ರಾತ್ರಿ ತೆರಳಿದ್ದರು ನಂತರ ಮರುದಿನ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಸಮುದ್ರಕ್ಕೆ ಮುನೀಶ್ ಬಿದ್ದಿದ್ದಾರೆ. ಬಳಿಕ ಬೋಟ್ ನಲ್ಲಿದ್ದ ಇತರೆ ಮೀನುಗಾರರು ಹುಡುಕಾಟ ನಡೆಸಿದರೂ ಮುನೀಶ್‌ …

Read More »

ಉಳ್ಳಾಲ : ಮಲಗಿದ್ದಲ್ಲೇ ಹೃದಯಾಘಾತ- ನವವಿವಾಹಿತ ಸಾವು..!

ಉಳ್ಳಾಲ : ಮಲಗಿದ್ದಲ್ಲೇ ಹೃದಯಾಘಾತವಾಗಿ ನವವಿವಾಹಿತ ಮೃತಪಟ್ಟ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ. ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು. ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ

Read More »

ಮಣಿಪಾಲ: ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ – ಮೂವರಿಗೆ ಗಾಯ

ಮಣಿಪಾಲ: ಸ್ಕೂಟರ್ ಹಾಗೂ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದ ಅಲ್ಕಾ ಹಾಗೂ ಸಹಸವಾರೆ ನಯನಾ ಅವರು ಸ್ಕೂಟರ್‌ನಲ್ಲಿ ಬಿಗ್ ಬಾಸ್ ಹೊಟೇಲ್ ಸಮೀಪ ಇರುವ ಯು ಟರ್ನ್ ತಲುಪುತ್ತಿದ್ದಂತೆ ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಅತೀ ವೇಗದಿಂದ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ.ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ತ್ವನೀರ್ ಕೌರ್‌ಗೂ ಡಿಕ್ಕಿ ಹೊಡೆದಿದ್ದಾನೆ. ಮೂರು ಮಂದಿ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ …

Read More »

ಕ್ಯಾಪ್ಟನ್‌ ಬ್ರಿಜೇಶ್ ಚೌಟರು ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಬಗ್ಗೆ ಪ್ರಧಾನಿ ಮೆಚ್ಚುಗೆ

ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಬ್ರಿಜೇಶ್ ಚೌಟ ಸೇನಾ ಹಿನ್ನೆಲೆ ಹೊಂದಿರುವ ಅಭ್ಯರ್ಥಿ ಎನ್ನುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಪ್ರತಿ ದಾಳಿ ಕಾರ್ಯಾಚರಣೆಗೆ ಹೆಸರಾಗಿರುವ ಗೋರ್ಖಾ ರೆಜಿಮೆಂಟಿನಲ್ಲಿ ನೀವು ಸೇವೆಗೈದಿದ್ದೀರಿ ಎನ್ನುವುದು ಶ್ಲಾಘನೀಯ. ಅಲ್ಲದೆ, ಮಂಗಳೂರು ಲಿಟ್ ಫೆಸ್ಟ್ ಆಯೋಜಿಸುವ ಮೂಲಕ ನೀವು ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆಯನ್ನು ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ …

Read More »

You cannot copy content of this page.