ದಕ್ಷಿಣ ಕನ್ನಡ

ಮಂಗಳೂರು: ಆಟೋ‌ ಸ್ಫೋಟಗೊಂಡ ಸ್ಥಳಕ್ಕೆ ಎನ್ಐಎ ತಂಡ ಆಗಮನ ಪರಿಶೀಲನೆ

ಮಂಗಳೂರು : ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ನಾಲ್ವರು ಅಧಿಕಾರಿಗಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಭೇಟಿ ನೀಡಿದೆ. ಮಂಗಳೂರಿನ ಗರೋಡಿ ಸಮೀಪ ನಿನ್ನೆ ಸಂಜೆ ಆಟೋ ರಿಕ್ಷಾ ಸಂಭವಿಸಿದ ಸ್ಪೋಟಕ ಪ್ರಕರಣದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಂಗಳೂರಿನಲ್ಲಿ ನಿನ್ನೆ ಸಂಜೆ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ನಿನ್ನೆ ಸ್ಪೋಟದಲ್ಲಿ ಭಾಗಿಯಾದವನ ಮತ್ತೊಂದು ಹೆಸರು ಪತ್ತೆಯಾಗಿದ್ದು, ನಿನ್ನೆ ಸ್ಪೋಟದಲ್ಲಿ ಭಾಗಿಯಾದವನ …

Read More »

ಮಂಗಳೂರು ಆಟೋ ರಿಕ್ಷಾ ಸ್ಪೋಟ ಪ್ರಕರಣ: ಪ್ರಯಾಣಿಕನ ಮೇಲೆ ಹೆಚ್ಚಿದ ಅನುಮಾನ, ತನಿಖೆಗೆ 3 ವಿಶೇಷ ತಂಡಗಳ ರಚನೆ

ಮಂಗಳೂರು: ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆ ವೇಳೆ ಆಟೋದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು​ ಬೋಲ್ಟ್​​, ಸರ್ಕ್ಯೂಟ್​​ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿದೆ. ಸಿಕ್ಕ ವಸ್ತುಗಳನ್ನು ಎಫ್ಎಸ್ಎಲ್ ತಂಡ ಪರೀಕ್ಷೆಗೊಳಪಡಿಸಿದೆ. ಈ ನಡುವೆ ಆಟೋದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹಲವು ಅನುಮಾನಗಳು ವ್ಯಕ್ತವಾಗತೊಡಗಿವೆ. ಈತ …

Read More »

ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣ; ಇದು ಉಗ್ರರ ಕೃತ್ಯ ಎಂದ ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ-ಐಜಿಪಿ ಪ್ರವೀಣ್ ಸೂದ್ ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ್ದು, ಇದು ಅನಿರೀಕ್ಷಿತ ಸ್ಫೋಟವಲ್ಲ ಉಗ್ರರ ಕೃತ್ಯ ಎಂದು ತಿಳಿಸಿದ್ದಾರೆ. ಮಂಗಳೂರಿನ ನಾಗರಿ ಬಳಿ ನಿನ್ನೆ ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ್ದ ನಿಗೂಢ ಸ್ಫೋಟ ಪ್ರಕರಣ ಸಂಬಂಧ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಡಿಜಿಪಿ, ಇದು ಉಗ್ರರ ಕೃತ್ಯವಾಗಿದ್ದು, ಉದ್ದೇಶಪೂರ್ವಕವಾಗಿ ಹಾನಿ ಉಂಟು ಮಾಡಲು ಪ್ಲಾನ್ ಮಾಡಲಾಗಿತ್ತು. ಸಾವು, ನೋವು ಹಾನಿ ಉಂಟು ಮಾಡಲು ದುಷ್ಕರ್ಮಿಗಳು ಯೋಜನೆ ರೂಪಿಸಿದ್ದರು ಎಂದು ತಿಳಿಸಿದ್ದಾರೆ. ಕರ್ನಾಟಕ ಪೊಲೀಸರಿಂದ ಸೂಕ್ಷ್ಮ ಹಾಗೂ ಆಳವಾದ ತನಿಖೆ …

Read More »

ಹೆಸರಾಂತ ಯಕ್ಷಗಾನ ಕಲಾವಿದ ಆತ್ಮಹತ್ಯೆ..!

ಉಳ್ಳಾಲ: ಯಕ್ಷಗಾನದಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿದ್ದ ಹೆಸರಾಂತ ಭಾಗವತರ್ವರು ನೇಣಿಗೆ ಕೊರಳೊಡ್ಡಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ.ಹೆಸರಾಂತ ಯಕ್ಷಗಾನ ಕಲಾವಿದರಾಗಿದ್ದ ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರಿಂದು ಮೂಳೂರು ಬಳಿ ಬಾಡಿಗೆ ಮನೆಯಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಹಿಂದೆ ಬಪ್ಪನಾಡು ಹಾಗೂ ಇತರ ಇತರ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕೀರ್ತನ್, ಕೊರೊನ ಸಂಧರ್ಭ ಮತ್ತು ನಂತರ ಚಿಕ್ಕಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದರು. ದಂಪತಿ ಕಲಹ ಹಾಗೂ ಕುಡಿತದ ಚಟ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.

Read More »

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ನಡೆಸಿ ಗರ್ಭಾವತಿಯನ್ನಾಗಿ ಮಾಡಿದ ತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ. ವೆಂಕಟೇಶ ಕಾರಂತ ಅವರು ತುಂಬೆಯಲ್ಲಿ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಗೆ ವೆಂಕಟೇಶ ಕಾರಂತ ಅವರು ಮಲತಂದೆ ಸಂಬಂಧ. ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿಯೂ …

Read More »

ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದ ಕಿರಾತಕ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಕಾಸರಗೋಡು (ಕೇರಳ): ಮದರಸಾಕ್ಕೆಂದು ಬರುತ್ತಿದ್ದ ಆ ಪ್ರಾಪ್ತ ವಯಸ್ಕಳನ್ನು ಮೇಲೆತ್ತಿ ರಸ್ತೆಗೆ ಎಸೆದ 31 ವರ್ಷದ ವ್ಯಕ್ತಿಯನ್ನು ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದ ಬೆಳಿಗ್ಗೆ ಎಂಟು ವರ್ಷದ ಬಾಲಕಿ ತನ್ನ ಚಿಕ್ಕಪ್ಪನನ್ನು ಕರೆದೊಯ್ಯಲು ಮದರಸಾದ ಹೊರಗೆ ಕಾಯುತ್ತಿದ್ದಾಗ ಈ ಭಯಾನಕ ಘಟನೆ ಸಂಭವಿಸಿದೆ. ಘಟನೆ ಸಂಬಂಧ ಸ್ಥಳೀಯ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಕೆಯ ಸಂಬಂಧಿಕರು ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, …

Read More »

ನ.19: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

ಮಂಗಳೂರು:- ಕ್ರಿಸ್ತ ಶಕ 1837 ರಲ್ಲಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುವುದು, ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ತಿಳಿಸಿದರು.ಅವರು ನ.15ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ …

Read More »

BIGG NEWS : ಸುಬ್ರಹ್ಮಣ್ಯದಲ್ಲಿ ಘೋರ ದುರಂತ : ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು

ದಕ್ಷಿಣ ಕನ್ನಡ : ಕಡಬ ತಾಲೂಕಿನ ಯೇನೆಕಲ್ಲಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಇಬ್ಬರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯೇನೆಕಲ್ಲಿನ ಮುಖ್ಯರಸ್ತೆಯ ಸೇತುವೆಯ ಕೆಳಭಾಗದಲ್ಲಿ ಹೊಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಧರ್ಮಪಾಲ (46) ಹಾಗೂ ಚೊಕ್ಕಾಡಿಯ ಬೆಳ್ಳಪ್ಪ (49) ಎಂದು ಗುರುತಿಸಲಾಗಿದೆ. ಹೊಳೆಯಲ್ಲಿದ್ದ ಪಂಪಿನ ಪೂಟ್ ವಾಲ್ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆಂದು ಶಂಕಿಸಲಾಗಿದ್ದು, ಸದ್ಯ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿರವರಿಗೆ ಮಾತೃ ವಿಯೋಗ

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪುರವರ ಮಾತೃಶ್ರೀಯವರಾದ ಶ್ರೀಮತಿ ಕಲ್ಯಾಣಿ ಶೆಟ್ಟಿ ಯವರು ಇಂದು ದೈವಾದೀನರಾಗಿದ್ದಾರೆ. ಮೃತರು ಉಳಿದೊಟ್ಟು ದಿವಂಗತ ಬಿರ್ಮು ಶೆಟ್ಟಿ ಅವರ ಮಗಳು, ಪಡ್ಯಾರ ಮನೆ ದಿವಂಗತ ಸೀತಾರಾಮ ಶೆಟ್ಟಿ ಅವರ ಪತ್ನಿಯಾಗಿದ್ದು ಇವರಿಗೆ 82ವರ್ಷ ಪ್ರಾಯವಾಗಿದ್ದು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಇಂದು ಮದ್ಯಾಹ್ನ ನಿಧನರಾಗಿದ್ದಾರೆ. ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ದಿನಾಂಕ 16-11-2022 ಬುಧವಾರ ಸಂಜೆ 6.00ಗಂಟೆಗೆ ಕೋಟೆಕಾರು ಬೀರಿ ಸಮೀಪದ ನೆತ್ತಿಲ ಮನೆಯಲ್ಲಿ ಮೃತರ ಅಂತಿಮ ವಿಧಿ ವಿಧಾನ ಗಳು ನಡೆದು ಬಳಿಕ …

Read More »

ಪೊಲೀಸರು ದಂಡ ಹಾಕಿದ್ದಾರೆಯೇ? ಇನ್ನುಮುಂದೆ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಬೇಕಾಗಿಲ್ಲ:ಇಲ್ಲಿದೆ ನೋಡಿ ಹೊಸ ಪ್ಲಾನ್

ಸಂಚಾರ ನಿಯಮ ಉಲ್ಲಂಘನೆಯ ಕಾರಣದಿಂದಾಗಿ ಪೊಲೀಸರು ದಂಡ ಹಾಕುವುದು ಸಾಮಾನ್ಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆ. ಒಂದೊಮ್ಮೆ ದಂಡ ಹಾಕಿದ ಸಂದರ್ಭದಲ್ಲಿ ವಾಹನ ಸವಾರರಲ್ಲಿ ಹಣ ಇಲ್ಲದಿದ್ದರೆ ಪೊಲೀಸ್ ಠಾಣೆಗೋ ಅಥವಾ ನ್ಯಾಯಾಲಯಕ್ಕೋ ತೆರಳಿ ಕಟ್ಟಬೇಕಿತ್ತು. ಇದು ಸಾಮಾನ್ಯ ಜನರಿಗೆ ಕಷ್ಟವೂ ಹಾಗೂ ಕೆಲವರಿಗೆ ಹಿಂಜರಿಕೆಯೂ ಆಗಿತ್ತು. ಈಗ ಪೊಲೀಸ್ ಇಲಾಖೆ ಹೊಸ ಪ್ರಯೋಗವನ್ನು ಜಾತಿಗೆ ತರಲು ಮುಂದಾಗಿದೆ. ಮಂಗಳೂರು ನಗರ ಪೊಲೀಸ್  ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕವನ್ನು  ಅಂಚೆ ಕಚೇರಿ ಗಳಲ್ಲಿ ಪಾವತಿ ಸೌಲಭ್ಯವನ್ನು ಇಂದು ಉದ್ಘಾಟನೆ …

Read More »

You cannot copy content of this page.